ಹೈದರಾಬಾದ್ : ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಚಿತ್ರರಂಗದ ಗಣ್ಯರಿಗೂ ಕೊರೋನಾ ಸೋಂಕು ತಗುಲುತ್ತಿದೆ. ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ನಂತರ ಇದೀಗ ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಅವರ ಕುಟುಂಬಕ್ಕೂ ಕೊರೋನಾ ವಕ್ಕರಿಸಿದೆ.

‘ಕೆಲ ದಿನಗಳ ಹಿಂದೆ ನನಗೂ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಜ್ವರ ಬಂದಿತ್ತು. ಆನಂತರ ಅದು ಕಮ್ಮಿ ಆಗಿತ್ತು. ಆನಂತರ ಕೋವಿಡ್19 ಪರೀಕ್ಷೆ ಮಾಡಿಲಾಯಿತು. ಆದ್ರೀಗ ವರದಿಯಲ್ಲಿ ಕೊರೊನಾ ಪಾಸಿಟಿವ್ ಇದೆ ಅಂತ ಬಾಹುಬಲಿ ನಿರ್ದೇಶಕ ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ವೈದ್ಯರ ಸೂಚನೆಯ ಹಿನ್ನೆಲೆಯಲ್ಲಿ ಕುಟುಂಬದವರೆಲ್ಲ ಹೋಮ್ ಕ್ವಾರಂಟೈನ್ ಆಗಿದ್ದೇವೆ. ನಾವೆಲ್ಲರೂ ಈಗ ಆರಾಮಾಗಿದ್ದೇವೆ. ಆದರೆ, ಎಲ್ಲ ಮುನ್ನೆಚ್ಚರಿಕೆಗಳು ಮತ್ತು ಸೂಚನೆಗಳನ್ನು ಅನುಸರಿಸುತ್ತಿದ್ದೇವೆ. ನಾವೆಲ್ಲ ರೋಗ ನಿರೋಧಕಶಕ್ತಿಯನ್ನು ವೃದ್ಧಿಸಿಕೊಂಡು, ಪ್ಲಾಸ್ಮಾ ದಾನ ಮಾಡುವುದಕ್ಕಾಗಿ ಕಾಯುತ್ತಿದ್ದೇವೆ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.