ಭಾನುವಾರ, ಏಪ್ರಿಲ್ 27, 2025
HomeCinemaRadhika -Puneeth : ಅಪ್ಪು ಸಾವಿಗೆ ರಾಧಿಕಾ ಕಣ್ಣೀರು: ನಟಿಯ ಪೋಸ್ಟ್ ಗೆ ಫ್ಯಾನ್ಸ್ ಆಕ್ರೋಶ

Radhika -Puneeth : ಅಪ್ಪು ಸಾವಿಗೆ ರಾಧಿಕಾ ಕಣ್ಣೀರು: ನಟಿಯ ಪೋಸ್ಟ್ ಗೆ ಫ್ಯಾನ್ಸ್ ಆಕ್ರೋಶ

- Advertisement -

ಅಜಾತ ಶತ್ರುವಿನಂತೆ ಬದುಕಿದ್ದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj Kumar) ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. ಎಲ್ಲರ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲೂ ಅಪ್ಪು ಬಗ್ಗೆ ಪೋಸ್ಟ್ ರಾರಾಜಿಸುತ್ತಿದೆ. ಆದರೆ ರಾಧಿಕಾ ಪಂಡಿತ್ (Radhika Pandit) ಮಾತ್ರ ಪುನೀತ್ ಬಗ್ಗೆ ಪೋಸ್ಟ್ ಹಾಕಿ ವಿವಾದಕ್ಕೆ ಸಿಲುಕಿದ್ದಾರೆ.

ಕಳೆದ ಅಕ್ಟೋಬರ್ 29 ರಂದು ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ಹೃದಯಾಘಾತದಿಂದ ನಿಧನರಾದರು. ಈ ವೇಳೆ ಚಂದನವನದ ಎಲ್ಲ ಸ್ಟಾರ್ ಗಳು ನಟಿಮಣಿಯರು ಪುನೀತ್ ಮನೆಗೆ ದೌಡಾಯಿಸಿದ್ದರು. ಘಟನೆ ನಡೆದ 12 ದಿನಗಳ ಬಳಿಕ ನಟಿ ರಾಧಿಕಾ ಪಂಡಿತ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಪುನೀತ್ ಜೊತೆಗಿದ್ದ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಇಷ್ಟು ದಿನಗಳಾದ್ರೂ ನೀವು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಬರೆದಿದ್ದಾರೆ.

ಅದರೆ ರಾಧಿಕಾ ಪಂಡಿತ್ ಈ ಭಾವನಾತ್ಮಕ ಪೋಸ್ಟ್ ಗೆ ಅಭಿಮಾನಿಗಳಿಂದ ಸಖತ್ ವಿರೋಧ ಹಾಗೂ ಆಕ್ರೋಶ ವ್ಯಕ್ತವಾಗಿದೆ. ನೀವು ಇಷ್ಟು ದಿನ ಎಲ್ಲಿ ಹೋಗಿದ್ರಿ? ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನಕ್ಕೆ ಬರೋದಿಕ್ಕೆ ನಿಮಗೆ ಸಮಯವಿರಲಿಲ್ಲವಾ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಮಾತ್ರವಲ್ಲ ನಿಮ್ಮೊಂದಿಗೆ ನಟಿಸಿದ್ದ ನಟನ ಅಂತಿಮ ಯಾತ್ರೆ, ಅಂತಿಮ ದರ್ಶನಕ್ಕೆ ಬರಲು ಸಾಧ್ಯವಾಗದಷ್ಟು ಬ್ಯುಸಿಯಾಗಿದ್ರಾ ಎಂದು ಕೆಲವರು ಕುಟುಕಿದ್ದಾರೆ. ಪುನೀತ್ ಅಂತಿಮ‌ ದರ್ಶನಕ್ಕೆ ಬಾರದ ನಿಮಗೆ ದಿಕ್ಕಾರ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ.12 ದಿನಗಳ ಮೇಲೆ ಪೋಸ್ಟ್ ಹಾಕ್ತಿರುವ ನೀವು ಇಷ್ಟು ದಿನ ಎಲ್ಲಿ ಹೋಗಿದ್ರಿ ಬೇರೆ ರಾಜ್ಯದ ಗಣ್ಯರು ಬಂದು ದರ್ಶನ ಪಡೆದಿದ್ದರೂ ನಿಮಗೆ ದರ್ಶನಕ್ಕೆ ಬರಲು ಸಮಯವಾಗಲಿಲ್ಲವೇ ಎಂದು ಹಲವರು ಹರಿಹಾಯ್ದಿದ್ದಾರೆ.

