ಸೋಮವಾರ, ಏಪ್ರಿಲ್ 28, 2025
HomeCinemaಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಮಾಲ್ ಸ್ಕ್ರೀನ್ ಸ್ಟಾರ್ ರಕ್ಷಿತ್

ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಮಾಲ್ ಸ್ಕ್ರೀನ್ ಸ್ಟಾರ್ ರಕ್ಷಿತ್

- Advertisement -

ಕಲರ್ ಫುಲ್ ಲೈಫ್ ಅಂದ್ರೇನೆ ಹಾಗೇ, ಪ್ರತಿಭಾವಂತರಿಗೆ ಪ್ರತಿಫಲ ಸಿಕ್ಕೇ ಸಿಗುತ್ತೆ. ಕನ್ನಡ ಕಿರುತೆರೆ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಟಾರ್ ನಟ ರಕ್ಷಿತ್. ಹಲವಾರು ವರ್ಷಗಳಿಂದ ಸ್ಮಾಲ್ ಸ್ಕ್ರೀನ್ ಮೂಲಕ ಕಲಾ ಸರಸ್ವತಿ ಪೂಜೆ ಮಾಡ್ತಿರೋ ರಕ್ಷಿತ್ ಅವರಿಗೆ ಇಂದು ಜನ್ಮದಿನದ ಸಂಭ್ರಮ.

 ಹತ್ತು ವರ್ಷಗಳಿಂದ ಕಿರುತೆರೆಯಲ್ಲಿ ನಂಬರ್ ಒಂದು ಸೀರಿಯಲ್ ಪುಟ್ಟಗೌರಿ ಮದುವೆ ಹಾಗು ಈಗಿನ ಗಟ್ಟಿಮೇಳ ಧಾರಾವಾಹಿಯ ವರೆಗೆ ತಾವು ತಮ್ಮ ಸ್ಥಾನ ಉಳಿಸಿಕೊಂಡು  ಬಂದಿರುವ  ನಾಯಕ ರಕ್ಷ್, ಕಿರುತೆರೆಯಲ್ಲಿ ಬಹುದೊಡ್ಡ ಹೆಸರು ಗಳಿಸಿರುವ Rock Star ರಕ್ಷ್ ಗೆ ಅಭಿಮಾನಿಗಳು ಕಿರುತೆರೆಯ ಡಿಬಾಸ್ ಎಂದು ಹಾಗೂ ಸೀರಿಯಲ್ ಲೋಕದ  ಬಾದಶಾ ಎಂದು ಹೇಳ್ತಾರೆ,.ಜನಮೆಚ್ಚಿದ ನಾಯಕ ಪಟ್ಟ ಪ್ರತಿ ವರ್ಷ ರಕ್ಷ್ ಗಳಿಸಿಕೊಂಡಿದ್ದಾರೆ, ಹಾಗೆ ರಕ್ಷ್ ಬೆಳ್ಳಿತೆರೆಯಲ್ಲೂ ತಮ್ಮ ಅಭಿನಯದ ಚಪು ಮೂಡಿಸಿರುವ ರಕ್ಷ್ ಬರಿ ಕಮರ್ಷಿಯಲ್ ಸಿನಿಮಾ ಬರುತ್ತಿರುವ ಸಮಯದಲ್ಲಿ ಕನ್ನಡ ಮಣ್ಣು, ನೀರನ ಹೋರಾಟದ ನರಗುಂದ ಬಂಡಾಯದ  ಸಿನಿಮಾ ಮಾಡಿ ತಮ್ಮ ಅಭಿನಯದ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.

ಕಿರುತೆರೆ ಯಿಂದ  ಬೆಳ್ಳಿತೆರೆಗೆ ಪ್ರಯಾಣಿಸುವದು ಅಷ್ಟು ಸುಲಭವಲ್ಲ .ಈ ದಾರಿಯಲ್ಲಿ  ಹಲವಾರು ಏಳು ಬೀಳು ಕಂಡಿರೋ ರಕ್ಷ್ ಇವತ್ತು ಕಿರುತೆರೆ ಸೂಪರ್ ಸ್ಟಾರ್. ಗಟ್ಟಿಮೇಳ ಧಾರಾವಾಹಿ ಮೂಲಕವಂತೂ ಅಭಿನಯ,  ಆಟಿಟ್ಯೂಡ್, ಸ್ಟೈಲ್  ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದಾರೆ. ಮದುವೆ ಆದ್ರೂ ಸಹ ಅದೆಷ್ಟು ಹುಡ್ಗೀರ ಕ್ರಷ್ ಗೊತ್ತಿಲ್ಲ. ಪ್ರತಿಭಾವಂತ ರಕ್ಷಿತ್ ಅವರಿಗೆ ಆ ದೇವ್ರು ಒಳ್ಳೆದು ಮಾಡಲಿ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆಯಲಿ ಎಂಬುದೇ ನಮ್ ಆಶಯ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular