ಕನ್ನಡ ಸಿನಿರಂಗದ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಘವೇಂದ್ರ ಸ್ಟೋರ್ಸ್ (Raghavendra Stores Celebrity Show) ನಾಳೆ (ಏಪ್ರಿಲ್ 28) ತೆರೆ ಕಾಣಲಿದೆ. ಈಗಾಗಲೇ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಖತ್ ವೀವ್ಸ್ ಕಂಡಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನಟ ಜಗ್ಗೇಶ್ ಅವರ ಸಿನಿಮಾವೆಂದರೆ ಯಾವಗಲೂ ನವರಸದಿಂದಲೇ ಕೂಡಿರುತ್ತದೆ. ಹಾಗಾಗಿ ಈ ಸಿನಿಮಾ ಕೂಡ ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದು ಖಂಡಿತ. ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿ ಶೋ ದಲ್ಲಿ ಕನ್ನಡ ಸಿನಿರಂಗದ ಹೆಚ್ಚಿನ ಸಿನಿತಾರೆಯರು ಭಾಗವಹಿಸಿದ್ದಾರೆ. ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ಸೆಲೆಬ್ರಿಟಿಗಳು ಹಂಚಿಕೊಂಡಿದ್ದಾರೆ.
ಸಿನಿತಾರೆಯರ ಅಭಿಪ್ರಾಯವನ್ನು ಹೊಂಬಾಳೆ ಫಿಲ್ಮ್ಸ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಾಳೆಯಿಂದ ಸಿನಿಮಂದಿರಗಳಲ್ಲಿ ರಾಘವೇಂದ್ರ ಸ್ಟೋರ್ಸ್ ವಿಶೇಷ ಪ್ರೀಮಿಯರ್ ಶೋನ ಸುಂದರ ಸಂಜೆಯ ಮುಖ್ಯಾಂಶಗಳು!” ಎಂದು ವಿಡಿಯೋ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸಿನಿತಾರೆಯರು ಶೋನಲ್ಲಿ ಸಿನಿಮಾವನ್ನು ಬಹಳಷ್ಟು ಎಂಜಾಯ್ ಮಾಡಿಕೊಂಡು ನೋಡುವುದನ್ನು ಕಾಣಬಹುದು. ಹಾಗೆಯೇ ಈ ಶೋನಲ್ಲಿ, ರಕ್ಷಿತ್ ಶೆಟ್ಟಿ, ಸಪ್ತಮಿ ಗೌಡ, ಕೋಮಲ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಸೇರಿದಂತೆ ಅನೇಕರು ಭಾಗಿ ಆಗಿದ್ದರು. ಹಾಗೆ ಸಿನಿಮಾ ಬಗ್ಗೆ ಉತ್ತಮ ರಿವೀವ್‌ವನ್ನು ನೀಡಿದ್ದಾರೆ.
Moments from the lovely evening 💫
— Hombale Films (@hombalefilms) April 27, 2023
Highlights from #RaghavendraStores Special Premiere Show 📽️
In cinemas from Tomorrow!
🎟️ https://t.co/G3H4oBiYMt@Jaggesh2 @santhoshAnand15 #VijayKiragandur @hombalefilms #HombaleMusic @HombaleGroup @ShwethaSrivatsa @AJANEESHB @DopShreesha… pic.twitter.com/UyL16MZ43x
ಈ ಸಿನಿಮಾದ ಮೊದಲ ಭಾಗವು ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತದೆ. ಇನ್ನು ಕೊನೆಯಲ್ಲಿ ಉತ್ತಮ ಮೆಸೇಜ್‌ನೊಂದಿಗೆ ಸಿನಿಮಾ ಕೊನೆಯಾಗುತ್ತದೆ ಎಂದು ಬಂದಿರುವಂತಹ ಅಷ್ಟು ಸಿನಿತಾರೆಯರು ಹೇಳಿಕೊಂಡಿದ್ದಾರೆ. ಇನ್ನು ನಟ ರಿಷಬ್ ಶೆಟ್ಟಿ ಈ ಸಿನಿಮಾದ ಟ್ರೈಲರನ್ನು ರಿಲೀಸ್ ಮಾಡಿದ್ದು, ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಿನಿಮಾದ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ ಪ್ರಾರಂಭಗೊಂಡಿರುತ್ತದೆ.
ಇನ್ನು ಟ್ರೈಲರ್ ಉದ್ದಕ್ಕೂ ಅಡುಗೆ ಭಟ್ಟರಾಗಿರುವ ಹಿರಿಯ ನಟ ಜಗ್ಗೇಶ್‌ಗೆ ಹುಡುಗಿ ಹುಡುಕುತ್ತಿದ್ದು, ಕ್ಯಾಟರಿಂಗ್ ಸರ್ವಿಸ್ ನಡೆಸುವ ಹುಡುಗನಿಗೆ ಯಾರು ಹುಡುಗಿ ನೀಡುತ್ತಾರೆ. ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹುಡುಗರಿಗೆ ಮದುವೆ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಹಳ ಹಾಸ್ಯಮಯವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೇ ಅಡುಗೆ ಭಟ್ಟನ್ನು ಮೆಚ್ಚಿ ಮದುವೆ ಆಗುವ ಹುಡುಗಿಯರ ಮನಸ್ಥಿತಿ ಬಗ್ಗೆ ಕೂಡ ಬಹಳ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಇನ್ನು ಟ್ರೈಲರ್ ನೋಡಿದ ಸಿನಿಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾದಿದ್ದಾರೆ.
ಇದನ್ನೂ ಓದಿ : ನವರಸ ನಾಯಕ ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಬುಕಿಂಗ್ ಓಪನ್
ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ.
Raghavendra Stores Celebrity Show: Do you know what the actresses said?