ಬೈಕಂಪಾಡಿಯ ಸ್ಪ್ರಿಂಗ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ : ಕೋಟ್ಯಾಂತರ ಮೌಲ್ಯದ ನಷ್ಟ

ಮಂಗಳೂರು : ಸ್ಪ್ರಿಂಗ್ ಉತ್ಪಾದನಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಷ್ಟ ಸಂಭವಿಸಿರುವ ಘಟನೆ ಮಂಗಳೂರು ಹೊರವಲಯದ ಬೈಕಂಪಾಡಿಯಲ್ಲಿ ನಡೆದಿದೆ.

ಸ್ಪ್ರಿಂಗ್ ತಯಾರಿಕೆಗೆ ಬಳಕೆಯಾಗುತ್ತಿರುವ ಅತ್ಯಾಧುನಿಕ ರೋಬೋಟ್ ಘಟಕದಲ್ಲಿ ವಿದ್ಯುತ್ ಕಡಿತವಾಗಿದ್ದು, ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಎಂಸಿಎಫ್ ಕಾರ್ಖಾನೆ, ಕದ್ರಿ ಅಗ್ನಿ ಶಾಮಕ ವಾಹನ ಹಾಗೂ ಸಿಬಂದಿಗಳು ಒಂದೂವರೆ ಗಂಟೆ ಬೆಂಕಿ ನಂದಿಸಿದ್ದಾರೆ.

ಘಟಕದಲ್ಲಿ ರಾತ್ರಿ ಪಾಳಯದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ವಿರಾಮದ ಸಮಯವಾಗಿದ್ದರಿಂದಾಗಿ ಚಹಾ ಕುಡಿಯಲು ತೆರಳಿದ್ದರು. ಇದರಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದರೆ ಘಟಕದಲ್ಲಿದ್ದ ಸುಮಾರು 90 ಸಾವಿರ ಲೀಟರ್ ಫರ್ನೆಸ್ ಆಯಿಲ್ ಸಂಗ್ರಹವಿದ್ದು, ಅಗ್ನಿ ಜ್ವಾಲೆ ಹೆಚ್ಚಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಘಟನಾ ಸ್ಥಳಕ್ಕೆ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು. ಪಣಂಬೂರು ವಲಯ ಎಸಿಪಿ ಬೆಳ್ಳಿಯಪ್ಪ ನಿರ್ದೇಶನದಲ್ಲಿ ಪಣಂಬೂರು ಎಸ್‌ಐ ಉಮೇಶ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿತ್ತು.

Comments are closed.