Ambedkar Jayanti 2023 : ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ: ಸಿದ್ದರಾಮಯ್ಯ

ಬೆಂಗಳೂರು : (Ambedkar Jayanti 2023) ಇಂದು ಸಂವಿಧಾನ ಶಿಲ್ಪಿ ಡಾ. ಬಿ. ಆರ್‌ ಅಂಬೇಡ್ಕರ್‌ ಅವರ ಜನ್ಮದಿನ. ಭಾರತದೆಲ್ಲಡೆ ಅವರ ಜನ್ಮದಿನದ ಆಚರಣೆ ಅದ್ದೂರಿಯಾಗೇ ನಡೆಯುತ್ತಿದೆ. ಭಾರತೀಯರ ಪವಿತ್ರ ಗ್ರಂಥವಾದ ದೇಶದ ಆತ್ಮವೆಂದೇ ಕರೆಯಬಹುದಾದ ಸಂವಿಧಾನ ರಚನೆಯ ಹಿಂದಿನ ಶಿಲ್ಪಿ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು, ಅವರ ಆದರ್ಶಗಳು ಭಾರತೀಯರ ಪಾಲಿಗೆ ಸ್ಪೂರ್ತಿ. ಇದೀಗ ಅವರ ಜನ್ಮದಿನದ ಸಲುವಾಗಿ ದೇಶದ ನಾಯಕರು, ರಾಜ್ಯ ನಾಯಕರುಗಳು ನಮನಗಳನ್ನು ಸಲ್ಲಿಸುತ್ತಿದ್ದು, ಕರ್ನಾಟಕ ಕಾಂಗ್ರೆಸ್ ನ ಮಾಜಿ ಮುಖ್ಯಮಂತ್ರಿ, ವಿರೋದ ಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅಂಬೇಡ್ಕರ್‌ ಜಯಂತಿಯ ನಮನಗಳನ್ನು ಸಲ್ಲಿಸಿದ್ದಾರೆ. ಇದರ ಜೊತೆಗೆ ತನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ ಎಂದು ಹೇಳಿದ್ದಾರೆ.

ಸಂವಿಧಾನ ರಚನೆಯ ಮೂಲಕ ಶೋಷಿತ ಜನರಿಗೆ ಘನತೆಯ ಬದುಕು ನೀಡಿದ ಮಹಾನ್‌ ಚೇತನ ಅಂಬೇಡ್ಕರ್‌ ಅವರು. ಅವರ ಚಿಂತನೆಯ ಪ್ರತಿರೂಪವಾಗಿರು ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ದ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ. ಈ ಹೋರಾಟಕ್ಕೆ ಬಾಬಾಸಾಹೇಬರ ಚಿಂತನೆಗಳು ನಮ್ಮ ಆಯುಧವಾಗಲಿ ಎಂದು ಟ್ವೀಟ್‌ ಮಾಡಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್.ಅಂಬೇಡ್ಕರರ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ ಗಳಲ್ಲಿ ಪಾಲಿಸಿದ್ದೇನೆ. ಇದು ನಾನು ಬಾಬಾ ಸಾಹೇಬರಿಗೆ ಸಲ್ಲಿಸಿದ ಗೌರವವೂ ಹೌದು ಎಂದು ಸರಣಿ ಟ್ವೀಟ್‌ ಗಳ ಮೂಲಕ ತಿಳಿಸಿದ್ದಾರೆ.

ನಿರ್ಲಕ್ಷ್ಯ, ತುಚ್ಛೀಕರಣ, ದೈವೀಕರಣದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಮನಿಸಲು ಪ್ರಯತ್ನಿಸಿ ವಿಫಲರಾದ ಕೋಮುವಾದಿ ಶಕ್ತಿಗಳು ಈಗ ಬಾಬಾಸಾಹೇಬರನ್ನು ಆಪೋಶನ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಹುನ್ನಾರದ ಬಗ್ಗೆ ನಾವು ಎಚ್ಚರವಾಗಿರಬೇಕು ಎಂದು ಕೋಮು ಶಕ್ತಿಗಳ ವಿಜೃಂಭಣೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ. ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು. ಮಹಾಗುರುವಿಗೆ ನಮನಗಳು ಎಂದು ಹೇಳುವ ಮೂಲಕ ಸಂವಿಧಾನ ಶಿಲ್ಪಿಯ ಆಶಯವನ್ನು ತಿಳಿಸಿದ್ದಾರೆ. ಜೊತೆಗೆ ತನ್ನ ರಾಜಕೀಯ ಜೀವನದಲ್ಲಿ ಅಂಬೇಡ್ಕರ್‌ ಅವರ ಪಾತ್ರದ ಬಗ್ಗೆಯೂ ಹೇಳಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೊದಲ ಜನ್ಮದಿನವನ್ನು ಸಾರ್ವಜನಿಕವಾಗಿ 14 ಏಪ್ರಿಲ್ 1928 ರಂದು ಪುಣೆಯಲ್ಲಿ ಅಂಬೇಡ್ಕರ್ ವಾದಿ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದ ಜನಾರ್ದನ್ ಸದಾಶಿವ ರಣಪಿಸೆಯವರು ಆಚರಿಸಿದರು . ಅವರು ಬಾಬಾಸಾಹೇಬರ ಜನ್ಮ ವಾರ್ಷಿಕೋತ್ಸವ ಅಥವಾ ಅಂಬೇಡ್ಕರ್ ಜಯಂತಿ ಆಚರಣೆಯನ್ನು ಪ್ರಾರಂಭಿಸಿದರು. ಇಂದಿಗೂ ಕೂಡ ಅಂಬೇಡ್ಕರ್‌ ಅವರ ಜನ್ಮದಿನದ ಸಲುವಾಗಿ ಸರ್ಕಾರಿ ರಜೆಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : Ambedkar Jayanthi 2023: ಭಾರತ ಕಂಡ ಶ್ರೇಷ್ಠ ನಾಯಕ ಡಾ.ಬಿ.ಆರ್‌ ಅಂಬೇಡ್ಕರ್‌ ಅವರು ಬೆಳೆದು ಬಂದ ಹಾದಿ

Ambedkar Jayanti 2023 : My political life owes to Baba Saheb: Siddaramaiah

Comments are closed.