777 charlie movie official trailer :ಕೆಜಿಎಫ್ 2 ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಮುಂಬರುವ ಸ್ಯಾಂಡಲ್ವುಡ್ನ ಸಿನಿಮಾಗಳ ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಸಿನಿ ರಸಿಕರ ಕಣ್ಣಿಗೆ ಮತ್ತೊಂದು ಬಾಡೂಟ ನೀಡಲು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ತೆರೆಗೆ ಬರಲಲು ಸಜ್ಜಾಗಿದೆ. ಇಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಕರ್ನಾಟಕದ ಜನತೆ ಮಾತ್ರವಲ್ಲದೇ ಪರ ಭಾಷೆಯ ಸೆಲೆಬ್ರಿಟಿಗಳು ಕೂಡ ಚಾರ್ಲಿ ಟ್ರೇಲರ್ಗೆ ಶಹಬ್ಬಾಸ್ ಎಂದಿದ್ದಾರೆ.
ಮನುಷ್ಯ ಹಾಗೂ ಶ್ವಾನದ ನಡುವಿನ ಬಂಧ ತಲ ತಲಾಂತರದ್ದು. ಇದೇ ಒಂದು ಎಳೆಯನ್ನು ಹಿಡಿದುಕೊಂಡು ಸಂಪೂರ್ಣ ಚಿತ್ರವನ್ನು ಹೆಣೆಯಲಾಗಿದೆ. ಕೆಲಸ, ಮನೆ ಎಂದು ತನ್ನಷ್ಟಕ್ಕೆ ತಾನಿದ್ದ ವ್ಯಕ್ತಿಯೊಬ್ಬನ ಜೀವನದಲ್ಲಿ ಬರುವ ಶ್ವಾನವು ಆತನ ಜೀವನವನ್ನು ಯಾವೆಲ್ಲ ರೀತಿಯಲ್ಲಿ ಬದಲಾಯಿಸುತ್ತದೆ ಎಂಬುದೇ ಚಾರ್ಲಿ ಸಿನಿಮಾದ ಕತಾ ಹಂದರ ಎಂಬುದು ಸಿನಿಮಾ ಟ್ರೇಲರ್ ನೋಡಿದವರಿಗೆ ಕೊಂಚ ಮಟ್ಟಿಗೆ ಐಡಿಯಾ ನೀಡಬಲ್ಲುದು.
ಸಿನಿಮಾದ ಟ್ರೇಲರ್ ನೋಡುತ್ತಿದ್ದರೆ ನಿರ್ದೇಶಕ ಕಿರಣ್ ರಾಜ್ ತಮ್ಮ ಕೆಲಸದಲ್ಲಿ ಸಂಪೂರ್ಣ ಯಶಸ್ಸನ್ನು ಕಂಡಂತೆ ಕಾಣುತ್ತಿದೆ. ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ ಸೇರಿದಂತೆ ಹಲವರು ನಟಿಸಿದ್ದಾರೆ. ಅಲ್ಲದೇ ರಕ್ಷಿತ್ ಶೆಟ್ಟಿಯಷ್ಟೇ ಪ್ರಮುಖ ಪಾತ್ರದಲ್ಲಿ ಶ್ವಾನವೊಂದು ಕಾಣಿಸಿಕೊಂಡಿರುವುದು ಈ ಸಿನಿಮಾದ ಹೈಲೈಟ್ .
This is so heart warming ❤️ My heartfelt wishes to @Kiranraj61 , @rakshitshetty and the one tugging on my heartstrings, Charlie❤️
— Sai Pallavi (@Sai_Pallavi92) May 16, 2022
Pet lovers, you’ll need tissues🥺
Here’s the trailer of #777Charlie ! https://t.co/GajBfxSJlw @RanaDaggubati @ParamvahStudios @SureshProdns
ತೆಲುಗು ಭಾಷೆಯಲ್ಲಿ 777 ಚಾರ್ಲಿ ಸಿನಿಮಾದ ಟ್ರೇಲರ್ನ್ನು ನಟಿ ಸಾಯಿ ಪಲ್ಲವಿ ರಿಲೀಸ್ ಮಾಡಿದ್ದು ಟ್ರೇಲರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.ಈ ಸಿನಿಮಾ ಖಂಡಿತವಾಗಿಯೂ ಪ್ರಾಣಿ ಪ್ರಿಯರ ಕಣ್ಣಲ್ಲಿ ನೀರು ತರಿಸುತ್ತೆ ಎಂದು ಟ್ವೀಟಾಯಿಸಿದ್ದಾರೆ . ಸಿನಿಮಾ ಟ್ರೇಲರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಖತ್ ವೈರಲ್ ಆಗಿದ್ದು ಸಿನಿ ರಸಿಕರು ಫುಲ್ ಫಿದಾ ಆಗಿದ್ದಾರೆ. ಜೂನ್ 10ರಂದು ಬಹುನಿರೀಕ್ಷಿತ 777 ಚಾರ್ಲಿ ಸಿನಿಮಾ ತೆರೆ ಕಾಣಲಿದೆ.
ಇದನ್ನು ಓದಿ : Tomato fever in Udupi : ಉಡುಪಿಯ 4 ವರ್ಷದ ಮಗುವಿಗೆ ಟೊಮೆಟೊ ಜ್ವರ ? ಸ್ಪಷ್ಟನೆ ಕೊಟ್ಟ ಆರೋಗ್ಯ ಇಲಾಖೆ
ಇದನ್ನೂ ಓದಿ : bengali actress pallavi dey : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್ನಲ್ಲಿ ಶವವಾಗಿ ಪತ್ತೆ
rakshit shetty starrer 777 charlie movie official trailer released