ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಕಂಟೆಂಟ್ ಇರುವ ಸಿನಿಮಾಗಳು ಬರುತ್ತಿದೆ. ಇಂದು ನಟ ರಮೇಶ್ ಅರವಿಂದ್ ಹಾಗೂ ಮೇಘನಾ ಅಭಿನಯದ ಶಿವಾಜಿ ಸುರತ್ಕಲ್ 2 ಸಿನಿಮಾ (Shivaji Suratkal 2 release) ರಾಜ್ಯದಾದ್ಯಂತ ಭರ್ಜರಿ ಕಲೆಕ್ಷನ್ ಮೂಲಕ ತೆರೆಕಂಡಿದ್ದು, ಸಿನಿಮಂದಿರಗಳಲ್ಲಿ ಫ್ಯಾನ್ಸ್ ಮುಗಿಬಿದ್ದಿದ್ದಾರೆ. ಅಲ್ಲದೇ ಈ ಸಿನಿಮಾದ ಮೊದಲ ಭಾಗವನ್ನು ನೋಡಿದವರಿಗೆ ಇದು ಕೂಡ ಇಷ್ಟವಾಗುತ್ತದೆ. ಯಾಕೆಂದರೆ ಈ ಸಿನಿಮಾದಲ್ಲಿ ಕೊಲೆ ಮಿಸ್ಟ್ರಿಯೊಂದಿಗೆ ಮನರಂಜನೆ ಹಾಗೂ ಭಾವನಾತ್ಮಕ ದೃಶ್ಯಾವಳಿಗಳು ಕೂಡ ಇರುತ್ತದೆ. ಈ ಸಿನಿಮಾವನ್ನು ನೋಡುವ ಸಿನಿಪ್ರೇಕ್ಷಕರಿಗೆ ಆರಂಭದಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ. ಯಾಕೆಂದರೆ ನಾಯಕ ಡಬ್ಬಲ್ ಶೇಡ್‌ನಲ್ಲಿ ಕಂಡಂತೆ ಭಾಸವಾಗುತ್ತದೆ.
2020ರಲ್ಲಿ ಈ ಸಿನಿಮಾದ ಮೊದಲ ಭಾಗ ತೆರೆಕಂಡಿದ್ದು, ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೇ ಮೊದಲ ಭಾಗಕ್ಕೆ ದಿ ಕೇಸ್ ಆಫ್ ರಣಗಿರಿ ರಹಸ್ಯ ಎನ್ನುವ ಟ್ಯಾಗ್‌ಲೈನ್ ನೀಡಲಾಗಿತ್ತು. ಇದರ ಮುಂದುವರೆದ ಭಾಗವೇ ಶಿವಾಜಿ ಸುರತ್ಕಲ್ ದಿ ಮಿಸ್ಟ್ರೀರಿಯಸ್ ಕೇಸ್ ಆಫ್ ಮಾಯಾವಿ ಆಗಿ ಇಂದು ತೆರೆ ಕಂಡಿದೆ. ಈ ಸಿನಿಮಾವನ್ನು ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ರೇಖಾ ಕೆ.ಎನ್ ಮತ್ತು ಅನೂಪ್ ಗೌಡ ನಿರ್ಮಾಣ ಮಾಡಿದ್ದಾರೆ.
ಆಕಾಶ್ ಶ್ರೀವತ್ಸ ಅವರ ಕಥೆ, ಚಿತ್ರಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮೊದಲ ಭಾಗದಂತೆ ಈ ಸಿನಿಮಾ ಕೂಡ ಒಂದು ಮರ್ಡರ್ ಮಿಸ್ಟ್ರಿಯಾಗಿದೆ. ಸಿನಿಮಾದಲ್ಲಿ ನಡೆಯುವ ಕೊಲೆಗಳಿಗೂ, ನಾಯಕ ಶಿವಾಜಿಗೂ ಲಿಂಕ್ ಇರುತ್ತದೆ. ಏನು ಆ ನಂಟು? ಕೊಲೆಗಳ ಹಿಂದಿರುವ ರಹಸ್ಯವೇನು? ಕೊಲೆಗಾರ ಯಾರು? ಎಂಬುದೇ ಈ ಸಿನಿಮಾದ ಕಥೆಯಾಗಿದ್ದು, ಈ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈ ಸಿನಿಮಾವ್ನು ಸಿನಿಮಂದಿರಗಳಲ್ಲಿ ಸಿನಿಪ್ರೇಕ್ಷಕರು ನೋಡಬೇಕಾಗಿದೆ.
ಇದನ್ನೂ ಓದಿ : ಶ್ರೀಲಂಕಾದಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾದ ಕೆಜಿಎಫ್ ಸ್ಟಾರ್ ನಟ ಯಶ್
ಇದನ್ನೂ ಓದಿ : ರಾಜಕೀಯ ಸೇರ್ಪಡೆ ವಿಚಾರ : ರಾಜಕೀಯ ಬಣ್ಣ ಬೇಡ, ಸ್ಪಷ್ಟನೆ ನೀಡಿದ ನಟ ರಿಷಬ್ ಶೆಟ್ಟಿ
ಈ ಸಿನಿಮಾದಲ್ಲಿ ರಮೇಶ್ ಅರವಿಂದ್, ರಾಧಿಕಾ ನಾರಾಯಣ್, ಮೇಘನಾ ಗಾಂವ್ಕರ್, ಸಂಗೀತ ಶೃಂಗೇರಿ, ರಘು ರಮಣಕೊಪ್ಪ, ನಾಜರ್, ರಮೇಶ್ ಭಟ್, ವೀಣಾ ಸುಂದರ್, ವಿನಾಯಕ್ ಜೋಶಿ, ಶೋಭರಾಜ್ ಮುಂತಾದವರನ್ನು ಒಳಗೊಂಡ ಬಹುತಾರಾಂಗಣವಿದೆ. ಬೆಂಗಳೂರು, ಮೈಸೂರು, ಹೈದರಾಬಾದ್, ಸುರತ್ಕಲ್, ಕಾಪು, ಹೊನ್ನಾವರ ಮುಂತಾದ ಕಡೆ ಸಿನಿಮಾದ ಚಿತ್ರಿಕರಣ ಮಾಡಲಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಹಾಗೂ ಜೂಡಾ ಸ್ಯಾಂಡಿ ಸಂಗೀತ ಈ ಸಿನಿಮಾಕ್ಕಿದೆ. ನಿರ್ದೇಶಕ ಆಕಾಶ್ ಶ್ರೀವತ್ಸ ಅವರೇ ಸಿನಿಮಾದ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ. ಒಟ್ಟಿನಲ್ಲಿ ಈ ಸಸ್ಪೆನ್ಸ್ ಮರ್ಡರ್ ಮಿಸ್ಟ್ರಿ ಕಥೆ ನೋಡಲು ಸಿನಿಪ್ರಿಯರು ಕಾಯುತ್ತಿರುವುದಂತೂ ನಿಜ.
Ramesh Aravind starrer Shivaji Suratkal 2 release