radhika pandit : ಸ್ಯಾಂಡಲ್ ವುಡ್ ನಲ್ಲಿದ ಕ್ಯೂಟ್ ಮಮ್ಮಿಗಳ ಪರ್ವ. ಎಲ್ಲ ಹಿರೋಯಿನ್ ಗಳು ಫ್ಯಾಮಿಲಿ ಟೈಂ ಹಾಗೂ ಮಕ್ಕಳ ನಡುವೆ ಬ್ಯುಸಿಯಾಗಿದ್ದಾರೆ. ಅದರ ಜೊತೆ ಜೊತೆಗೆ ಸಿನಿಮಾಗೂ ಕಮ್‌ಬ್ಯಾಕ್ ಮಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಮೇಘನಾ ಸರ್ಜಾ, ಅದಿತಿ ಪ್ರಭುದೇವ್ ಬಳಿಕ ಈಗ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಸರದಿ. ನಟಿ ಹಾಗೂ ಕ್ಯೂಟ್ ಮಮ್ಮಿ ರಾಧಿಕಾ ಪಂಡಿತ್ ಮತ್ತೆ ಬಣ್ಣ ಹಚ್ಚಿದ್ದಾರೆ. ಆದರೆ ನೀವಂದುಕೊಂಡಂತೆ ಸಿನಿಮಾಗಲ್ಲ ಬದಲಾಗಿ ಜಾಹೀರಾತಿಗಾಗಿ.

ನಟಿ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನಲ್ಲಿ ಕಿರುತೆರೆಯಿಂದ ಜರ್ನಿ ಆರಂಭಿಸಿ ಹಿರಿ ತೆರೆಯಲ್ಲಿ ಮಿಂಚಿದವರು. ಒಂದೇ ಒಂದು ವಿವಾದವಿಲ್ಲದೇ ಹಿಟ್ ಸಿನಿಮಾಗಳನ್ನು ನೀಡುವ ಮುನ್ನಡೆದವರು. ಜನಪ್ರಿಯತೆಯ ಉತ್ತುಂಗದಲ್ಲಿದ್ದಾಗಲೇ ರಾಕಿಂಗ್ ಸ್ಟಾರ್ ಯಶ್ ಕೈಹಿಡಿದು ಗೃಹಸ್ತಾಶ್ರಮಕ್ಕೆ ಕಾಲಿಟ್ಟರು.

ಮುದ್ದಿನ ಮಡದಿಯಾಗಿ ರಾಕಿಂಗ್ ಸ್ಟಾರ್ ಗೆ ಶಕ್ತಿ ತುಂಬುತ್ತಲೇ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡ ರಾಧಿಕಾ ಬಳಿಕ ಎರಡು ಮಕ್ಕಳ ಕ್ಯೂಟ್ ಮಮ್ಮಿಯಾದರು. ಕಡಿಮೆ ಅಂತರದಲ್ಲೇ ಹುಟ್ಟಿದ ಇಬ್ಬರು ಮಕ್ಕಳ ಪಾಲನೆಯ ಕಾರಣಕ್ಕೆ ರಾಧಿಕಾ ಕಳೆದ ನಾಲ್ಕು ವರ್ಷದಿಂದ ಸ್ಯಾಂಡಲ್ ವುಡ್ ನಿಂದ ದೂರವೇ ಇದ್ದರು.
ಇದನ್ನೂ ಓದಿ : ರೌಡಿಗಳ ಜೊತೆ ದರ್ಶನ್ ಪೋಟೋ ವೈರಲ್: ಆಪ್ತರ ಬಳಿ ವಿಜಯಲಕ್ಷ್ಮಿ ಕಣ್ಣೀರು
ಆದರೀಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಸಿನಿಮಾದ ಮೂಲಕವಲ್ಲ ಬದಲಾಗಿ ಜಾಹೀರಾತಿನ ಮೂಲಕ. ಎರಡು ಮೂರು ಆಭರಣಗಳ ಮಳಿಗೆಗಳಿಗೆ ನಟಿ ರಾಧಿಕಾ ಪಂಡಿತ್ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ಅದಕ್ಕಾಗಿ ರಾಧಿಕಾ ಪಂಡಿತ್ ಬಾಲಿವುಡ್ ನಟಿಯರನ್ನು ಹಿಂದಿಕ್ಕುವಂತ ಅದ್ದೂರಿ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಸಾನಿಯಾ ಸರ್ದಾರಿಯಾ ಸಿದ್ಧಪಡಿಸಿದ ಮದುವೆಯ ಗ್ರ್ಯಾಂಡ್ ಲೆಹೆಂಗಾದಲ್ಲಿ ರಾಧಿಕಾ ಮಿಂಚಿದ್ದಾರೆ. ತೆಳುಗುಲಾಬಿ ಬಣ್ಣದ ಗ್ರ್ಯಾಂಡ್ ಲೆಹೆಂಗಾ ರಾಧಿಕಾ ಸೌಂದರ್ಯವನ್ನು ಇಮ್ಮಡಿಸುವಂತೆ ಮಾಡಿದ್ದು ಅಂಜಿಯ ಹೇರ್ ಸ್ಟೈಲ್ , ಸುಂದರವಾರ ಮಾಂಗಟೀಕಾ ಡಿಸೈನ್ಸ್ ರಾಧಿಕಾರನ್ನು ಮದುವೆಯ ಹೆಣ್ಣಿನಂತೆ ಶೃಂಗರಿಸಿವೆ.
ಇದನ್ನೂ ಓದಿ : Ragini Dwivedi : ವೈಟ್ ಸ್ಕರ್ಟ್ ನಲ್ಲಿ ಹಾಟ್ ನಟಿ ರಾಗಿಣಿ : ತುಪ್ಪದ ಬೆಡಗಿ ನೋಡಿ ಫ್ಯಾನ್ಸ್ ಸುಸ್ತಾಗೋದ್ರಪ್ಪ…!
ಭಾರಿ ಆಭರಣಗಳ ಜೊತೆ ರಾಧಿಕಾ ದೇವತೆಯಂತೆ ನಗು ಬೀರಿದ್ದಾರೆ. ಇದಲ್ಲದೇ ಕೇಸರಿ ಬಣ್ಣಕ್ಕೆ ಹಸಿರು ಬಾರ್ಡರ್ ಇರುವ ರೇಷ್ಮೆ ಸೀರೆ, ಭಾರಿ ವಜ್ರ ಖಚಿತ ಹಾರದಲ್ಲೂ ರಾಧಿಕಾ ರಾಜಕುಮಾರಿಯಂತೆ ತೋರುತ್ತಿದ್ದು ನಸುನಗೆಯ ಬೀರುತ್ತ ಮನಸೆಳೆಯುತ್ತಿದ್ದೀರಾ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕೇವಲ ಸಾಂಪ್ರದಾಯಿಕ ಉಡುಗೆ ಮಾತ್ರವಲ್ಲ ರೆಡ್ ಗೌನ್ ನಲ್ಲೂ ಯಶ್ ಪತ್ನಿ ಮಿಂಚಿದ್ದು ಡೈಮೆಂಡ್ ಒಡವೆಗಳಜೊತೆ ಸಖತ್ ಪೋಸ್ ನೀಡಿದ್ದಾರೆ.

