ಮಾಲಿವುಡ್ ಗೆ ಮರಳಿದ ಮೇಘನಾ ರಾಜ್‌ ಸರ್ಜಾ: ಸದ್ಯದಲ್ಲೇ ಅನೌನ್ಸ್ ಆಗಲಿದೆ ಕುಟ್ಟಿಮಾ ಹೊಸ ಸಿನಿಮಾ

Meghana Raj Sarja returned to Mollywood:  ಮೇಘನಾ ರಾಜ್ ಸರ್ಜಾ, ಚಂದನವನದ ಚಂದದ ಹೆಣ್ಣುಮಗಳು.‌ಸಿನಿಮಾ‌ಕ್ಷೇತ್ರದೊಂದಿಗೆ ನಂಟು ಇಟ್ಟುಕೊಂಡೇ ಹುಟ್ಟಿದ ಮೇಘನಾ ಬಣ್ಣ ಹಚ್ಚಿದ್ದೇನು ಅಚ್ಚರಿಯ ಸಂಗತಿಯಲ್ಲ.

Meghana Raj Sarja returned to Mollywood:  ಮೇಘನಾ ರಾಜ್ ಸರ್ಜಾ, ಚಂದನವನದ ಚಂದದ ಹೆಣ್ಣುಮಗಳು.‌ಸಿನಿಮಾ‌ಕ್ಷೇತ್ರದೊಂದಿಗೆ ನಂಟು ಇಟ್ಟುಕೊಂಡೇ ಹುಟ್ಟಿದ ಮೇಘನಾ ಬಣ್ಣ ಹಚ್ಚಿದ್ದೇನು ಅಚ್ಚರಿಯ ಸಂಗತಿಯಲ್ಲ. ಬದುಕಿನ ಎಲ್ಲ ಏಳುಬೀಳುಗಳಿಗೂ ಜಗ್ಗದೆ ಬಗ್ಗದೇ ನಿಂತ ಮೇಘನಾ ಮದರವುಡ್ ನ ಜೊತೆಗೆ ಸ್ಯಾಂಡಲ್ ವುಡ್ ಗೆ ಮರಳಿ ಸೈ ಎನ್ನಿಸಿಕೊಂಡರು. ಮೇಘನಾ ಸ್ಯಾಂಡಲ್ ವುಡ್ (Sandalwood) ನಲ್ಲಿದ್ದರೂ ಹೆಚ್ಚಿನ ಹೆಸರು ಗಳಿಸಿದ್ದು ಮಲೆಯಾಳಂನಲ್ಲಿ. ಎರಡನೇ ತವರಿನಂತ‌ ಮಲೆಯಾಳಂಗೆ ಮೇಘನಾ ಮರಳಿದ್ದು, ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

Meghana Raj Sarja returned to Mollywood Kutti ma new movie to be announced soon
Image Credit : Meghana Raj / Instagram

ಮೇಘನಾ ರಾಜ್ ಸರ್ಜಾ, ಕನ್ನಡತಿಯಾದರೂ ಅವರಿಗೆ ನೇಮ್, ಫೇಮ್ ಎಲ್ಲವನ್ನೂ ತಂದುಕೊಟ್ಟಿದ್ದು ಮಲೆಯಾಳಂ ಇಂಡಸ್ಟ್ರಿ. ನಾಯಕಿಯಾಗಿ ಮಲೆಯಾಳಿಗರ ಮನಗೆದ್ದ ಮೇಘನಾ ಹಲವು ಇಂಟರವ್ಯೂಗಳಲ್ಲಿ ಮಾಲಿವುಡ್ ನನ್ನ ಪಾಲಿಗೆ ಎರಡನೇ‌ ತವರು ಮನೆ ಇದ್ದಂತೆ ಎಂದಿದ್ದಾರೆ.

ತಮ್ಮ ಪ್ರೀತಿಯ ಪತಿಯ ಅಗಲುವಿಕೆ ಹಾಗೂ ತಾಯ್ತನದ ಕಾರಣಕ್ಕೆ ಸಿನಿಮಾ ಇಂಡಸ್ಟ್ರಿಯಿಂದಲೇ ಬ್ರೇಕ್ ಪಡೆದುಕೊಂಡಿದ್ದರು. ಐದು ತಿಂಗಳ‌ ಗರ್ಭಿಣಿಯಾಗಿದ್ದಾಗ‌ ಪತಿಯನ್ನು ಕಳೆದುಕೊಂಡ ಮೇಘನಾ ಬದುಕನ್ನು ಮತ್ತೆ ಕಟ್ಟಿಕೊಂಡು ಬಂದ‌ರೀತಿಯೇ ಎಲ್ಲ‌ಹೆಣ್ಣುಮಕ್ಕಳಿಗೆ ಮಾದರಿ.

ಮಗನಿಗೆ ಎರಡು ವರ್ಷವಾಗುವ ಹೊತ್ತಿಗೆ ಮೇಘನಾ ಮತ್ತೆ ಸಿನಿಮಾಕ್ಕೆ ಮರಳಿದ್ದು ಮೇಘನಾ ಕಮ್‌ಬ್ಯಾಕ್ ಸಿನಿಮಾ ತತ್ಸಮ್ ತದ್ಬವ್ ವುಮನ್ ಓರಿಯಂಟೆಡ್ ಸಿನಿಮಾದ ರೀತಿಯಲ್ಲಿ ಇಂಡಸ್ಟ್ರಿ ಯಲ್ಲಿ ಸದ್ದು ಮಾಡಿದ್ದಲ್ಲದೇ, ಸಸ್ಪೆನ್ಸ್,‌ಥ್ರಿಲ್ಲರ್ ಸಿನಿಮಾವೊಂದರ ಅಗತ್ಯವನ್ನು ಫುಲ್ ಫಿಲ್ ಮಾಡಿತ್ತು.

Meghana Raj Sarja returned to Mollywood Kutti ma new movie to be announced soon
Image Credit : Meghana Raj / Instagram

ಒಂದೊಳ್ಳೆ‌ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡಿದ ಮೇಘನಾಗೆ ಇಂಡಸ್ಟ್ರಿ ಪ್ರೀತಿಯ ಸ್ವಾಗತ ನೀಡಿದ್ದು ಮಾತ್ರವಲ್ಲದೇ ಎಲ್ಲರ ಪ್ರೋತ್ಸಾಹ ದೊರೆತಿತ್ತು. ಸ್ವತಃ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಮೇಘನಾ ನಟನೆ ಹಾಗೂ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ತತ್ಸಮ್‌ತದ್ಭವ ಬಳಿಕ ಮೇಘನಾಗೆ ಅಂದುಕೊಂಡಂತೆ ಅವಕಾಶಗಳ ಸುರಿಮಳೆಯೇ ಬಂದಿದೆ. ಆದರೆ ಅವಕಾಶಗಳನ್ನು ಆಯ್ದುಕೊಳ್ಳುವ ವಿಚಾರದಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ.

ಇದನ್ನೂ ಓದಿ :ರಾಯನ್ ರಾಜ್‌ ಸರ್ಜಾ ರಾಯಲ್ ಬರ್ತಡೇ: ಅಭಿಮಾನಿಗಳಿಗಾಗಿ ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್‌ ಸರ್ಜಾ

ಹಲವು ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಮೇಘನಾ, ನಾನು ನನ್ನ ಮಗನಿಗಾಗಿ ಬದುಕುತ್ತಿದ್ದೇನೆ. ಹೀಗಾಗಿ ಅವನ ಶೆಡ್ಯೂಲ್ ನೋಡಿಕೊಂಡು ನನ್ನ ಶೂಟಿಂಗ್ ಪ್ಲ್ಯಾನ್ ಮಾಡುತ್ತಿದ್ದೇನೆ. ತೀರಾ ಹೆಚ್ಚಿನ ಸಿನಿಮಾ ಅಥವಾ ಶೋಗಳನ್ನು ಒಪ್ಪಿಕೊಂಡು ಅವನಿಗೆ ಸಮಯ ಕೊಡಲು ಸಾಧ್ಯವಾಗದಿದ್ದರೇ ಎಂಬ ಆತಂಕ‌ ನನ್ನ ಕಾಡುತ್ತದೆ. ಹೀಗಾಗಿ ನಾನು ಸಿನಿಮಾ ಅಥವಾ ಯಾವುದೇ ಕಮಿಟಮೆಂಟ್ ಗೂ ಮುನ್ನ ತುಂಬ ಯೋಚಿಸಿ ನಿರ್ಧಾರ ಮಾಡುತ್ತೇನೆ ಎಂದಿದ್ದರು.

