Bigg boss Kannada : ಬಿಗ್ಬಾಸ್ ಶೋ ಅಂದರೆ ಅಲ್ಲೊಂದು ಲವ್ ಸ್ಟೋರಿ ಆರಂಭವಾಗೋದು ಹೊಸದೇನಲ್ಲ. ಎಲ್ಲಾ ಸೀಸನ್ನಲ್ಲಿಯೂ ಇಂತಹದ್ದೊಂದು ಕತೆ ಇದ್ದೇ ಇರುತ್ತೆ. ಇದಕ್ಕೆ ಬಿಗ್ಬಾಸ್ ಒಟಿಟಿ ಕೂಡ ಹೊಸದಾಗಿಲ್ಲ. ಬಿಗ್ಬಾಸ್ ಒಟಿಟಿ ಸ್ಪರ್ಧಿಗಳಾದ ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಗೌಡ ನಡುವೆ ಸಮ್ಥಿಂಗ್ ಸಮ್ಥಿಂಗ್ ನಡೀತಾ ಇದೆ ಅನ್ನೋದು ಎಲ್ಲಾ ಕಡೆ ಚರ್ಚೆ ಆಗ್ತಾ ಇದೆ. ಈ ಬಗ್ಗೆ ವೀಕೆಂಡ್ ಎಪಿಸೋಡ್ನಲ್ಲಿಯೂ ಚರ್ಚೆಯಾಗಿದ್ದು ಆ ಬಳಿಕ ಸ್ಪೂರ್ತಿ ಗೌಡ ರಾಕೇಶ್ರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಸೋನುಗೌಡನಿಗೆ ರಾಕೇಶ್ ಅಡಿಗ ಅಂದರೆ ಇಷ್ಟ. ಸೋನು ಗೌಡನಿಗೆ ಉರಿಸಬೇಕೆಂದು ಸ್ಫೂರ್ತಿ ಗೌಡ ರಾಕೇಶ್ ಅಡಿಗನಿಗೆ ಹತ್ತಿರವಾಗಿದ್ದಾರೆ. ರಾಕೇಶ್ ಅಡಿಗ ಹಾಗೂ ಸ್ಪೂರ್ತಿ ಗೌಡ ನಡುವಿನ ಸ್ನೇಹಕ್ಕೆ ದೊಡ್ಮನೆ ಸದಸ್ಯರು ಬೇರೆಯದ್ದೇ ಬಣ್ಣ ಹಚ್ಚುತ್ತಿದ್ದಾರೆ. ವೀಕೆಂಡ್ನಲ್ಲಿ ಸುದೀಪ್ ಜೊತೆ ಈ ವಿಚಾರವಾಗಿ ಮಾತನಾಡಿದ್ದ ಜಯಶ್ರೀ ಸ್ಪೂರ್ತಿ ಯಾವಾಗಲೂ ರಾಕೇಶ್ ಜೊತೆಯೇ ಇರ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ : Bigg Boss : ಸೋನುಗೌಡಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ
Over the top banters with Rishab and Tapaswini.😍
— Voot (@justvoot) August 15, 2022
Watch Bigg Boss Kannada OTT streaming live now, only on Voot.@KicchaSudeep @VootSelect
Presented by @VimalElaichi
#BiggBossOTT #BiggBossKannadaOTT #BBOTTKOnVoot #VootSelect #KicchaSudeepa #Voot pic.twitter.com/bDu0DhxEN1
ಜಯಶ್ರೀಯ ಈ ಹೇಳಿಕೆ ಸ್ಪೂರ್ತಿ ಮನಸ್ಸಿಗೆ ಘಾಸಿಯುಂಟು ಮಾಡಿದೆ. ರಾತ್ರಿ ಈ ಸಂಬಂಧ ಜಯಶ್ರೀ ಜೊತೆ ಮಾತನಾಡಿದ ಸ್ಪೂರ್ತಿ ಈ ಬಗ್ಗೆ ಸ್ಪಷ್ಟನೆ ಕೂಡ ಕೇಳಿದ್ದಾರೆ. ಇದಕ್ಕೆ ಜಯಶ್ರೀ ನನಗೆ ಅನಿಸಿದ್ದನ್ನು ಹೇಳಿದ್ದೇನೆಂದು ಉತ್ತರ ನೀಡಿದ್ದಾರೆ. ರಾಕೇಶ್ ಜೊತೆಗಿನ ಸ್ನೇಹ ತಮ್ಮ ಆಟಕ್ಕೆ ಮುಳುವಾಗುತ್ತಿದೆ ಎಂದು ಅರಿತಿರುವ ಸ್ಫೂರ್ತಿ ಗೌಡ ರಾಕೇಶ್ರಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಅಲ್ಲದೇ ರಾಕೇಶ್ಗೆ ಅಣ್ಣ ಎಂದೂ ಕರೆಯಲು ನಿರ್ಧರಿಸಿದ್ದಾರೆ. ರಾಕೇಶ್ರಿಂದ ಸ್ಪೂರ್ತಿ ದೂರವಾಗಿರೋದ್ರಿಂದ ಇದರ ಲಾಭವನ್ನು ಸೋನು ಗೌಡ ಪಡೆದುಕೊಳ್ಳುವ ನಿರೀಕ್ಷೆಯಿದೆ. ಇದನ್ನು ಓದಿ : Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ : Tuesday astrology : ಹೇಗಿದೆ ಮಂಗಳವಾರದ ದಿನಭವಿಷ್ಯ
Rakesh Adiga Is my Brother Says Spoorthi Gowda In Bigg boss Kannada