ಹೈದರಾಬಾದ್ : ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ(Rajamouli Next Film Hero ) ಮುಟ್ಟಿದ್ದೆಲ್ಲ ಚಿನ್ನ ಅನ್ನೋದು ಆರ್ ಆರ್ ಆರ್ ಸಿನಿಮಾದ ಮೂಲಕ ಸಾಬೀತಾಗಿದೆ. ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಿ ಒಂದು ವಾರ ಪೂರೈಸಿದ್ದು, ಮೊದಲನೆ ದಿನವೇ 130 ಕೋಟಿ ಗಳಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವಂತೆ ಮಾಡಿದೆ. ಮೂರನೇ ದಿನ 100.3 ಕೋಟಿ ಗಳಿಸಿದೆ. ಈ ತನಕ ಆರ್ ಆರ್ ಆರ್ ಸಿನಿಮಾ ಗಳಿಸಿರುವ ಮೊತ್ತ 440 ಕೋಟಿ ಎನ್ನುವ ಅಂದಾಜಿದೆ. ಇದಲ್ಲದೆ ಸ್ಯಾಟಲೈಟ್, ಆಡಿಯೋ ಹಕ್ಕುಗಳ ಮಾರಾಟ ಎಲ್ಲವೂ ಸೇರಿಸಿದರೆ 500 ಕೋಟಿ ದಾಟಿದೆ ಎನ್ನಲಾಗುತ್ತಿದೆ. ಆರ್ ಆರ್ ಆರ್ ಸಿನಿಮಾದ ಒಟ್ಟಾರೆ ಗಳಿಕೆ 800 ಕೋಟಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ.
ಈ ದಾಖಲೆಗೆ ಕಾರಣರಾದ ನಿರ್ದೇಶಕ ರಾಜಮೌಳಿ ಮುಂದಿನ(Rajamouli Next Film Hero) ಸಿನಿಮಾ ಯಾವುದು, ಆ ಸಿನಿಮಾದ ಹೀರೋ ಯಾರಾಗಬಹುದು ಅನ್ನೋ ಲೆಕ್ಕಾಚಾರ ಕೂಡ ಈಗಾಗಲೇ ಶುರುವಾಗಿದೆ. ರಾಜಮೌಳಿ ಮಾತ್ರ ಈ ಬಗ್ಗೆ ಮೌನವಾಗಿ ಯಶಸ್ಸನ್ನು ಅರಗಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಆರ್ ಆರ್ ಆರ್ ಸಿನಿಮಾ 6 ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆನಂತರ, ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬು ಸಿನಿಮಾ ನಿರ್ದೇಶನ ಮಾಡಬೇಕಿತ್ತು. ಅದು ಇನ್ನೆರಡು ತಿಂಗಳಲ್ಲಿ ಬಿಡಗಡೆ ಕೂಡ ಆಗುವ ಲೆಕ್ಕಾಚಾರ ಮಾಡಿಯಾಗಿತ್ತು.
