Radhika Pandit – Yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ‌ ಪಂಡಿತ್ (Radhika Pandit – Yash) ಸದ್ಯ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಬೆರೆಯೋದನ್ನು ಬಿಟ್ಟಿಲ್ಲ. ಬಹುತೇಕ ವಾರಾಂತ್ಯದಲ್ಲಿ ಒಂದಿಷ್ಟು ಹೊಸ ಪೋಟೋಗಳ ಜೊತೆ ಅಭಿಮಾನಿಗಳಿಗೆ ಸಪ್ರೈಸ್ ಹಾಗೂ ತಮ್ಮ ಸ್ಟಾರ್ ಲೈಫ್ ನ ಅಪ್ಡೇಟ್ ಕೊಡೋ ರಾಧಿಕಾ ಈ ಭಾರಿ ವರಮಹಾಲಕ್ಷ್ಮೀ ಹಬ್ಬದ ಗಳಿಗೆಯನ್ನು ಹಂಚಿಕೊಂಡಿದ್ದಾರೆ.

ಕಳೆದ ಶುಕ್ರವಾರವಷ್ಟೇ ವರಮಹಾಲಕ್ಷ್ಮೀ ಹಬ್ಬ ಮುಗಿದಿದೆ. ಕೇವಲ ಜನರು ಮಾತ್ರವಲ್ಲ ಸೆಲೆಬ್ರಿಟಿ ಗಳು ಕೂಡ ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆ ವರಮಹಾಲಕ್ಷ್ಮೀ ಹಬ್ಬವನ್ನು ಗ್ರ್ಯಾಂಡಾಗಿ ಆಚರಿಸಿದ್ದಾರೆ. ಎಲ್ಲ ಸ್ಟಾರ್ ಪರಿವಾರದಂತೆ ಕೆಜಿಎಫ್ ಕಿಂಗ್ ಯಶ್ ಮನೆಯಲ್ಲೂ ಮಹಾಲಕ್ಷ್ಮೀಗೆ ಅದ್ದೂರಿ ಪೂಜೆ ನಡೆದಿದೆ. ತಮ್ಮ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಕುಟುಂಬಕ್ಕಾಗಿ ಸಮಯ ನೀಡಿದ ಯಶ್ ಶಾಸ್ತ್ರೋಕ್ತವಾಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ರಾಧಿಕಾ ಪಂಡಿತ್ ಪತಿ ಯಶ್ ಹಾಗೂ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಜೊತೆ ಪೂಜೆ ನೆರವೇರಿಸಿದ ಸ್ಪೆಶಲ್ ಪೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ವರಮಹಾಲಕ್ಷ್ಮೀ ಪೂಜೆ
Radhika pandit - yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್ 6

ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರೋ ಅದ್ದೂರಿ ಬಂಗ್ಲೆಯಲ್ಲಿ ಯಶ್ ಹಾಗೂ ರಾಧಿಕಾ ವರ ಮಹಾಲಕ್ಷ್ಮಿ ಹಬ್ಬ ನೆರವೇರಿಸಿದ್ದಾರೆ. ಪಂಚೆ ಉಟ್ಟ ಯಶ್ ಹಾಗೂ ಹಳದಿ ಸೀರೆಯಲ್ಲಿ ರಾಧಿಕಾ ಸಖತ್ ಮಿಂಚಿದ್ದು, ಪೋಟೋಗಳು ಅಭಿಮಾನಿಗಳ ಮನ ಗೆದ್ದಿವೆ. ಹೂವಿನ ಮಂಟಪ, ಅದ್ದೂರಿ ಲಕ್ಷ್ಮೀ ಅಲಂಕಾರ, ಬೆಳ್ಳಿಯ ಪೂಜಾ ಸಾಮಾಗ್ರಿಗಳು ಎಲ್ಲವೂ ಯಶ್ ಕುಟುಂಬದ ಲಕ್ಷ್ಮೀ ಪೂಜೆಯ ಶ್ರೀಮಂತಿಕೆಯನ್ನು ಸಾರುತ್ತಿದ್ದು, ಪೋಟೋ ನೋಡಿದ ಅಭಿಮಾನಿಗಳು ವಾವ್ ಅಂತಿದ್ದಾರೆ.

ವರಮಹಾಲಕ್ಷ್ಮೀ ಪೂಜೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್
Radhika pandit - yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್ 7
ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್
Radhika pandit - yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್ 8

ಯಶ್ ಕಳೆದ ಕೆಲ ವರ್ಷಗಳ ಹಿಂದೆಯಷ್ಟೇ ಮಲ್ಲೇಶ್ವರಂ ನಲ್ಲಿ ಬಹುಕೋಟಿ ವೆಚ್ಚದ ಹೊಸ ಫ್ಲ್ಯಾಟ್ ಖರೀದಿಸಿದ್ದು ಸ್ವತಃ ರಾಧಿಕಾ ಪಂಡಿತ್ ಫ್ಲ್ಯಾಟ್ ನ ಇಂಟಿರಿಯರ್ ಡೆಕೊರೇಶನ್ ಸೇರಿದಂತೆ ಎಲ್ಲವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ತಮ್ಮ ಮಕ್ಕಳೊಂದಿಗೆ ಇಲ್ಲಿ ವಾಸವಾಗಿದ್ದು, ಯಶ್ ಪೋಷಕರು ಹಾಸನದಲ್ಲಿ ಯಶ್ ಖರೀದಿಸಿದ ಫಾರ್ಂ ಹೌಸ್ ನಲ್ಲಿ ವಾಸವಾಗಿದ್ದಾರೆ.

ನಟ ಯಶ್ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ
Radhika pandit - yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್ 9

ಇನ್ನೂ ಸಿನಿಮಾಗಳ ವಿಚಾರಕ್ಕೆ ಬರೋದಾದರೇ ಸದ್ಯ ಯಶ್ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಗುಟ್ಟನ್ನು ಇನ್ನು ಬಿಚ್ಚಿಟ್ಟಿಲ್ಲ. ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿಬಂದಿದ್ದರೇ ಇನ್ನೊಂದೆಡೆ ನರ್ತನ್ ನಿರ್ದೇಶನದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ.

ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ
Radhika pandit - yash : ಯಶ್ ಮನೆಯಲ್ಲಿ ಅದ್ದೂರಿ ಲಕ್ಷ್ಮೀಪೂಜೆ: ಲಕ್ಷ್ಮೀಯಂತೆ ಮಿಂಚಿದ ರಾಧಿಕಾ ಪಂಡಿತ್ 10

Radhika Pandit – Yash : Lavish Lakshmi Puja at Yash House: Radhika Pandit shines like Lakshmi

Comments are closed.