ತಮ್ಮ ಶಾಂತಮುಖ ಹಾಗೂ ನೈಜ ನಟನೆಯ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಹೆಸರಾದ ರಂಗೀತರಂಗ (Rangitaranga) ನಟ ನಿರೂಪ್ ಭಂಡಾರಿ (Nirup Bhandari) ಬಹುಭಾಷಾ ನಟ ದೂದ್ ಪೇಡಾ ದಿಗಂತ್ (Dood Peda Diganth) ಸಿನಿಮಾಗೆ ಜೊತೆಯಾಗೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. 2015 ರಲ್ಲಿ ರಂಗಿತರಂಗ ಸಿನಿಮಾ ಮೂಲಕ ಪ್ರಸಿದ್ಧಿಗೆ ಬಂದ ನಟ ನಿರೂಪ್ ಭಂಡಾರಿ ನಟನೆ, ಡೈಲಾಗ್ ಡೆಲಿವರಿ ಹಾಗೂ ಅಫಿಯರೆನ್ಸ್ ಮೂಲಕವೇ ಕನ್ನಡಿಗರ ಮನಗೆದ್ದರು.

ಹೀರೋಯಿಸಂ, ಸಿಕ್ಸ್ ಪ್ಯಾಕ್ ಸ್ಟಾರ್ ಗಿರಿ ನಡುವೆ ಶಾಂತಮುಖಭಾವದ ಈ ನಟ ಕನ್ನಡಿಗರ ಮನೆಮಾತಾದರು. ರಂಗಿತರಂಗ ಸಿನಿಮಾದ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸ್ತಿರೋ ನಿರೂಪ್ ಭಂಡಾರಿ ಈಗ. ಬಹುಭಾಷಾ ನಟ , ದೂದ್ ಪೇಡ್ ದಿಗಂತಗೆ ಜೊತೆಯಾಗಿದ್ದಾರೆ. ಈ ವಿಚಾರವನ್ನು ಸ್ವತಃ ನಿರೂಪ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ನಲ್ಲಿ ಸ್ಪೆಶಲ್ ಪೋಟೋ ಜೊತೆ ಪೋಸ್ಟ್ ಹಾಕಿರೋ ನಿರೂಪ್, A Surprise Cameo Appearanceಎಂಬರ್ಥದಲ್ಲಿ ಪೋಸ್ಟ್ ಹಾಕಿದ್ದಾರೆ. ಕಪ್ಪು ಬಿಳುಪಿನ ಈ ಪೋಟೋದಲ್ಲಿ ನಿರೂಪ್ ಭಂಡಾರಿ ದಿಗಂತ್ ಎದುರು ನಿಂತು ಕ್ಯಾಮರಾ ಗೆ ಪೋಸ್ಟ್ ನೀಡಿದ್ದಾರೆ. ಆ ಮೂಲಕ ದಿಗಂತ ನಟನೆಯ ಎಡಗೈಯೇ ಅಪಘಾತಕ್ಕೆ ಕಾರಣ ಎಂಬ ವಿಭಿನ್ನ ಸಿನಿಮಾದಲ್ಲಿ ನಿರೂಪ್ ಎಂಟ್ರಿಕೊಟ್ಟಿದ್ದಾರೆ.
ಇದನ್ನೂ ಓದಿ : ಮದಕರಿ ಸುಂದರಿ ರಾಗಿಣಿ ದ್ವಿವೇದಿ ಮಾದಕ ನೋಟ : ಪಡ್ಡೆ ಹೈಕಳಿಗೆ ಹಬ್ಬದೂಟ
ಸಮರ್ಥ ಕಡಕೋಳ ನಿರ್ಮಾಣದ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಶೂಟಿಂಗ್ ಸದ್ಯಕ್ಕೆ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಿದೆ. ದೂದ್ ಪೇಡಾ ದಿಗಂತ ಈ ಸಿನಿಮಾದಲೀಡ್ ರೋಲ್ ನಲ್ಲಿ ನಟಿಸಿದ್ದಾರೆ . ಸಿನಿಮಾದ ಸ್ಪೆಶಲ್ ರೋಲ್‌ವೊಂದರಲ್ಲ ನಿರೂಪ್ ಬಣ್ಣ ಹಚ್ಚಿದ್ದಾರೆ.
