Zika virus: ಝೀಕಾ ವೈರಸ್‌ ಎಂದರೇನು ? ಗುಣಲಕ್ಷಣಗಳೇನು : ಇಲ್ಲಿದೆ ಸಂಪೂರ್ಣ ಮಾಹಿತಿ

(Zika virus) ಈಗಾಗಲೇ ಕೋವಿಡ್‌ ಸಾಂಕ್ರಾಮಿಕ ರೋಗಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ರಾಜ್ಯದಲ್ಲಿ ಬದಲಾಗುತ್ತಿರುವ ಹವಮಾನದಿಂದಾಗಿ ಮಕ್ಕಳಲ್ಲಿ ಹಾಗೂ ವಯಸ್ಕರಲ್ಲಿ ಶೀತ, ಜ್ವರದಂತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ಮೊದಲ ಬಾರಿಗೆ ಝೀಕಾ ವೈರಸ್‌ ಸೋಂಕು ಪತ್ತೆಯಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್‌ ಬಹಳಷ್ಟು ಅಪಾಯಕಾರಿ ಆಗಿದೆ.ರಾಜ್ಯದಲ್ಲಿ ಮೊದಲ ಬಾರಿಗೆ ಝೀಕಾ ವೈರಸ್‌ ಸೋಂಕು ಪತ್ತೆಯಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ವೈರಸ್‌ ಬಹಳಷ್ಟು ಅಪಾಯಕಾರಿ ಆಗಿದೆ.

ಝೀಕಾ ವೈರಸ್‌ (Zika virus) ಎಂದರೇನು?
ಈ ವೈರಸ್‌ ಸೊಳ್ಳೆಗಳ ಮೂಲಕ ಹರಡುತ್ತದೆ. ಈಡಿಸ್ ಈಜಿಪ್ಟಿ, ಫ್ಲೇವಿ ವೈರಸ್‌ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಜಿಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಹರಡುತ್ತದೆ.

ಝೀಕಾ ವೈರಸ್‌ ಸೋಂಕಿನ ಗುಣಲಕ್ಷಣಗಳು
ಜ್ವರ
ತಲೆನೋವು
ದೇಹದ ಭಾಗಗಳಲ್ಲಿ ಗುಳ್ಳೆ ಏಳುವುದು
ಸಂದುಗಳಲ್ಲಿ ನೋವು
ಕೆಂಪು ಕಣ್ಣು
ಸ್ನಾಯುಗಳಲ್ಲಿ ನೋವು

ಝೀಕಾ ವೈರಸ್‌ ತಡೆಗಟ್ಟಲು ಕೆಲವು ಮಾರ್ಗಸೂಚಿಗಳು:
ಇಪಿಎ-ನೋಂದಾಯಿತ ಕೀಟ ನಿವಾರಕ(ಬಗ್ ಸ್ಪ್ರೇ)ವನ್ನು ಬಳಸಿ. ಈ ನಿವಾರಕವನ್ನು ಕೈ, ಕಣ್ಣು, ಅಥವಾ ಬಾಯಿಗೆ ತಾಗದಂತೆ ಎಚ್ಚರಿಕೆ ವಹಿಸಿ.
3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ಬಳಸಬೇಡಿ.
2 ತಿಂಗಳಿಗಿಂತ ಕಡಿಮೆ ವಯಸ್ಸಿನ ಶಿಶುಗಳಿಗೆ ಕೀಟ ನಿವಾರಕವನ್ನು ಬಳಸಬೇಡಿ. ಬದಲಾಗಿ, ಕಾರ್ ