ಮಹಿಳಾ ಕ್ರಿಕೆಟ್ ತಂಡದ ಕಾಂಟ್ರಾಕ್ಟ್ ಲಿಸ್ಟ್ ಪ್ರಕಟಿಸಿದ ಬಿಸಿಸಿಐ, ಯಾರಿಗೆಷ್ಟು ಲಕ್ಷ? ಪಟ್ಟಿಯಲ್ಲಿ ಕರ್ನಾಟಕದ ಆಟಗಾರ್ತಿಯರೆಷ್ಟು?

ಮುಂಬೈ : ಭಾರತ ಮಹಿಳಾ ಕ್ರಿಕೆಟ್ ತಂಡದ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಒಟ್ಟು 17 ಮಂದಿ ಆಟಗಾರ್ತಿರಯರಿಗೆ ಸ್ಥಾನ ನೀಡಲಾಗಿದೆ (BCCI Announces Annual Player Retainership For Women’s Stars). ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನ ಮತ್ತು ಆಲ್ರೌಂಡರ್ ದೀಪ್ತಿ ಶರ್ಮಾ ಗ್ರೇಡ್ ‘ಎ‘ನಲ್ಲಿ ಸ್ಥಾನ (India Women’s Stars) ಪಡೆದಿದ್ದಾರೆ.

ಮಧ್ಯಮ ವೇಗದ ಬೌಲರ್ ರೇಣುಕಾ ಸಿಂಗ್ ಠಾಕೂರ್, ಜೆಮೈಮಾ ರಾಡ್ರಿಗ್ಸ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಗ್ರೇಡ್ ‘ಬಿ‘ನಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಸಕ್ತ ವರ್ಷ ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಏಕೈಕ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್. ಮೇಘನಾ ಸಿಂಗ್, ದೇವಿಕಾ ವೈದ್ಯ, ಸಬ್ಬಿನೇನಿ ಮೇಘನಾ, ಅಂಜಲಿ ಸರ್ವಾನಿ, ಪೂಜಾ ವಸ್ತ್ರಕಾರ್, ಸ್ನೇಹ್ ರಾಣಾ, ರಾಧಾ ಯಾದವ್, ಹರ್ಲೀನ್ ಡಿಯೋಲ್ ಮತ್ತು ಯಸ್ತಿಕಾ ಭಾಟಿಯಾ ಗ್ರೇಡ್ ‘ಸಿ‘ನಲ್ಲಿ ಸ್ಥಾನ ಪಡೆದಿದ್ದಾರೆ.

ಯಾವ ಗ್ರೇಡ್‘ಗೆ ಎಷ್ಟು ಸಂಭಾವನೆ ಎಂಬುದನ್ನು ಬಿಸಿಸಿಐ ಬಹಿರಂಗ ಪಡಿಸಿಲಲ್ಲ. ಕಳೆದ ಸಾಲಿನಲ್ಲಿ ಗ್ರೇಡ್ ‘ಎ‘ ಆಟಗಾರ್ತಿಯರಿಗೆ 50 ಲಕ್ಷ ರೂ., ಗ್ರೇಡ್ ‘ಬಿ‘ ಆಟಗಾರ್ತಿಯರಿಗೆ 30 ಲಕ್ಷ ರೂ. ಹಾಗೂ ಗ್ರೇಡ್ ‘ಸಿ‘ನಲ್ಲಿ ಸ್ಥಾನ ಪಡೆದ ಆಟಗಾರ್ತಿಯರಿಗೆ 10 ಲಕ್ಷ ರೂ.ಗಳನ್ನು ಬಿಸಿಸಿಐ ನಿಗದಿ ಪಡಿಸಿತ್ತು.

BCCI Announces Annual Player Retainership For Women’s Stars : ಬಿಸಿಸಿಐ ಬಿಡುಗಡೆಗೊಳಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡದ ವಾರ್ಷಿಕ ಒಪ್ಪಂದ ಪಟ್ಟಿ :


ಗ್ರೇಡ್ ‘ಎ’

  1. ಹರ್ಮನ್ ಪ್ರೀತ್ ಕೌರ್
  2. ಸ್ಮೃತಿ ಮಂಧನ
  3. ದೀಪ್ತಿ ಶರ್ಮಾ

ಗ್ರೇಡ್ ‘ಬಿ’

  1. ರೇಣುಕಾ ಸಿಂಗ್ ಠಾಕೂರ್
  2. ಜೆಮೈಮಾ ರಾಡ್ರಿಗ್ಸ್
  3. ಶೆಫಾಲಿ ವರ್ಮಾ
  4. ರಿಚಾ ಘೋಷ್
  5. ರಾಜೇಶ್ವರಿ ಗಾಯಕ್ವಾಡ್

ಇದನ್ನೂ ಓದಿ : Virat Kohli: ಐಪಿಎಲ್‌ನಲ್ಲಿ ನಾಯಕನಾಗಿ ಅತೀ ಹೆಚ್ಚು ರನ್; ಧೋನಿ, ರೋಹಿತ್‌ಗಿಂತ ಕಿಂಗ್ ಕೊಹ್ಲಿಯೇ ಬೆಸ್ಟ್

ಇದನ್ನೂ ಓದಿ : Delhi Capitals : ಮಹಿಳೆಯೊಂದಿಗೆ ಅನುಚಿತ ಡೆಲ್ಲಿ ಆಟಗಾರನ ವರ್ತನೆ, ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದ ಕ್ಯಾಪಿಟಲ್ಸ್ ಫ್ರಾಂಚೈಸಿ

ಇದನ್ನೂ ಓದಿ : Kohli Vs Siraj : ಚಿನ್ನಸ್ವಾಮಿಯಲ್ಲಿ ಸಿರಾಜ್ ಬೆವರಿಳಿಸಿದ ಕಿಂಗ್, ಐಪಿಎಲ್‌ನ ಬೆಸ್ಟ್ ಬೌಲರ್‌ಗೆ ಹಿಗ್ಗಾಮುಗ್ಗ ಬಾರಿಸಿದ ವಿರಾಟ್ : ವೀಡಿಯೊ ವೈರಲ್

ಗ್ರೇಡ್ ‘ಸಿ’

  1. ಮೇಘನಾ ಸಿಂಗ್
  2. ದೇವಿಕಾ ವೈದ್ಯ
  3. ಸಬ್ಬಿನೇನಿ ಮೇಘನಾ
  4. ಅಂಜಲಿ ಸರ್ವಾನಿ
  5. ಪೂಜಾ ವಸ್ತ್ರಕಾರ್
  6. ಸ್ನೇಹ್ ರಾಣಾ
  7. ರಾಧಾ ಯಾದವ್
  8. ಹರ್ಲೀನ್ ಡಿಯೋಲ್
  9. ಯಸ್ತಿಕಾ ಭಾಟಿಯಾ

India Women’s Stars : BCCI published the contract list of women’s cricket team, how many lakhs to whom? How many Karnataka players in the list?

Comments are closed.