Bigg Boss Ott Kannada Season 1 : ಸೋನುಗೌಡಗೆ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ

Bigg Boss Ott Kannada Season 1 : ಬಿಗ್​ಬಾಸ್​ ಒಟಿಟಿ ಶೋ ಆರಂಭಗೊಂಡು ಒಂದು ವಾರಗಳೇ ಕಳೆದಿದ್ದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ವಾರದ ಹಿಂದೆಯಷ್ಟೇ ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳನ್ನು ಕಳುಹಿಸಿಕೊಟ್ಟಿದ್ದ ಕಿಚ್ಚ ಸುದೀಪ ಇದೀಗ ಮೊದಲ ಎಲಿಮಿನೇಷನ್​ ಕೂಡ ಮಾಡಿದ್ದಾರೆ. ಬಿಗ್​ಬಾಸ್​ ಒಟಿಟಿ ಕಾರ್ಯಕ್ರಮದ ಸ್ಪರ್ಧಿಗಳಲ್ಲಿ ಒಬ್ಬಾಕೆಯಾದ ಸೋನುಗೌಡನಿಗೆ ಸುದೀಪ್​ ಸೂಪರ್​ ಸಂಡೇ ವಿತ್​ ಕಿಚ್ಚ ಸುದೀಪ ಕಾರ್ಯಕ್ರಮದಲ್ಲಿ ಕ್ಲಾಸ್​ ತೆಗೆದುಕೊಂಡಿದ್ದಾರೆ .


ಬಿಗ್​ಬಾಸ್​ ಮನೆಯಲ್ಲಿ ಸೂಪರ್​ ಸಂಡೇ ವಿತ್​ ಕಿಚ್ಚ ಸುದೀಪ ಶೋನಲ್ಲಿ ಯೆಸ್​ ಆರ್​ ನೋ ರೌಂಡ್​ ನಡೆಯುವುದು ಮೊದಲಿನಿಂದಲೂ ಇದೆ. ಇದೇ ಪ್ರಕ್ರಿಯೆಯನ್ನು ಬಿಗ್​ಬಾಸ್​ ಒಟಿಟಿಗೂ ಅಳವಡಿಸಲಾಗಿದೆ. ಈ ಪ್ರಶ್ನಾವಳಿಯಲ್ಲಿ ಸಾಮಾನ್ಯವಾಗಿ ಫನ್ನಿ ಪ್ರಶ್ನೆಗಳನ್ನೇ ಸುದೀಪ್​ ಕೇಳುತ್ತಾರೆ. ಅದೇ ರೀತಿ ಕಿಚ್ಚ ಸುದೀಪ್​​ ಸೋನು ಗೌಡ ವಿಚಾರವಾಗಿ ದೊಡ್ಮನೆಯ ಸದಸ್ಯರ ಎದುರು ಪ್ರಶ್ನೆಯೊಂದನ್ನು ಇಟ್ಟಿದ್ದರು.


ಸೋನುಗೌಡ ಆಯವರ್ಧನ್​ ರೀತಿಯಲ್ಲಿಯೇ ಒಂದು ಟಾಪಿಕ್​ನಿಂದ ಇನ್ನೊಂದು ಟಾಪಿಕ್​ಗೆ ಹೋಗುತ್ತಾರೆ ಎಂಬುದು ಸುದೀಪ್​ರ ಪ್ರಶ್ನೆಯಾಗಿತ್ತು. ಇದಕ್ಕೆ ಬಿಗ್​ಬಾಸ್​ ಮನೆಯ ಸ್ಪರ್ಧಿಗಳು ನೀಡಿದ ಉತ್ತರವನ್ನು ಸೋನು ಗೌಡಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಗರಂ ಆಗಿದ್ದಾರೆ. ಸೋನು ಗೌಡ ಪ್ರತಿಕ್ರಿಯೆಯನ್ನು ಕೇಳಿದ ಕಿಚ್ಚ ಸುದೀಪ್​ ತಮ್ಮದೇ ಆದ ರೀತಿಯಲ್ಲಿ ಸೋನು ಗೌಡ ಕಿವಿ ಹಿಂಡಿದ್ದಾರೆ.