ಸದ್ಯ ರಾಧಿಕಾ ಪಂಡಿತ್ ಇಬ್ಬರು ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ್ಯುಸಿಯಾಗಿದ್ದಾರೆ. ಯಶ್ ಮುಂದಿನ ಹಲವು ವರ್ಷಗಳ ಸಿನಿಮಾಗೆ ಬುಕ್ ಆಗಿರೋದರಿಂದ ರಾಧಿಕಾಗೆ ಬಿಡುವಿಲ್ಲ. ಇಬ್ಬರು ಮಕ್ಕಳನ್ನು ಬಿಟ್ಟು ಹತ್ತು ಹದಿನೈದು ದಿನ ಶೂಟಿಂಗ್ ಗೆ ಹೊರಡಲು ಸಾಧ್ಯವಿಲ್ಲ. ಹೀಗಾಗಿ ನಟಿ ರಾಧಿಕಾ ಎಷ್ಟೇ ಒತ್ತಾಯ ಮಾಡಿದ್ರೂ ಸಿನಿಮಾ ಮಾಡೋಕೆ ಮನಸ್ಸು ಮಾಡ್ತಿಲ್ಲವಂತೆ.
ಅದರ ಬದಲಾಗಿ ಜಾಹೀರಾತುಗಳ ಮೂಲಕ ಸಿನಿಮಾ ಸ್ಕ್ರಿನ್ ಮೇಲೆ ಮಿಂಚುತ್ತಿದ್ದಾರೆ. ಈಗಾಗಲೇ ಅಡುಗೆ ಎಣ್ಣೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ರಾಧಿಕಾ ಈಗ ಆಭರಣದ ಜಾಹೀರಾತಿನಲ್ಲಿ ಮೋಡಿ ಮಾಡಿದ್ದಾರೆ.
ಇದನ್ನೂ ಓದಿ : ಮಾಲಿವುಡ್ ಗೆ ಮರಳಿದ ಮೇಘನಾ ರಾಜ್ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ
ಕೇವಲ ರಾಧಿಕಾ ಮಾತ್ರವಲ್ಲ ನಟಿ ಮೇಘನಾ ಸರ್ಜಾ ಕೂಡ ತಾಯ್ತನದ ಬ್ರೇಕ್ ಬಳಿಕ ಜಾಹೀರಾತಿನ ಮೂಲಕವೇ ಕಮ್ ಬ್ಯಾಕ್ ಮಾಡಿದ್ದರು. ಸದ್ಯ ರಾಧಿಕಾ ಪಂಡಿತ್ ಶೇರ್ ಮಾಡಿರೋ ಹೊಸ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು ಅಭಿಮಾನಿಗಳು ಸೂಪರ್ ಅತ್ತಿಗೆ ಅಂತ ಕೊಂಡಾಡುತ್ತಿದ್ದಾರೆ.
radhika pandit Good news to Yash fans photo viral