ಗುರುರಾಜ ಗಾಣಿಗ ಈ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುಹೊಂದಿದ್ದು, ಮೋಹನ ಹಿರೇಗೌಡರ ಕೂಡ ಸಾಥ್ ನೀಡಿದ್ದಾರೆ. ನಿರ್ದೇಶಕ ಗುರುರಾಜ್ ನೀಡ್ತಿರೋ ಮಾಹಿತಿ ಪ್ರಕಾರ ನಿರೂಪ್ ಎಂಟ್ರಿ ಸಿನಿಮಾದ ವಿಶಿಷ್ಟ ಪೂರ್ಣ ಪಾತ್ರಕ್ಕೆನ್ಯಾಯ ಒದಗಿಸಿದೆ. ನಾವು ನಮ್ಮ ಹೊಸಬರ ಚಿತ್ರಕ್ಕೆ ನಿರೂಪ್ ಅವರೇ ಬೇಕೆಂದುಕೊಂಡು ಅವರ ಬಳಿ ರಿಕ್ವೆಸ್ಟ್ ಮಾಡಿದ್ದೇವು. ಅವರು ಒಪ್ಪಿಕೊಂಡು ನಟಿಸಿದ್ದು ಖುಷಿಯಾಗಿದೆ ಎಂದಿದ್ದಾರೆ.

ಎಡಗೈಯೇ ಅಫಘಾತಕ್ಕೆ ಕಾರಣ ಥ್ರಿಲ್ಲರ್,ಕ್ರೈಂ ಕತೆಯೊಂದನ್ನು ತೆರೆ ಮೇಲೆ ತರುವ ಪ್ರಯತ್ನ ವಾಗಿದ್ದು ಇದರಲ್ಲಿ ಸಾಮಾನ್ಯವಾಗಿ ಲೆಫ್ಟ್ ಹ್ಯಾಂಡೆಡ್ ಜನರು ಎದುರಿಸುವ ಸಮಸ್ಯೆಗಳನ್ನು ಬಿಂಬಿಸಲಾಗಿದೆ ಎನ್ನಲಾಗ್ತಿದೆ. ಧನು ಹರ್ಷಾ ಈ ಸಿನಿಮಾದ ಮೂಲಕ ಚಂದನವನಕ್ಕೆ ಹಿರೋಯಿನ್ ಆಗಿ ಎಂಟ್ರಿ ಕೊಡ್ತಿದ್ದಾರೆ.
ಅಜನೀಶ್ ಲೋಕನಾಥ ಸಿನಿಮಾಕ್ಕೆ ಸಂಗೀತ ನೀಡಿದ್ದು, ಅಭಿಮನ್ಯು ಸದಾನಂದ ಛಾಯಾಗ್ರಹಣವಿದೆ. ಈ ವರ್ಷಾಂತ್ಯದ ವೇಳೆಗೆ ಸಿನಿಮಾ ತೆರೆಗೆ ಬರೋ ಸಾಧ್ಯತೆ ಇದೆ. ನಿರೂಪ್ ಭಂಡಾರಿ ಈ ಹೊಸಬರ ಸಿನಿಮಾದ ಜೊತೆಗೆ ನಾಗತಿಹಳ್ಳಿ ನಿರ್ದೇಶನದ ಸಿನಿಮಾವೊಂದರ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿ ದ್ದಾರೆ. ಅಕ್ಟೋಬರ್ ನಲ್ಲಿ ಸಿನಿಮಾದ ಶೂಟಿಂಗ್ ಕೂಡ ಆರಂಭವಾಗಲಿದೆ.
ಇದನ್ನೂ ಓದಿ : ಚಿರು ಆಸೆಯಂತೆ ನಟನೆಯಲ್ಲಿ ಬ್ಯುಸಿಯಾದ ಮೇಘನಾ ರಾಜ್ ಸರ್ಜಾ : ತತ್ಸಮ ತದ್ಭವ ಬಳಿಕ ಅಮರ್ಥಕ್ಕೆಜೈ ಎಂದ ನಟಿ
ಇತ್ತೀಚಿಗೆ ತೆರೆಕಂಡ ಸುದೀಪ್ ಸೂಪರ್ ಹಿಟ್ ಸಿನಿಮಾ ವಿಕ್ರಾಂತ ರೋಣದಲ್ಲೂ ನಿರೂಪ್ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದರು. ಇಂಜಿನಿಯರಿಂಗ್ ಪದವೀಧರರಾಗಿರೋ ನಿರೂಪ್ ಭಂಡಾರಿ ರತನ್ ಠಾಕೂರ್ ಗ್ರ್ಯಾಂಟ್ ನಲ್ಲಿ ನಟನಾ ತರಬೇತಿ ಪಡೆದಿದ್ದಾರೆ.
ಕಿರುತೆರೆ ಧಾರವಾಗಿ ಅಡ್ವಕೇಟ್ ಅರ್ಜುನ್ ಧಾರಾವಾಹಿಯಲ್ಲಿ ಸೈಕೋಫಾತ್ ರೋಲ್‌ನಲ್ಲಿ ಮಿಂಚಿದ್ದರು. ಇದಾದ ಬಳಿಕ ಬೆಳ್ಳಿ ತೆರೆಗೆ ಬಂದ ನಿರೂಪ್, ಅನೂಪ್ ನಿರ್ದೇಶನದ ರಂಗಿತರಂಗ ಸಿನಿಮಾದ ಮೂಲಕ ಜನಪ್ರಿಯರಾದರು.
Rangitaranga Nirup Bhandari New Movie Joins Dood Peda Diganth