ಆದರೆ ಅಭಿಮಾನಿಗಳ ಈ ಅಕ್ರೋಶಕ್ಕೆ ರಾಧಿಕಾ ಪಂಡಿತ್ ತಾಳ್ಮೆಯಿಂದ ರಿಪ್ಲೈ ಮಾಡಿದ್ದು, ನಾನು ಅಂತಿಮ ದರ್ಶನ ಪಡೆದನೋ ಇಲ್ಲವೋ ನನಗೆ ಗೊತ್ತು. ಅಂದು ಮಾಧ್ಯಮದ ಮುಂದೇ ಬಂದು ಮಾತನಾಡುವ ಶಕ್ತಿ ಇರಲಿಲ್ಲ. ಮಾಧ್ಯಮದ ಮುಂದೇ ಕಾಣಿಸಿಕೊಳ್ಳದೇ ಇರುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ ಎಂದು ರಾಧಿಕಾ ತಿರುಗೇಟು ನೀಡಿದ್ದಾರೆ.

ನಟಿ ರಾಧಿಕಾ ಯಶ್ ಜೊತೆ ಪುನೀತ್ ಮನೆಗೆ ಅಕ್ಟೋಬರ್ 29 ರಂದು ಭೇಟಿ ನೀಡಿದ್ದಾರೆ. ಆಸ್ಪತ್ರೆಯಿಂದ ಪುನೀತ್ ಪಾರ್ಥಿವ ಶರೀರ ತರುವ ವೇಳೆಗೆ ರಾಧಿಕಾ ಪುನೀತ್ ರಾಜ್‌ ಕುಮಾರ್‌ ಅವರ ಮನೆಯಲ್ಲಿದ್ದರು. ಪುನೀತ್ ನಿವಾಸದಿಂದ ಪುನೀತ್ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂಗೆ ತೆರಳುತ್ತಿದ್ದಂತೆ ಮನೆಗೆ ಮರಳಿದ್ದಾರೆ.

ರಾಧಿಕಾ ಪಂಡಿತ್ ಜೊತೆ ಅವರ ನಾದಿನಿ ಅಂದ್ರೇ ಯಶ್ ಸಹೋದರಿ ಕೂಡ ಅಪ್ಪು ಮನೆಗೆ ಬಂದಿದ್ದರು. ಅವರು ಕೂಡ ಪುನೀತ್ ರಾಜ್ ಕುಮಾರ್ ಅಭಿಮಾನಿ. ಆದರೆ ಮಾಧ್ಯಮಗಳ ಕಣ್ಣಿಗೆ ರಾಧಿಕಾ ಕಾಣಿಸಿಕೊಂಡಿರಲಿಲ್ಲ. ಇದೇ ಕಾರಣಕ್ಕೆ ರಾಧಿಕಾ ಸೋಷಿಯಲ್ ಮೀಡಿಯಾ ಪೋಸ್ಟ್ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ಮತ್ತೊಮ್ಮೆ ತೆರೆಗೆ ಬರಲಿ ಯುವರತ್ನ: ಪವರ್ ಸ್ಟಾರ್ ಅಭಿಮಾನಿಗಳ ಭಾವುಕ ಬೇಡಿಕೆ

ಇದನ್ನೂ ಓದಿ : Sudeep : ಸುದೀಪ್ ಗಾಗಿ ಅಭಿಮಾನಿಗಳ ಉರುಳುಸೇವೆ : ಕಿಚ್ಚನಿಗೆ ಅಂತಹದ್ದೇನಾಯ್ತು ಗೊತ್ತಾ?!

( Radhika Pandit weeps over Puneet Raj Kumar’s death, Fans who expressed outrage at the actress’s post )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular