Rashmika Instagram: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಟ್ರೋಲ್ ಗೆ ಒಳಗಾಗುವ ನಟಿ ರಶ್ಮಿಕಾ ಮಂದಣ್ಣ ಇದೀಗ ತಮ್ಮ ಇನ್ ಸ್ಟಾಗ್ರಾಂ ಖಾತೆ ಮೂಲಕ ಸುದ್ದಿಯಲ್ಲಿದ್ದಾರೆ. ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಏಕಾಏಕಿ ಬದಲಾವಣೆ ಆಗಿದ್ದು, ಅವರ ಅಕೌಂಟ್ ಹ್ಯಾಕಿಂಗ್ ಆಗಿದ್ಯಾ ಎಂಬ ಚರ್ಚೆಗಳು ಶುರುವಾಗಿವೆ. ಆದರೆ ಅಸಲಿ ವಿಚಾರವೇ ಬೇರೆ ಇದೆ.
ರಶ್ಮಿಕಾ ಮಂದಣ್ಣ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರ್ತಾರೆ. ಅದ್ರಲ್ಲೂ ಇನ್ ಸ್ಟಾಗ್ರಾಂ ಖಾತೆಯಲ್ಲಿ ದಿನದ ವಿಚಾರಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ. ಅಷ್ಟು ಮಾತ್ರವಲ್ಲದೇ ಕೆಲ ಬ್ರ್ಯಾಂಡ್ ಗಳ ಪ್ರಚಾರಕ್ಕೂ ಅವರ ಇನ್ ಸ್ಟಾಗ್ರಾಂ ಅಕೌಂಟ್ ಬಳಕೆ ಆಗುತ್ತೆ. ಅವರು ಇನ್ ಸ್ಟಾಗ್ರಾಂನಲ್ಲಿ ಮೂರುವರೆ ಕೋಟಿಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಆದ್ರೆ ಇದೀಗ ಅವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಣ್ಣ ಬದಲಾವಣೆ ಆಗಿದ್ದು, ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಅದೇನಂದ್ರೆ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ರಶ್ಮಿಕಾ ಅವರ ಹೆಸರು ಉಲ್ಟಾ ಕಾಣಿಸ್ತಿದೆ. ಹೀಗಾಗಿ ಹ್ಯಾಕರ್ಸ್ ಅವರ ಅಕೌಂಟ್ ಹ್ಯಾಕ್ ಮಾಡಿದ್ದಾರೆ ಅಂತಾನೇ ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದರು. ಹೀಗಾಗಿ ನಟಿ ರಶ್ಮಿಕಾ ಇದಕ್ಕೆ ಉತ್ತರ ನೀಡಿ, ಎಲ್ಲರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: Ram Charan – Upasana : ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಮ್ ಚರಣ್ ಮತ್ತು ಉಪಾಸನ
ಅಂದಹಾಗೆ ಖಾಸಗಿ ಕಂಪೆನಿಯೊಂದರ ಜೊತೆ ಕೈ ಜೋಡಿಸಿರುವ ರಶ್ಮಿಕಾ ಮಂದಣ್ಣ ಹೆಣ್ಣುಮಕ್ಕಳ ಶಿಕ್ಷಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅಭಿಯಾನ ಕೈಗೊಂಡಿದ್ದಾರಂತೆ. ಅದರ ಅಂಗವಾಗಿ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹೆಸರು ಉಲ್ಟಾ ಕಾಣುವಂತೆ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಶೇರ್ ಮಾಡಿರುವ ರಶ್ಮಿಕಾ ಓದಲು ಬಾರದ ಹೆಣ್ಣುಮಕ್ಕಳಿಗೆ ಇದೇ ರೀತಿ ಅನಿಸುತ್ತೆ ಎಂದು ಅಡಿಬರಹ ಹಾಕಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಶ್ಮಿಕಾ ಈ ಅಭಿಯಾನದಲ್ಲಿ ಕೈ ಜೋಡಿಸಿದ್ದು, ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: Pathan Movie Song : ದಾಖಲೆ ಬರೆದ “ಪಠಾಣ್” ಸಿನಿಮಾದ “ಬೇಷರಂ ರಂಗ್” ಹಾಡು
Rashmika Instagram: Rashmika Mandanna name has gone viral on her Instagram account what is the secret