West Bengal CM Mamata Banerjee : ರಾಜ್ಯಪಾಲರನ್ನು ಟ್ವಿಟರ್​ನಿಂದ ಬ್ಲಾಕ್​ ಮಾಡಿದ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

West Bengal CM Mamata Banerjee : ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಾವು ಟ್ವಿಟರ್​ನಲ್ಲಿ ರಾಜ್ಯಪಾಲ ಜಗದೀಪ್​​ ಧನಕರ್​ರನ್ನು ಬ್ಲಾಕ್​ ಮಾಡಿರುವುದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧನಕರ್​​ ಭಾನುವಾರದಂದು ರಾಜ್ಯದಲ್ಲಿ ಪ್ರಜಾಪ್ರಭುತ್ವವವು ಗ್ಯಾಸ್​ ಛೇಂಬರ್​ ಆಗಿದೆ ಎಂದು ಟ್ವೀಟಾಯಿಸಿದ್ದರು. ಇದರಿಂದ ಕೋಪಗೊಂಡಿರುವ ಮಮತಾ ಬ್ಯಾನರ್ಜಿ ಇಂದು ರಾಜ್ಯಾಪಾಲ ಜಗದೀಪ್​​ ಧನಕರ್​​ರ ಟ್ವಿಟರ್​ ಖಾತೆಯನ್ನು ನಿರ್ಬಂಧಿಸಿದ್ದಾರೆ.

ರಾಜ್ಯಪಾಲ ಜಗದೀಪ್​ ಧನಕರ್​​ ಪ್ರತಿದಿನ ಸರ್ಕಾರ ಹಾಗೂ ಸರ್ಕಾರಿ ಅಧಿಕಾರಿಗಳನ್ನು ನಿಂದಿಸಲು ಏನಾದರೊಂದು ಟ್ವೀಟ್​ ಮಾಡುತ್ತಲೇ ಬರ್ತಿದ್ದಾರೆ. ಸಂವಿಧಾನ ವಿರೋಧಿ, ಅನೈತಿಕ ವಿಚಾರಗಳನ್ನೇ ಟ್ವೀಟ್​ ಮಾಡುತ್ತಾರೆ. ರಾಜ್ಯಪಾಲರಾಗಿ ಅವರು ಸರ್ಕಾರಕ್ಕೆ ಯಾವುದೇ ಸಲಹೆ ನೀಡುತ್ತಿಲ್ಲ. ಆದರೆ ಚುನಾಯಿತ ಸರ್ಕಾರವನ್ನು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಕಾರ್ಮಿಕರಂತೆ ನಡೆಸಿಕೊಳ್ತಿದ್ದಾರೆ. ಅವರ ವರ್ತನೆಯಿಂದ ರೋಸಿ ಹೋಗಿರುವ ನಾನು ಧನಕರ್​ರನ್ನು ಟ್ವಿಟರ್​ನಿಂದ ಬ್ಲಾಕ್​ ಮಾಡಿದ್ದೇನೆ ಎಂದು ಸುದ್ದಿಗೋಷ್ಠಿ ನಡೆಸಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ರಾಜ್ಯಪಾಲರನ್ನು ಧನ್​ಕರ್​ರನ್ನು ಪದಚ್ಯುತಿಗೊಳಿಸುವಂತೆ ಒತ್ತಾಯಿಸಿ ನಾನು ಪ್ರಧಾನಿ ಮೋದಿಗೆ ಹಲವು ಬಾರಿ ಪತ್ರ ಬರೆದಿದ್ದೇನೆ. ಆದರೆ ಇದುವರೆಗೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮಹಾತ್ಮ ಗಾಂಧಿಯ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜ್ಯಪಾಲ ಧನಕರ್​​ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಟ್ವಿಟರ್​ನಲ್ಲಿ ಪಶ್ಚಿಮ ಬಂಗಾಳ ಸರ್ಕಾರವನ್ನು ಪ್ರಜಾಪ್ರಭುತ್ವದ ಕೊಲೆಗಾರ ಎಂದು ಜರಿದಿದ್ದರು. ಬಂಗಾಳದ ಪವಿತ್ರ ಭೂಮಿಯಲ್ಲಿ ಹಿಂಸಾಚಾರ ಹಾಗೂ ಮಾನವ ಹಕ್ಕುಗಳ ಮೇಲೆ ತುಳಿದ ಪ್ರಯೋಗಾಲಯವನ್ನು ನಾನು ನೋಡಲು ಬಯಸುವುದಿಲ್ಲ. ರಾಜ್ಯವು ಪ್ರಜಾಪ್ರಭುತ್ವದ ಗ್ಯಾಸ್​ ಛೇಂಬರ್​​ ಆಗಿ ಬದಲಾಗುತ್ತಿದೆ ಎಂದು ಜನರೇ ಹೇಳುತ್ತಾರೆ ಎಂದು ಟ್ವೀಟಾಸ್ತ್ರ ಪ್ರಯೋಗಿಸಿದ್ದರು.

Have blocked Governor Jagdeep Dhankhar’s Twitter account, says West Bengal CM Mamata Banerjee

ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್‌ ಗುಂಗುನ್‌ ಉಪಾಧ್ಯಾಯ ಆತ್ಮಹತ್ಯೆ ಯತ್ನ

ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

Comments are closed.