ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಿ ಕೆಟ್ಟರಾ ಬಿ.ಎಸ್.ಯಡಿಯೂರಪ್ಪ : ಕೊನೆಯಾಗುತ್ತಾ ರಾಜಾಹುಲಿಯ ರಾಜಕೀಯ ಬದುಕು

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ರಾಜಾಹುಲಿಯಂತೆ ಮೆರೆದವರು ಬಿ.ಎಸ್.ಯಡಿಯೂರಪ್ಪ (BS Yediyurappa ). ಒಂದು ಕಾಲದಲ್ಲಿ ಬಿಜೆಪಿ ಎಂದರೇ ಬಿ.ಎಸ್.ಯಡಿಯೂರಪ್ಪ , ಬಿಎಸ್ವೈ ಎಂದರೇ ಬಿಜೆಪಿ ಎಂಬರಷ್ಟರ ಮಟ್ಟಿಗಿತ್ತು ರಾಜಕೀಯ. ಆದರೆ ಕಾಲಕ್ರಮೇಣ ರಾಜಾ ಹುಲಿಯ ಪ್ರಾಬಲ್ಯ ಕೊಂಚ‌ ಕುಸಿದಿತ್ತು. ಆದರೆ ಸಿಎಂ ಸ್ಥಾನದಿಂದ ಕೆಳಕ್ಕೆ‌‌ ಇಳಿದರೂ ಬಿಜೆಪಿಯಲ್ಲಿ ಬಲ ಉಳಿಸಿಕೊಂಡಿದ್ದ ಬಿಎಸ್ವೈ ಇನ್ನು ನೇಪಥ್ಯಕ್ಕೆ ಸರಿಯೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಮಗನನ್ನು ಪಟ್ಟಕ್ಕೆ ಏರಿಸಿದ ಬಳಿಕ ಬಿ.ಎಸ್.ಯಡಿಯೂರಪ್ಪ ಮೂಲೆ ಗುಂಪಾಗಲಿದ್ದಾರೆ ಎನ್ನಲಾಗ್ತಿದೆ.

Karnataka Ex CM BS Yediyurappa Political Carrier end

ಹೌದು ಸಿಎಂ ಸ್ಥಾನ ಕೊಟ್ಟು ಸಚಿವ ಸ್ಥಾನ ಪಡೆದರು ಮಾಜಿಸಿಎಂ ಬಿಎಸ್ವೈ ಎಂದು ಸದ್ಯ ಬಿಜೆಪಿ ವಲಯ ಮಾತಾಡ್ತಿದೆ. ಇದಕ್ಕೆ ಕಾರಣ ಬಿಜೆಪಿಯಲ್ಲಿ ಭೀಷ್ಮನಂತಿರೋ ಬಿ.ಎಸ್.ಯಡಿಯೂರಪ್ಪ ರಾಜಕಾರಣ. ಸಿಎಂ‌ಸ್ಥಾನದಿಂದ ಇಳಿಯುವಾಗಲೇ ತಮ್ಮ ಎರಡನೇ ಪುತ್ರ ಬಿ.ವೈ.ವಿಜಯೇಂದ್ರ ನಿಗಾಗಿ ಬಿಎಸ್ವೈ (BS Yediyurappa )ಸಚಿವ ಸ್ಥಾನದ ಬೇಡಿಕೆ ಇಟ್ಟಿದ್ದರು. ಆದರೆ ವರ್ಷ ಕಳೆಯುತ್ತಾ ಬಂದಿದ್ದರೂ ಬಿಎಸ್ವೈ (BS Yediyurappa ) ಬೇಡಿಕೆ ಈಡೇರಿರಲಿಲ್ಲ. ಈಗ ಇನ್ನೇನು ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ ಅಗತ್ಯವನ್ನು ಅರಿತುಕೊಂಡಿರೋ ಹೈಕಮಾಂಡ್ ಕೊನೆಯ ಸಂಪುಟ ವಿಸ್ತರಣೆ ಸರ್ಕಸ್ ನಲ್ಲಿ ವಿಜಯೇಂದ್ರ್ ನಿಗೆ ಸ್ಥಾನ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