ಚೈತ್ರಾ ಹಳ್ಳಿಕೇರಿ, ರಾಕೇಶ್​ ಅಡಿಗ ಸೇರಿದಂತೆ ಅನೇಕರು ಕಿಚ್ಚ ಸುದೀಪ್​ರ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಚೈತ್ರಾ ಹಳ್ಳಿಕೇರಿ ಸೋನು ಗೌಡನ ಮಾತಿಗೆ ಕನೆಕ್ಷನ್​​ ಇರಲ್ಲ ಎಂದರೆ ರಾಕೇಶ್​ ಅಡಿಗ ನನಗೆ ಇಂತಹ ಅನುಭವವಾಗಿಲ್ಲ ಎಂದಿದ್ದರು. ಈ ವೇಳೆಯಲ್ಲಿ ಮನೆಯ ಮತ್ತೊಬ್ಬ ಸ್ಪರ್ಧಿ ಸಾನ್ಯ ಅಯ್ಯರ್​, ಸೋನು ಗೌಡ ಪ್ರೌಢಿಮೆ ಇಲ್ಲದೇ ಮಾತನಾಡುತ್ತಾರೆ, ಅವರು ಆರ್ಯವರ್ಧನ್​​ರ ಅಸಿಸ್ಟಂಟ್​ ಆಗಬಹುದು ಎಂದು ಹೇಳಿದ್ದಾರೆ.


ಇದಕ್ಕೆ ಗರಂ ಆದ ಸೋನು ಗೌಡ ನನ್ನನ್ನು ಆರ್ಯವರ್ಧನ್​ ಅಸಿಸ್ಟಂಟ್​ ಎಂದು ಕರೀಬೇಡ ಎಂದು ಸಾನ್ಯಾರಿಗೆ ಗದರಿಸಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಸುದೀಪ್​, ನಿಮ್ಮಂತೆಯೇ ಆರ್ಯವರ್ಧನ್​ ಕಾಲನ್ನೂ ಎಳೆದಿದ್ದಾರೆ. ಆದರೆ ಅವರು ಏನೂ ಮಾತನಾಡದೇ ಸುಮ್ಮನಿದ್ದಾರೆ. ಇದನ್ನೇ ಕ್ರೀಡಾಭಾವನೆ ಎಂದು ಕರೆಯೋದು, ನೀವು ತಮಾಷೆ ಮಾಡಿದರೆ ಅದು ಕಾಮಿಡಿ. ಉಳಿದವರು ನಿಮ್ಮ ಮೇಲೆ ತಮಾಷೆ ಮಾಡಿದರೆ ಅವರನ್ನು ಮೂರ್ಖರು ಎಂದುಕೊಳ್ಳುವುದು ತಪ್ಪು ಎಂದು ಸೋನು ಗೌಡರ ಕಿವಿ ಹಿಂಡಿದ್ದಾರೆ .

ಇದನ್ನು ಓದಿ : rocking star Yash Radhika : ಯಶ್ ರಾಧಿಕಾ ಸ್ವಾತಂತ್ರ್ಯ ಸಂಭ್ರಮ : ಫ್ಯಾಮಿಲಿ ಜೊತೆ ಧ್ವಜಾರೋಹಣ ನಡೆಸಿದ ರಾಕಿಂಗ್ ಸ್ಟಾರ್

ಇದನ್ನೂ ಓದಿ : Aamir Khan joins Har Ghar Tiranga : ಮಿಸ್ಟರ್ ಫರ್ಪೆಕ್ಟ್ ಮನೆ ಮೇಲೆ ತ್ರಿವರ್ಣ ಧ್ವಜ : ಇದು ಸಿನಿಮಾ ಗೆಲ್ಲಿಸೋ ಗಿಮಿಕ್ ಎಂದ ಜನ

Bigg Boss Ott Kannada Season 1 Kiccha Sudeep Suggestion To Sonu Gowda

Comments are closed.