Minister Kota Srinivasa Pujaris : ಸಿದ್ದರಾಮೋತ್ಸವ ಬಿಜೆಪಿ ಭವಿಷ್ಯವನ್ನು ನಿರ್ಧರಿಸೋದಿಲ್ಲ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಹಾವೇರಿ : (Minister Kota Srinivasa Pujaris ) ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ನೆರೆದ ಜನರ ದಂಡು ಬಿಜೆಪಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಊಹೆಗೂ ನಿಲುಕದಷ್ಟು ಸಂಖ್ಯೆಯಲ್ಲಿ ಜನತೆ ಸಿದ್ದರಾಮಯ್ಯ ಜನ್ಮದಿನಾಚರಣೆಗೆ ಆಗಮಿಸಿದ್ದು ರಾಜ್ಯದಲ್ಲಿ ನಿಜಕ್ಕೂ ಕಾಂಗ್ರೆಸ್​ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸಿದೆಯಾ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ. ಈ ಎಲ್ಲದರ ನಡುವೆ ಇಂದು ಹಾವೇರಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಿದ್ದರಾಮೋತ್ಸವಕ್ಕೂ ನಮ್ಮ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮೋತ್ಸವ ಕಾರ್ಯಕ್ರಮವು ಬಿಜೆಪಿ ಪಾಲಿಗೆ ಎಚ್ಚರಿಕೆಯ ಕರಘಂಟೆ ಆಗಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, ಸಿದ್ದರಾಮಯ್ಯ ತಮಗೆ 75 ವರ್ಷ ಪೂರೈಸಿದ ಸಂದರ್ಭದಲ್ಲಿ ಒಂದು ಖಾಸಗಿ ಕಾರ್ಯಕ್ರಮವನ್ನು ಮಾಡಿಕೊಂಡಿದ್ದಾರೆ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಬಿಜೆಪಿ ಏನಿದ್ದರೂ ಸೈದ್ಧಾಂತಿಕ ಹಾಗೂ ಸಂಘಟನಾತ್ಮಕ ಹೋರಾಟವನ್ನು ಮಾಡುತ್ತೆ. ನಮ್ಮ ಅಭಿವೃದ್ಧಿ ಕೆಲಸಗಳು ಹಾಗೂ ಸಿಎಂರ ಪರಿಶ್ರಮ ಮತ್ತು ಕೇಂದ್ರ , ರಾಜ್ಯ ಸರ್ಕಾರದ ಸಾಧನೆಗಳೇ ನಮ್ಮ ಅಸ್ತ್ರವಾಗಿದೆ ಎಂದು ಹೇಳಿದ್ದಾರೆ.

ಯಡಿಯೂರಪ್ಪರ ನೇತೃತ್ವದಲ್ಲಿ ನಾವು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಸಿದ್ದರಾಮಯ್ಯರ ಈ ಖಾಸಗಿ ಉತ್ಸವಕ್ಕೂ ನಮ್ಮ ರಾಜಕೀಯ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ. ನಾವು ಕೂಡ ಕಾಲ ಕಾಲಕ್ಕೆ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಕ್ಕೆ ಸೇರಿದಂತೆ ಫಲಾನುಭವಿಗಳನ್ನು ಸೇರಿಸಿ ಸಮಾವೇಶ ಮಾಡಿದ್ದೇವೆ.ಸಂಘಟನಾತ್ಮಕ ಸಮಾವೇಶಗಳನ್ನು ನಾವೂ ಮಾಡಿದ್ದೇವೆ .ಸಿದ್ದರಾಮಯ್ಯನವರು ಮಾಡಿದ್ದಾರೆ ಅಂತ ನಾವು ಸಮಾವೇಶ ಮಾಡಲ್ಲ.ನಮ್ಮ ಕಾರ್ಯಕ್ರಮ ಮುಂದುವರೆಯುತ್ತವೆ ಎಂದು ಹೇಳಿದ್ದಾರೆ.

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಹೋರಾಟ ಹಾಗೂ ತಮ್ಮ ಸಭೆ ಸಮಾವೇಶ ಮಾಡಿ ಗೆಲ್ತೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ರಾಜಕೀಯ ಸಮಾವೇಶ ಮಾಡಿದ್ದಾರೆ. ನಮ್ಮ ಸಂಘಟನೆಗೂ ಸಿದ್ದರಾಮಯ್ಯ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ. ಈ ಬಾರಿ ಚುನಾವಣೆಯನ್ನು ನಾವು ಎದುರಿಸುತ್ತೇವೆ ಹಾಗೂ ಅದರಲ್ಲಿ ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Praveen Nettaru murder case : ಪ್ರಕರಣದ ದಿಕ್ಕು ತಪ್ಪಿಸಲು ಕೇರಳದ ಬೈಕ್​ ಬಳಕೆ ಮಾಡಿದರಾ ಪ್ರವೀಣ್​ ಹಂತಕರು

ಇದನ್ನೂ ಓದಿ : Pro Kabaddi League Auction ಪ್ರೊ ಕಬಡ್ಡಿ ಲೀಗ್: 2.26 ಕೋಟಿಗೆ ಸೇಲ್ ಆಗಿ ದಾಖಲೆ ಬರೆದ ಬೆಂಗಳೂರಿನ “ಮಾಜಿ ಬುಲ್” ಪವನ್ ಸೆಹ್ರಾವತ್

Minister Kota Srinivasa Pujaris statement regarding the Siddharamotsava programme

Comments are closed.