ಕೋವಿಡ್ ಡ್ಯೂಟಿ ಮುಗಿಸಿ ಬಂದ ನರ್ಸ್ ಪತ್ನಿಯನ್ನೇ ಕೊಂದ ಪತಿ !

0

ವಾಷಿಂಗ್ಟನ್ : ಆಕೆ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ ಪತ್ನಿ ಆಸ್ಪತ್ರೆಯಿಂದ ಹೊರಬಂದಿದ್ದಾಳೆ. ಆದರೆ ಅಲ್ಲಿಯೇ ಇದ್ದ ಆಕೆ ಪತಿ ಚಾಕುವಿನಿಂದ ಇರಿದು ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋದು ಅಮೇರಿಕಾದಲ್ಲಿ.

ಕೇರಳದ ಕೊಟ್ಟಾಯಂನ ಮೂಲದ ಮೆರಿನ್ ಜಾಯ್ (26) ಎಂಬಾಕೆಯೇ ಕೊಲೆಯಾದ ನರ್ಸ್. ಮೆರಿನ್ ಜಾಯ್ ಕಳೆದ ಹಲವು ವರ್ಷಗಳಿಂದಲೂ ವಾಷಿಂಗ್ಟನ್ ನ ಬ್ರೋವರ್ಡ್ ಹೆಲ್ತ್ ಕೋರಲ್ ಸ್ಟ್ರೀಂಗ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಇದೀಗ ಕೊರೊನಾ ಸೋಂಕು ಹೆಚ್ಚುತ್ತಿರೋದ್ರಿಂದಾಗಿ ಆಕೆ ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸಿದ್ದಾಳೆ.

ಇನ್ನೇನು ಮನೆಗೆ ಹೋಗೋಣಾ ಅಂತಾ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆಯಲ್ಲಿ ಆಕೆಯ ಪತಿ ಆರೋಪಿ ಫಿಲಿಪ್ ಮ್ಯಾಥ್ಯೂ ಅಲಿಯಾಸ್ ನೆವಿನ್ (34) ಆಸ್ಪತ್ರೆಯ ಹೊರಗೆ ನಿಂತುಕೊಂಡಿದ್ದ. ಆಕೆ ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆಯೇ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ತನ್ನ ಕೈಯಲ್ಲಿದ್ದ ಚಾಕುವಿನಿಂದ ಸಾಕಷ್ಟು ಬಾರಿ ಇರಿದಿದ್ದಾನೆ.

ಮೆರಿನ್ ಜಾಯ್ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ರೆ, ಪಾಪಿ ಪತಿ ಪಾರ್ಕಿಂಗ್ ಸ್ಥಳದಲ್ಲಿದ್ದ ತನ್ನ ಕಾರನ್ನು ತಂದು ಪತ್ನಿಯ ಮೇಲೆಯೇ ಹರಿಸಿದ್ದಾನೆ. ಕೂಡಲೇ ಮೆರಿನ್ ಜಾಯ್ ಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಮೆರಿನ್ ಜಾಯ್ ನೆವಿನ್ ಜೊತೆಗೆ ಅಮೇರಿಕಾದಲ್ಲಿ ಬದುಕು ಕಟ್ಟಿಕೊಂಡಿದ್ದಳು. ಚೆನ್ನಾಗಿಯೇ ಇದ್ದ ದಂಪತಿಗಳ ನಡುವೆ ವಿರಸ ಮೂಡಿತ್ತು. ಹೀಗಾಗಿಯೇ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಅಲ್ಲದೇ ಹಲವು ಸಮಯಗಳಿಂದಲೂ ಇಬ್ಬರೂ ದೂರವಾಗಿದ್ದರು.

ಇದೇ ಕಾರಣದಿಂದಲೇ ಈ ಕೃತ್ಯ ನಡೆದಿದೆ ಅಂತಾ ಮೆರಿನ್ ಸಂಬಂಧಿಕರು ಹೇಳುತ್ತಿದ್ದಾರೆ. ಆದರೆ ಅಮೇರಿಕಾ ಪೊಲೀಸರು ಆರೋಪಿ ನೆವಿನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.