ಎಸ್ ಎಸ್ ರಾಜಮೌಳಿ ನಿರ್ದೇಶನದ ದೃಶ್ಯ ವೈಭೋಗದ ಆರ್‌ಆರ್‌ಆರ್ ಸಿನಿಮಾ (Rajamouli RRR ) ಬಿಡುಗಡೆಗೆ ಹೊಸ ಮುಹೂರ್ತ ನಿಗದಿಯಾಗಿದೆ. ಮಾರ್ಚ್ 18 ಹಾಗೂ ಎಪ್ರಿಲ್ 28 ಎರಡು ಪ್ರಮುಖ ದಿನಗಳನ್ನು ಲಾಕ್ ಮಾಡಿದ್ದ ರಾಜಮೌಳಿ ಈ ಎರಡು ದಿನಗಳನ್ನು ಬಿಟ್ಟು ಈಗ ಹೊಸ ದಿನಾಂಕವನ್ನು ಅನೌನ್ಸ್ ಮಾಡಿದ್ದಾರೆ. ಅದಕ್ಕೆ ಕಾರಣ ಜೇಮ್ಸ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಸಿನಿಮಾ ಮಾರ್ಚ್ 17 ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಈಗಾಗ್ಲೇ ಸಜ್ಜಾಗಿದೆ. ಹೀಗಾಗಿ ರಾಜಮೌಳಿ ಅಪ್ಪುಗಾಗಿ ತಮ್ಮ ದಾರಿ ಬದಲಿಸಿದ್ದಾರೆ.
ದೇಶದಲ್ಲಿ ಕೊರೋನಾ ಪ್ರಕರಣಗಳು ಕೊಂಚ ಕೊಂಚವೇ ಕಡಿಮೆಯಾಗುತ್ತಿವೆ. ಹಾಗೇಯೇ ಕೆಲ ರಾಜ್ಯಗಳಲ್ಲಿ 100 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ,. ಹೀಗಾಗಿ ರಾಜಮೌಳಿ ಗಟ್ಟಿ ಮನಸು ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್, ರಾಮ್ ಚರಣ್ ತೇಜ, ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡ ತಾರಾಬಳಗ ವೇ ನಟಿಸಿರುವ ಆರ್‌ಆರ್‌ಆರ್ ಸಿನಿಮಾ ಈಗಾಗ್ಲೇ ಕುತೂಹಲದ ಚಿಟ್ಟೆಯಾಗಿದೆ.
ಆರ್‌ಆರ್‌ಆರ್ ಚಿತ್ರದಲ್ಲಿ ನಟ ರಾಮಚರಣ್ ತೇಜ್ ಅವರು ಅಲ್ಲುರಿ ಸೀತಾ ರಾಮರಾಜು ಪಾತ್ರದಲ್ಲಿ, ಜ್ಯೂನಿಯರ್ ಎನ್‌ಟಿಆರ್ ಅವರು ಕೊಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್‌ಆರ್‌ಆರ್ ಸಂಪೂರ್ಣ ಕಾಲ್ಪನಿಕ ಸಿನಿಮಾವಾಗಿದ್ದು, ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಂ ಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ ಆರ್‌ಆರ್‌ಆರ್ ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಲಿದೆ.
ಸ್ಯಾಂಡಲ್‌ವುಡ್‌ನ ರಾಜಕುಮಾರ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲಿದೆ. ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲು ಈಗಾಗಲೇ ಸ್ಯಾಂಡಲ್‌ವುಡ್ ಸಜ್ಜಾಗಿದೆ. ಇದೇ ಹಾದಿಯಲ್ಲಿ ಇದೀಗ ರಾಜಮೌಳಿ ಕೂಡ ತಮ್ಮ ಕನಸಿನ ಸಿನಿಮಾ ರಿಲೀಸ್ ಡೇಟ್ ಮುಂದೂಡಿದ್ದಾರೆ. ಈ ಮೂಲಕ ಅಪ್ಪು ಅವರಿಗೆ ರಾಜಮೌಳಿ ವಿಭಿನ್ನವಾಗಿ ಗೌರವ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ ಸೆಳೆದ ದಿಶಾ ಮದನ್
ಇದನ್ನೂ ಓದಿ : ಚಿನ್ನದ ಗೌನ್, ವಜ್ರದ ಅಲಂಕಾರ : ಬಾಲಿವುಡ್ ಬೆಡಗಿ ಊರ್ವಶಿ ಒಂದು ರಾಂಪ್‌ವಾಕ್ ಗೆ 40 ಕೋಟಿ ಡ್ರೆಸ್
( Rajamouli RRR releasing on Postpone to March 25th movie for Reason Puneeth Rajkumar James )