kantara film : ಕನ್ನಡ ಚಿತ್ರಂಗಕ್ಕೆ ಈ ವರ್ಷ ಸುವರ್ಣ ಯುಗ ಅಂತಾ ಹೇಳಿದರೆ ತಪ್ಪಾಗಲಾರದು. ಕೆಜಿಎಫ್ 2 ಸಿನಿಮಾದ ಬಳಿಕ ಸ್ಯಾಂಡಲ್ವುಡ್ನಲ್ಲಿ ತೆರೆ ಕಂಡ ಯಾವುದೇ ಸಿನಿಮಾಗಳು ಸೋತಿಲ್ಲ. ಬದಲಾಗಿ ಸಂಪೂರ್ಣ ದೇಶವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡುತ್ತಿದೆ. ಅದರಲ್ಲೂ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ ಅಂತೂ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ಇಷ್ಟು ಕೆಜಿಎಫ್ 2 ಸಿನಿಮಾದ ಯಶಸ್ಸಿನಲ್ಲಿ ಮಿಂದೇಳುತ್ತಿದ್ದ ಹೊಂಬಾಳೆ ಫಿಲ್ಮ್ಸ್ ಇದೀಗ ಕಾಂತಾರ ಸಿನಿಮಾದ ಗೆಲುವಿನಲ್ಲಿ ತೇಲುವಂತಾಗಿದೆ.
ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಇಂದು ಎಲ್ಲೆಡೆ ತನ್ನ ಮೊದಲ ದಿನದ ಪ್ರದರ್ಶನವನ್ನು ಪೂರೈಸಿದೆ. ನಿನ್ನೆ ಕಾಂತಾರ ಸಿನಿಮಾದ ಪ್ರೀಮಿಯರ್ ಶೋ ಕೂಡ ಆಯೋಜನೆಗೊಂಡಿತ್ತು. ಸಿನಿಮಾ ನೋಡಿ ಬಂದ ಪ್ರತಿಯೊಬ್ಬರೂ ಕೂಡ ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ಗೆ ಫುಲ್ ಫಿದಾ ಆಗಿದ್ದಾರೆ. ಈ ಸಾಲಿಗೆ ಸ್ವತಃ ನಟ ರಕ್ಷಿತ್ ಶೆಟ್ಟಿ ಕೂಡ ಸೇರಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸದ್ಯ ಶೆಟ್ಟಿಗಳ ಹಾವಳಿ ಜೋರಾಗಿದೆ ಅಂದರೆ ತಪ್ಪಾಗಲಾರದು. ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿನ್ನೆ ರಕ್ಷಿತ್ ಶೆಟ್ಟಿ ಕಾಂತಾರ ಸಿನಿಮಾದ ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದರು, ಸಿನಿಮಾ ಮುಗಿಯುತ್ತಿದ್ದಂತೆಯೇ ರಕ್ಷಿತ್ ಶೆಟ್ಟಿ ಥಿಯೇಟರ್ನಿಂದ ಖುಷಿಯಿಂದ ಓಡಿ ಬಂದಿದ್ದು ಮಾತ್ರವಲ್ಲದೇ ಸ್ನೇಹಿತ ರಿಷಬ್ನನ್ನು ಅಪ್ಪಿಕೊಂಡು ಸಂತೋಷ ಹೊರಹಾಕಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗ್ತಿದೆ.
ಪ್ರೀಮಿಯರ್ ಶೋ ಮುಗಿದ ಬಳಿಕ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ರಿಷಬ್ ನನಗೆ ಈ ಸಿನಿಮಾವನ್ನು ದೊಡ್ಡ ಪರದೆಯ ಮೇಲೆಯೇ ನೋಡಬೇಕು ಅಂತಾ ಹೇಳಿದ್ದ. ಈ ಸಿನಿಮಾದ ಕ್ಲೈಮಾಕ್ಸ್ ಸೀನ್ನ್ನು ನಾನು ಹಿಂದೆಂದೂ ಕಂಡೇ ಇಲ್ಲ. ಈ ಸಿನಿಮಾದ ಕೊನೆಯ ಮೂವತ್ತು ನಿಮಿಷಗಳನ್ನು ಪ್ರೇಕ್ಷಕರು ಎಂದಿಗೂ ನೆನಪಿನಲ್ಲಿ ಇಡುತ್ತಾರೆ ಎಂದು ರಕ್ಷಿತ್ ಶೆಟ್ಟಿ ಹಾಡಿಹೊಗಳಿದ್ದಾರೆ,
ಈ ಸಿನಿಮಾ ಪ್ರಕೃತಿ ಹಾಗೂ ಮಾನವನ ನಡುವಿನ ಸಂಘರ್ಷದ ನಡುವೆ ಹೆಣೆದ ಕತಾ ಹಂದರವಾಗಿದೆ. ಸಿನಿಮಾದ ಶೂಟಿಂಗ್ನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಪ್ರಮುಖ ಪಾತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದಂತೆ ಕಿಶೋರ್ , ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ಸೇರಿದಂತೆ ಪ್ರಮುಖ ತಾರಾಗಣವೇ ಈ ಸಿನಿಮಾದಲ್ಲಿದೆ.
ಇದನ್ನು ಓದಿ : Kantara Movie Review : ಅಭಿಮಾನಿಗಳ ಮನ ಗೆದ್ದ ರಿಷಬ್ ಶೆಟ್ಟಿ “ಕಾಂತಾರ”
ಇದನ್ನೂ ಓದಿ : illicit relationship : ಅಕ್ರಮ ಸಂಬಂಧಕ್ಕಾಗಿ ಬಾಲಕನ ರುಂಡವನ್ನೇ ಕತ್ತರಿಸಿದ ಕಿರಾತಕನ ಬಂಧನ
rakshit shetty talks about rishab shetty kantara film