Karnataka Ex CM BS Yediyurappa Political Carrier end

ಆದರೆ ಈ ಪುತ್ರ ಪಟ್ಟಾಭಿಷೇಕದ ಬಳಿಕ ಬಿ.ಎಸ್.ಯಡಿಯೂರಪ್ಪ (BS Yediyurappa ) ಇಚ್ಛಾ ರಾಜಕೀಯದ ಬದಲು ಬಿಜೆಪಿಯ ಕೈಗೊಂಬೆಯಾಗಿ ಉಳಿದುಬಿಡುತ್ತಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ. ಬಿಜೆಪಿ ಬಿಎಸ್ವೈರನ್ನು ಇನ್ನೊಮ್ಮೆ ಸಿಎಂ ಸ್ಥಾನ ಕೇಳದಂತೆ ನಿಯಂತ್ರಿಸುವುದು ಹಾಗೂ ಮುಂದಿನ ಚುನಾವಣೆಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡೋದು ಈ ಎರಡು ಕಾರಣ ಮುಂದಿಟ್ಟುಕೊಂಡು ಒಲೈಸುತ್ತಿದೆ. ಒಂದೊಮ್ಮೇ ಬಿ.ಎಸ್.ಯಡಿಯೂರಪ್ಪ ಪಕ್ಷದ ಮೇಲೆ ಮುನಿಸಿಕೊಂಡರೇ ಮತ್ತೊಮ್ಮೆ ಬಿಜೆಪಿಗೆ ಶಾಕ್ ಖಚಿತ. ಬಹುಸಂಖ್ಯಾತ ಲಿಂಗಾಯಿತ ಹಾಗೂ ವೀರಶೈವ ಮತಗಳನ್ನು ಗಮನದಲ್ಲಿಟ್ಟುಕೊಂಡು ಬಿ.ಎಸ್.ಯಡಿಯೂರಪ್ಪರನ್ನು ಸಂಘಟನೆಯಲ್ಲೇ ಕಟ್ಟಿ ಹಾಕಲು ಪ್ಲ್ಯಾನ್ ಮಾಡಿದೆ.

Karnataka Ex CM BS Yediyurappa Political Carrier end

ಈಗ ಮಗನಿಗೆ ಸಚಿವ ಸ್ಥಾನ ನೀಡಿದರೇ ಬಿಎಸ್ವೈ ಇದ್ದಷ್ಟೂ ದಿವಸ ಪಕ್ಷ ಕ್ಕಾಗಿ ದುಡಿಯಬೇಕೇ ವಿನಃ ಯಾವುದೇ ಸ್ಥಾನ ಮಾನ ನೀರಿಕ್ಷೆ ಮಾಡುವಂತಿಲ್ಲ. ಹೆಚ್ಚೆಂದರೆ ಬಿಜೆಪಿ ಬಿ.ಎಸ್.ಯಡಿಯೂರಪ್ಪ ತಮ್ಮ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರನ್ನಾಗಿ‌ ನೇಮಿಸಬಹುದೇ ವಿನಃ ಮತ್ಯಾವುದೇ ಹುದ್ದೆ ನೀಡೋ ಸಾಧ್ಯತೆಗಳಿಲ್ಲ. ಹೀಗಾಗಿ ಪುತ್ರನಿಗೆ ಸಚಿವ ಸ್ಥಾನ ಕೊಡಿಸಿ ಬಿ.ಎಸ್.ಯಡಿಯೂರಪ್ಪಬಹುತೇಕ ರಾಜಕೀಯ ಹಾಗೂ ಅಧಿಕಾರದ ಸನ್ಯಾಸವನ್ನು ಸ್ವೀಕರಿಸಿದಂತಾಯಿತು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಿಸುತ್ತಿದ್ದಾರೆ.

ಇದನ್ನೂ ಓದಿ : bengali actress pallavi dey : ಖ್ಯಾತ ಕಿರುತೆರೆ ನಟಿ ಪಲ್ಲವಿ ಡೇ ಫ್ಲಾಟ್​ನಲ್ಲಿ ಶವವಾಗಿ ಪತ್ತೆ

ಇದನ್ನೂ ಓದಿ : ಕ್ಲೈಮ್ಯಾಕ್ಸ್ ಹಂತದಲ್ಲಿ ಸಂಪುಟ ಸರ್ಕಸ್ : ಹೈಕಮಾಂಡ್ ಕೈಸೇರಿದೆ 20 ಆಕಾಂಕ್ಷಿಗಳ ಲಿಸ್ಟ್

Karnataka Ex CM BS Yediyurappa Political Carrier end

Comments are closed.