ಕೊರೋನಾ ಕಾರಣದಿಂದಾಗಿ ಆರ್ ಆರ್ ಆರ್ ಸಿನಿಮಾ ಮೂರು ಬಾರಿ ಮುಂದೂಡಲ್ಪಟ್ಟಿದ್ದರಿಂದ ಕಾದು, ಕಾದು ನಟ ಮಹೇಶ್ ಬಾಬು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈಗ ಬಂದಿರುವ ವಿಶೇಷ ಸುದ್ದಿ ಏನೆಂದರೆ, ರಾಜಮೌಳಿ, ಮಹೇಶ್ ಬಾಬು ಸಿನಿಮಾವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರೆ ಅನ್ನೋದು. ಫಾರ್ ಎ ಟೈಂ ಬೀಯಿಂಗ್ ಮಹೇಶ್ ಬಾಬು ಆರ್ ಆರ್ ಆರ್ ಬಿಡುಗಡೆಗೊಂಡು, ಯಶಸ್ಸಿನಿಂದ ರಾಜಮೌಳಿ ಸುಧಾರಿಸಿಕೊಳ್ಳುವ ಈ ಗ್ಯಾಪಲ್ಲಿ ಮಹೇಶ್ ಬಾಬು ಈಗ ಒಪ್ಪಿಕೊಂಡಿರುವ ಚಿತ್ರ ಮುಗಿಸುವ ಯೋಜನೆ ಹಾಕಿಕೊಂಡಿದ್ದಾರಂತೆ. ರಾಜಮೌಳಿ ಅವರಿಗೆ ದೊರೆತಿರುವ ಈ ಯಶಸ್ಸು ಈಗ ಮಹೇಶ್ ಬಾಬು ಅವರಲ್ಲಿ ಉತ್ಸಾಹ ಮೂಡಿಸಿರುವುದಂತು ಸತ್ಯ. ಆರ್ ಆರ್ ಆರ್ ಯಶಸ್ಸನ್ನು ನೋಡಿಕೊಂಡೇ ಮಹೇಶ್ ಬಾಬು ಕಾಲ್ ಶೀಟ್ ಕೊಡುವ ನಿರ್ಧಾರದಲ್ಲಿದ್ದರು ಅನ್ನೋ ಮಾತೂ ಕೂಡ ಇದೆ.
ಇದನ್ನೂ ಓದಿ: RRR Trailer Twitter Review: ಆರ್‌ಆರ್‌ಆರ್ ದೃಶ್ಯ ಕಥನ ವೈಭವ; ಟ್ರೇಲರ್ ಹುಟ್ಟಿಸಿದ ರೋಚಕತೆ; ಇಲ್ಲಿದೆ ಟ್ವಿಟರ್ ರಿವ್ಯೂ
ಈ ಮಧ್ಯೆ ರಾಜಮೌಳಿ ಅವರ ತಂದೆ ವಿಜಯ್ ಪ್ರಸಾದ್ ಇತ್ತೀಚಿಗಿನ ಸಂದರ್ಶನ ವೊಂದರಲ್ಲಿ ಮಗ ರಾಜಮೌಳಿ ಮಹೇಶ್ ಬಾಬು ಅವರಿಗಾಗಿ ಸಿನಿಮಾ ಮಾಡುವುದರ ಬಗ್ಗೆ ಸುಳಿವು ನೀಡಿದ್ದಾರೆ. ‘ಮಹೇಶ್ ಬಾಬು ಅವರಿಗಾಗಿಯೇ ವಿಶೇಷ ಕತೆಯೊಂದನ್ನು ಸಿದ್ಧ ಮಾಡಿದ್ದು, ಸಿನಿಮಾ ಆಫ್ರಿಕನ್ ಕಾಡಿನ ಹಿನ್ನೆಲೆಯಲ್ಲಿ ಚಿತ್ರೀಕರಣವಾಗಲಿದೆ. ಜೇಮ್ಸ್ ಬಾಂಡ್ ಅವರ ಸ್ಪೈ ಥ್ರಿಲ್ಲರ್ ಥರವೇ ಈ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ’ ಎನ್ನುವ ಮೂಲಕ ರಾಜಮೌಳಿ ಮುಂದಿನ ಚಿತ್ರ ಪ್ರಿನ್ಸ್ ಜೊತೆಗೆ ಅನ್ನೋದನ್ನು ಖಾತ್ರಿ ಮಾಡಿದ್ದಾರೆ.
