ಏಕದಿನ ವಿಶ್ವಕಪ್2023 : ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ಬದಲು ರವಿಚಂದ್ರನ್‌ ಅಶ್ವಿನ್‌

ಏಕದಿನ ವಿಶ್ವಕಪ್‌ಗೆ (World Cup 2023) ಭಾರತ ತಂಡ (Indian Cricket Team) ಪ್ರಕಟವಾಗಿದೆ. ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ (Axar Patel) ಗಾಯಗೊಂಡು ಆಸ್ಟ್ರೇಲಿಯಾ ವಿರುದ್ದದ ಮೂರನೇ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಇದೀಗ ಅಕ್ಷರ್‌ ಪಟೇಲ್‌ ಬದಲು ವಿಶ್ವಕಪ್‌ಗೆ ಅಶ್ವಿನ್‌ (R Ashwin)ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.

ಮುಂಬೈ: ಮುಂಬರುವ ಏಕದಿನ ವಿಶ್ವಕಪ್‌ಗೆ (World Cup 2023) ಭಾರತ ತಂಡ (Indian Cricket Team) ಈಗಾಗಲೇ ಪ್ರಕಟವಾಗಿದೆ. ಆದ್ರೆ ತಂಡದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ (Axar Patel) ಗಾಯಗೊಂಡು ಆಸ್ಟ್ರೇಲಿಯಾ ವಿರುದ್ದದ ಮೂರನೇ ಪಂದ್ಯವನ್ನು ಮಿಸ್‌ ಮಾಡಿಕೊಂಡಿದ್ದರು. ಇದೀಗ ಅಕ್ಷರ್‌ ಪಟೇಲ್‌ ಬದಲು ವಿಶ್ವಕಪ್‌ಗೆ ಅಶ್ವಿನ್‌ (R Ashwin)ಆಯ್ಕೆಯಾಗುತ್ತಾರೆ ಎನ್ನಲಾಗುತ್ತಿದೆ.

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಈ ಹಿಂದೆಯೇ ವಿಶ್ವಕಪ್‌ಗಾಗಿ 15 ಜನರ ತಂಡವನ್ನು ಆಯ್ಕೆ ಮಾಡಿತ್ತು. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ವಿಭಾಗದಲ್ಲಿಯೂ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಆದ್ರೆ ಇದೀಗ ತಂಡ ಖ್ಯಾತ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಗಾಯಗೊಂಡಿರುವುದು ಭಾರತ ತಂಡದ ಚಿಂತೆಗೆ ಕಾರಣವಾಗಿದೆ.

ODI World Cup 2023 Ravichandran Ashwin replaces Axar Patel for Team India
Image Credit to Original Source

ವಿಶ್ವಕಪ್‌ ಸರಣಿಗೆ ಬಿಸಿಸಿಐ ಭಾರತ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಬೇಕಾದ್ರೆ ಇಂದು ಸಂಜೆಯ ವರೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಗಾಯಾಳು ಅಕ್ಷರ್‌ ಪಟೇಲ್‌ ಬದಲು ಮತ್ತೋರ್ವ ಖ್ಯಾತ ಸ್ಪಿನ್ನರ್‌ ಹಾಗೂ ಆಲ್‌ರೌಂಡರ್‌ ಆರ್.‌ ಅಶ್ವಿನ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಏಷ್ಯಾಕಪ್‌ ನಲ್ಲಿ ಅಕ್ಷರ್‌ ಪಟೇಲ್‌ ಗಾಯಗೊಂಡ ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯನ್ನು (NCA) ಸೇರಿಕೊಂಡಿದ್ದರು. ಅಕ್ಷರ್‌ ಪಟೇಲ್‌ ಅವರ ಗಾಯ ಎಷ್ಟು ತೀವ್ರವಾಗಿದೆ. ವಿಶ್ವಕಪ್‌ ವೇಳೆಗೆ ಅವರು ಫಿಟ್‌ ಆಗ್ತಾರಾ ಅನ್ನೋದು ಇನ್ನೂ ಖಚಿತವಾಗಿಲ್ಲ.

2011ರಲ್ಲಿ ಭಾರತ ತಂಡ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದಲ್ಲಿ ವಿಶ್ವಕಪ್‌ ಗೆಲುವು ದಾಖಲಿಸಿತ್ತು. ಈ ತಂಡದಲ್ಲಿ ಆರ್‌.ಅಶ್ವಿನ್‌ ಭಾಗವಾಗಿದ್ದರು. ಆದರೆ ಈ ಬಾರಿಯ ವಿಶ್ವಕಪ್‌ಗೆ ಅವರು ಆಯ್ಕೆ ಆಗಿರಲಿಲ್ಲ. ಇದೀಗ ಅಕ್ಷರ್‌ ಪಟೇಲ್‌ ಗಾಯಗೊಂಡ ಹಿನ್ನೆಲೆಯಲ್ಲಿ ಅಶ್ವಿನ್‌ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿಯೂ ಆರ್.ಅಶ್ವಿನ್‌ ಉತ್ತಮ ಪ್ರದರ್ಶನವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಶ್ವಿನ್‌ ವಿಶ್ವಕಪ್‌ ಗೆ ಆಯ್ಕೆಯಾಗ ಬಹುದು ಎನ್ನಲಾಗುತ್ತಿದೆ. ಅಲ್ಲದೇ ವಿಶ್ವಕಪ್‌ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಲು ಇಂದು ಕೊನೆಯ ದಿನವಾಗಿದೆ.

ವಿಶ್ವಕಪ್‌ಗೆ ಭಾರತ ಉತ್ತಮ ತಂಡವನ್ನು ಆಯ್ಕೆ ಮಾಡಿದೆ. ನಾಯಕ ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ ಭರ್ಜರಿ ಫಾರ್ಮ್‌ನಲ್ಲಿ ಇದ್ದಾರೆ.

ಇದನ್ನೂ ಓದಿ : ಒಂದೇ ಓವರ್‌ನಲ್ಲಿ 4 ವಿಕೆಟ್‌ ಪಡೆದ ಭಾರತದ ಮೊದಲ ಬೌಲರ್‌ : ಏಷ್ಯಾಕಪ್‌ನಲ್ಲಿ ಮೊಹಮ್ಮದ್‌ ಸಿರಾಜ್‌‌ ವಿಶಿಷ್ಟ ದಾಖಲೆ

ಆಲ್‌ರೌಂಡರ್‌ ಸ್ಥಾನದಲ್ಲಿ ಹಾರ್ದಿಕ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌, ರವೀಂದ್ರ ಜಡೇಜಾ ಕಾಣಿಸಿಕೊಂಡಿದ್ದಾರೆ. ಆದರೆ ಆಲ್‌ರೌಂಡರ್‌ ಸ್ಥಾನದಲ್ಲಿ ಅಕ್ಷರ್‌ ಪಟೇಲ್‌ ಸ್ಥಾನ ಪಡೆದಿದ್ದರು ಕೂಡ ವಿಶ್ವಕಪ್‌ಗೆ ಲಭ್ಯತೆಯ ಬಗ್ಗೆ ಯಾವುದೇ ಖಚಿತತೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಶ್ವಿನ್‌ ತಂಡ ಸೇರಿಕೊಂಡ್ರೆ ಭಾರತ ಸ್ಪಿನ್‌ ವಿಭಾಗದಲ್ಲಿ ಬಲಿಷ್ಟವಾಗಲಿದೆ.

ODI World Cup 2023 Ravichandran Ashwin replaces Axar Patel for Team India
Image Credit to Original Source

ಇನ್ನು ವೇಗದ ಎಸೆತಗಾರರ ವಿಭಾಗದಲ್ಲಿ ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌ ಹಾಗೂ ಮೊಹಮ್ಮದ್‌ ಸೆಮಿ ಆಯ್ಕೆಯಾಗಿದ್ದು, ಮೂವರು ಕೂಡ ಉತ್ತಮ ಫಾರ್ಮನಲ್ಲಿದ್ದಾರೆ.

ಏಕದಿನ ವಿಶ್ವಕಪ್‌ ಭಾರತ ತಂಡ (World Cup 2023 ODI Team India:

ರೋಹಿತ್‌ ಶರ್ಮಾ (ನಾಯಕ), ಹಾರ್ದಿಕ್‌ ಪಾಂಡ್ಯ ( ಉಪನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಕೆ.ಎಲ್.ರಾಹುಲ್‌, ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್‌, ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಮೊಹಮ್ಮದ್‌ ಸೆಮಿ, ಅಕ್ಷರ್‌ ಪಟೇಲ್‌, ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್.‌

ODI World Cup 2023 Ravichandran Ashwin replaces Axar Patel for Team India

Comments are closed.