Radhika Pandit Celebration : ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ತಾರಾ ಜೋಡಿ ಅಂದ್ರೇ ರಾಧಿಕಾ ಮತ್ತು ಯಶ್. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್-2 ಗೆಲುವಿನ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮನಗೆದ್ದಿದ್ದರೇ, ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಯಶ್ ಜೊತೆ ಮುದ್ದು ಮುದ್ದಾಗಿ ಪೋಟೋ ಶೇರ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡ್ತಿದ್ದಾರೆ. ಸದ್ಯ ಸಿನಿಮಾ ಲೋಕದಿಂದ ಬ್ರೇಕ್ ಪಡೆದಿರೋ ರಾಧಿಕಾ ಪಂಡಿತ್ ಫುಲ್ ಟೈಂ ಮಮ್ಮಿಯಾಗಿ ತಾಯ್ತನವನ್ನು ಎಂಜಾಯ್ ಮಾಡುತ್ತಾ ಮಕ್ಕಳ ಜೊತೆ ಸಮಯ ಕಳೆಯುತ್ತಾ, ಯಶ್ ಗೆ ಸಪೋರ್ಟ್ ಮಾಡ್ತಿದ್ದಾರೆ.

ಈ ಮಧ್ಯೆ ಪ್ರತಿ ವರ್ಷ ದಂತೆ ಯಶ್ ರಾಧಿಕಾ ದಂಪತಿ ಈ ವರ್ಷವೂ ಅದ್ದೂರಿಯಾಗಿ ವರಮಹಾಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಗ್ರ್ಯಾಂಡ್ ಲಕ್ಷ್ಮೀ ಪೂಜೆಯ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಾತ್ರವಲ್ಲ ಈ ವರ್ಷ ಲಕ್ಷ್ಮೀ ಪೂಜೆಗೆ ನನಗೆ ಯಾರು ನೆರವಾಗಿದ್ದಾರೆ ನೋಡಿ ಎಂದು ಕ್ಯಾಪ್ಸನ್ ಸಹ ನೀಡಿದ್ದಾರೆ.

ಮಾತ್ರವಲ್ಲ ಪುತ್ರಿ ಆಯ್ರಾ ಪೂಜೆಗೆ ಹೆಲ್ಪ್ ಮಾಡಿದ್ದಕ್ಕಿಂತ ತಿಂದಿದ್ದೇ ಜಾಸ್ತಿ ಎಂದು ಮಗಳ ಕಾಲೆಳೆದಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಪೂಜೆ ವೇಳೆ ಪುತ್ರಿ ಆಯ್ರಾ ರಾಧಿಕಾ ಕಾಲ ಮೇಲೆ ಕೂತು ಹಲ್ವಾ ತಿನ್ನುತ್ತಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ರಾಧಿಕಾ ಹಾಗೂ ಯಶ್ ಇತ್ತೀಚಿಗೆ ಖರೀದಿಸಿದ ಹೊಸ ಮನೆಯಲ್ಲೇ ಅದ್ದೂರಿ ವರಮಹಾಲಕ್ಷ್ಮೀ ಪೂಜೆ ನಡೆದಿದ್ದು, ಯಶ್ ಹಾಗೂ ರಾಧಿಕಾ ಕುಟುಂಬಸ್ಥರು ಮಾತ್ರ ಪಾಲ್ಗೊಂಡಿದ್ದರಂತೆ.

ರಾಧಿಕಾ ಪಂಡಿತ್ ಹಾಗೂ ಯಶ್ ಪಾಲಿಗೆ ಮಹಾಲಕ್ಷ್ಮಿ ಹಬ್ಬ ತುಂಬಾ ಸ್ಪೆಶಲ್. ಇದೇ ಕಾರಣಕ್ಕೆ ಯಶ್ ರಾಧಿಕಾ ಪ್ರತಿವರ್ಷವೂ ವರಮಹಾಲಕ್ಷ್ಮೀ ಹಬ್ಬವನ್ನು ಸ್ಪೆಶಲ್ ಆಗಿ ಆಚರಿಸುತ್ತಾರೆ. ಧಾರಾವಾಹಿಯಲ್ಲಿ ನಟಿಸುವ ವೇಳೆ ರಾಧಿಕಾರನ್ನು ವರಮಹಾಲಕ್ಷ್ಮೀ ಹಬ್ಬದ ವೇಳೆಯೇ ಯಶ್ ತಮ್ಮ ಮನೆಗೆ ಕರೆದೊಯ್ದು ತಾಯಿಗೆ ಪರಿಚಯ ಮಾಡಿಸಿದ್ದರಂತೆ.
ಸದ್ಯ ಕೆಜಿಎಫ್-೨ ಗೆಲುವಿನ ಖುಷಿಯಲ್ಲಿರುವ ಯಶ್ ತಮ್ಮ ಮುಂದಿನ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಹೀಗಾಗಿ ಯಶ್ ಈ ಭಾರಿ ತಮ್ಮ ಮನೆಯ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡಿಲ್ಲವಂತೆ. ಹೀಗಾಗಿ ರಾಧಿಕಾ ಪುತ್ರಿ ಆಯ್ರಾ ಹಾಗೂ ಯಥರ್ವ್ ಜೊತೆ ಹಬ್ಬ ಆಚರಿಸಿದ ಪೋಟೋಸ್ ಶೇರ್ ಮಾಡಿದ್ದಾರೆ. ಇತ್ತೀಚಿಗಷ್ಟೇ ಯಶ್ ಮತ್ತು ರಾಧಿಕಾ ಯುರೋಪ್ ರಾಷ್ಟ್ರಗಳಿಗೆ ಪ್ರವಾಸಕ್ಕೆ ತೆರಳಿದ್ದು ಅಲ್ಲಿನ ಪೋಟೋಗಳು ಸಖತ್ ವೈರಲ್ ಆಗಿದ್ದವು.
ಇದನ್ನೂ ಓದಿ : Raksha Bandhan 2022 : ನೀವು ರಕ್ಷಾ ಬಂಧನದ ಬೆಸ್ಟ್ ಗಿಫ್ಟ್ ಹುಡುಕಾಟದಲ್ಲಿದ್ದರೆ, ಈ ಐಡಿಯಾಗಳನ್ನೊಮ್ಮೆ ಗಮನಿಸಿ
ಇದನ್ನೂ ಓದಿ : rashmika mandanna : ಸಿನಿಮಾ ರಂಗಕ್ಕೆ ಗುಡ್ಬೈ ಹೇಳಿ ರಾಜಕೀಯಕ್ಕೆ ಸೇರಲಿದ್ದಾರಾ ರಶ್ಮಿಕಾ ಮಂದಣ್ಣ
Radhika Pandit Celebration Varamahalakshmi Festival