ಕೋಟ : ಗೋ ಕಳ್ಳರ ವಾಹನ ಅಡ್ಡಗಟ್ಟಿದ ಹಸು : Video Viral

ಕೋಟ : ಕರಾವಳಿಯಲ್ಲಿ ಗೋಕಳ್ಳರ (Cow theft) ಹಾವಳಿ ಮಿತಿಮೀರಿದೆ. ಕತ್ತಲ ರಾತ್ರಿಯಲ್ಲಿ ರಸ್ತೆಯ ಬದಿಯಲ್ಲಿ ಮಲಗಿರುವ ಗೋವುಗಳನ್ನು ಕಳವು ಮಾಡಲಾಗುತ್ತಿದೆ. ಇದೀಗ ಉಡುಪಿ ಜಿಲ್ಲೆಯ ಸಾಯಿಬ್ರಕಟ್ಟೆಯಲ್ಲಿ ಕಳ್ಳರು ಗೋವುಗಳನ್ನು ಕಳವು ಮಾಡಿದ್ದಾರೆ. ಗೋವುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಸಾಗುವ ವೇಳೆಯಲ್ಲಿ ಹಸುವೊಂದು ವಾಹನವನ್ನು ಅಡ್ಡಗಟ್ಟುವ ದೃಶ್ಯ ಇದೀಗ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಘಟನೆಯ ವಿಡಿಯೋ ಇದೀಗ ವೈರಲ್‌ ಆಗಿದೆ. ಸಾಯಿಬ್ರಕಟ್ಟೆ ಸರ್ಕಲ್‌ ಬಳಿಯಲ್ಲಿ ರಾತ್ರಿ 11 ಗಂಟೆಯ ಸುಮಾರಿ ಸ್ಕಾರ್ಪಿಯೋ ವಾಹನ ದಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ರಸ್ತೆಯ ಬದಿಯಲ್ಲಿ ಮಲಗಿದ್ದ ಗೋವುಗಳನ್ನು ಬಲವಂತವಾಗಿ ವಾಹನದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದಾರೆ.

ಗೋವುಗಳನ್ನು ವಾಹನದಲ್ಲಿ ತುಂಬಿಸಿಕೊಂಡು ಹೋಗುವ ವೇಳೆಯಲ್ಲಿ ಹಸುವೊಂದು ವಾಹನವನ್ನು ಅಡ್ಡಗಟ್ಟಿದೆ. ಆದರೂ ಗೋ ಕಳ್ಳರು ವಾಹನ ಚಲಾಯಿಸಿಕೊಂಡು ಸಾಗಿದ್ದಾರೆ.

ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರಾತ್ರಿಯ ವೇಳೆಯಲ್ಲಿ ಗೋವುಗಳನ್ನು ಕಳವು ಮಾಡುವ ಪ್ರಕರಣ ವರದಿಯಾಗುತ್ತಲೇ ಇದೆ. ಅದ್ರಲ್ಲೂ ಬೀಡಾಡಿ ಗೋವುಗಳನ್ನೇ ಕಳ್ಳರು ಟಾರ್ಗೆಟ್‌ ಮಾಡುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ಗೋವುಗಳನ್ನು ರಾಜಾರೋಷವಾಗಿ ಕಳವು ಮಾಡುತ್ತಿದ್ದರೂ ಕೂಡ ಪೊಲೀಸರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಅನ್ನೋ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅದ್ರಲ್ಲೂ ಸಾಯಿಬ್ರಕಟ್ಟೆ ಸುತ್ತಮುತ್ತಲೂ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಕೋಟ ವ್ಯಾಪ್ತಿಯಲ್ಲಿ ಪೊಲೀಸ್‌ ಚೆಕ್‌ಪೋಸ್ಟ್‌ ಇಲ್ಲದಿರುವುದನ್ನು ಖಚಿತಪಡಿಸಿಕೊಂಡೇ ಈ ಕೃತ್ಯವನ್ನು ಎಸಗಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮಗನ ಅಪ್ರಾಪ್ತ ಪ್ರಿಯತಮೆಯ ಮೇಲೆ ಅತ್ಯಾಚಾರವೆಸಗಿದ ತಂದೆ

ಇದನ್ನೂ ಓದಿ : ಕೋಟ : ಮನೆ ನಿರ್ಮಾಣದ ವೇಳೆ ಕಾಂಕ್ರೀಟ್‌ ಸ್ಲಾಬ್‌ ಕುಸಿತ ; ಕಾರ್ಮಿಕ ಸಾವು, ಮತ್ತೋರ್ವ ಗಂಭೀರ

(Cow theft in Saibrakatte Udupi video viral)

Comments are closed.