ಇನ್ನೊಂದು ಮೂಲದ ಪ್ರಕಾರ ರಾಜಮೌಳಿ ಅವರ ಈ ಚಿತ್ರದ ಬಜೆಟ್ 800 ಕೋಟಿ ಎನ್ನಲಾಗುತ್ತಿದೆ. ಆರ್ ಆರ್ ಆರ್ ಸಿನಿಮಾಕ್ಕೆ 400 ಕೋಟಿ ಹೂಡಿಕೆ ಮಾಡಲಾಗಿದ್ದು, ಅದು ಸಿನಿಮಾ ಬಿಡುಗಡೆಗೂ ಮುನ್ನವೇ ವಾಪಸ್ಸು ಬಂದಾಗಿದೆ. ಆದರೆ, ರಾಜಮೌಳಿ–ಮಹೇಶ್ ಬಾಬು ಅವರ ಹೊಸ ಸಿನಿಮಾದ ಬಗ್ಗೆ ಚಿತ್ರತಂಡದವರು ತುಟಿ ಬಿಚ್ಚಿಲ್ಲ. ಆರ್ ಆರ್ ಆರ್ ಗೆಲುವಿನಿಂದ ನಿರ್ಧಾರಗಳು ಬದಲಾಗಲಿವೆಯೇ ಅನ್ನೋದು ತಿಳಿದು ಬಂದಿಲ್ಲ.
ಮಹೇಶ್ ಬಾಬು ಅವರಿಗೆ ಪಾನ್ ಇಂಡಿಯಾ ಮಾರ್ಕೆಟ್ ಇಲ್ಲ. ಹೀಗಾಗಿ, 800 ಕೋಟಿ ಬಜೆಟ್ ಬಹಳ ದುಬಾರಿಯಾಗಲಿದ್ದು, ಮಹೇಶ್ ಬಾಬು ಈ ವಿಚಾರದಲ್ಲಿ ಬಹಳ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲವೂ ಬಾಹುಬಲಿಯಂತೆ ಹಣ ತಂದುಕೊಡುತ್ತದೆ ಅಂತ ನಂಬುವುದು ಹೇಗೆ ಎನ್ನುವ ಮಾತುಕೂಡ ಕೇಳಿಬರುತ್ತಿದೆ.
ರಾಜಮೌಳಿ ಭಾವನಾತ್ಮಕ ಸನ್ನಿವೇಶಗಳ ಮೂಲಕ ಚಿತ್ರಕಥೆ ಕಟ್ಟುವುದರಲ್ಲಿ ಎತ್ತಿದ ಕೈ. ಸ್ಪೈ ಥ್ರಿಲ್ಲರ್ ಕಥೆಯಲ್ಲಿ ಭಾವನೆಗಳಿಗೆ ಜಾಗ ಇರುವುದಿಲ್ಲ. ಹೀಗಾಗಿ, ರಾಜಮೌಳಿ- ಮಹೇಶ್ ಬಾಬು ಅವರ ಹೊಸ ಚಿತ್ರದಲ್ಲಿ ಹೇಗೇಗೆಲ್ಲ ಎಮೋಷನ್ ತರುತ್ತಾರೆ ಅನ್ನೋ ಕುತೂಹಲವನ್ನು ಸಿನಿಮಾ ಪಂಡಿತರು ಈಗಾಗಲೇ ವ್ಯಕ್ತಪಡಿಸಿದ್ದಾರೆ.
ಏನೇ ಆಗಲಿ, ರಾಜಮೌಳಿ ಈಗಾಗಲೇ ಮಹೇಶ್ ಬಾಬು ಸಿನಿಮಾಕ್ಕೆ ಒಪ್ಪಿಗೆ ನೀಡಿರುವುದರಿಂದ ಈ ಇಬ್ಬರೂ ಸೇರಿ ಮತ್ತೊಂದು ಮೈಲಿಗಲ್ಲು ನೆಡಬಹುದು ಅನ್ನೋ ನಿರೀಕ್ಷೆ ಆರ್ ಆರ್ ಆರ್ ಅದ್ಬುತ ಗೆಲುವಿನ ನಂತರ ಮತ್ತೆ ಗರಿಗೆದರಿದೆ.
ಇದನ್ನೂ ಓದಿ: Sai Pallavi : ನಟನೆಗೆ ವಿದಾಯ ಹೇಳಿದ್ರಾ ಪ್ರೇಮಂ ಬೆಡಗಿ ಸಾಯಿ ಪಲ್ಲವಿ
(Rajamouli Next Film Hero Will he is the RRR Director Rajamouli next film hero)