Meghana Raj Sarja returned to Mollywood Kutti ma new movie to be announced soon
Image Credit : Meghana Raj / Instagram

ಆದರೆ‌ ಈಗ ತಮಗೆ ಸಿಕ್ಕ ಅವಕಾಶದ ಬೆನ್ನು ಹತ್ತಿ ಮೇಘನಾ ಮತ್ತೆ ಮಲೆಯಾಳಂಗೆ ಮರಳಿದ್ದಾರೆ ಎನ್ನಲಾಗ್ತಿದೆ. ಹಲವು ಸಿನಿಮಾಗಳ ಕಥೆ ಕೇಳ್ತಿರೋ ಮೇಘನಾ ಇದಕ್ಕಾಗಿ ಕೊಚ್ಚಿಯಲ್ಲಿದ್ದು ಸಿನಿಮಾ ಕತೆಗಳನ್ನು ಕೇಳೋದರ ಜೊತೆಗೆ ಸ್ನೇಹಿತರನ್ನು ಭೇಟಿ ಮಾಡುತ್ತ, ಪಾರ್ಟಿ ಮಾಡುತ್ತ ಚಿಲ್‌ ಮಾಡ್ತಿದ್ದಾರೆ.

ಇದನ್ನೂ ಓದಿ : Meghanaraj ಹೊಸ ಪೋಟೋ ಶೂಟ್‌ : ಮಹಾರಾಣಿಯಾಗಿ ಮಿಂಚಿದ ಮೇಘನಾ

ಸ್ವತಃ ಮೇಘನಾ ರಾಜ್ ಕೊಚ್ಚಿಯಲ್ಲಿ ತಮ್ಮ ಸ್ನೇಹಿತೆಯರು ಹಾಗೂ ಅವರ ಫ್ಯಾಮಿಲಿ ಜೊತೆ ಎಂಜಾಯ್ ಮಾಡ್ತಿರೋ ಪೋಟೋ ಗಳನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.ಮಲಯಾಳಂನಲ್ಲಿ ಕಳೆದ ಅರೆಂಟು ವರ್ಷಗಳಿಂದ ಮೇಘನಾ ಬಣ್ಣ ಹಚ್ಚಿಲ್ಲ. ಆದರೆ ಅವಕಾಶ ಸಿಕ್ಕರೇ ನಾನು ಮಲೆಯಾಳಂ ನಟಿಸಲು ಸಿದ್ಧ ಎಂದು ಮೇಘನಾ ಹಲವು ಭಾರಿ ಹೇಳಿಕೊಂಡಿದ್ದರು.

ಇದನ್ನೂ ಓದಿ : Meghana Raj Sarja Photo Viral : ಥೈಲ್ಯಾಂಡ್ ನಲ್ಲಿ ಮೇಘನಾ ರಾಜ್ ಸರ್ಜಾ : ಬಿಕನಿ ಪೋಟೋ ವೈರಲ್

ಈಗ ಮತ್ತೆ ಮಲೆಯಾಳಂಗೆ ಮರಳೋ ಆಸಕ್ತಿ ತೋರಿದ್ದಾರೆ. ಕೇವಲ ತೆಲುಗು ಮಾತ್ರವಲ್ಲ ತಮಿಳು ಹಾಗೂ ಕನ್ನಡ ಸಿನಿಮಾದಲ್ಲೂ ನಟಿಸಿರೋ ಮೇಘನಾ 2009 ರಲ್ಲಿ ಬೆಂದು ಅಪ್ಪಾರಾವ್ ಎಂಬ ತೆಲುಗು ಸಿನಿಮಾದ ಮೂಲಕ ಇಂಡಸ್ಟ್ರಿ ಗೆ ಕಾಲಿಟ್ಟಿದ್ದರು. ಈಗ ಮತ್ತೆ ಮಲೆಯಾಳಂ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

Meghana Raj Sarja returned to Mollywood: Kutti ma new movie to be announced soon

Comments are closed.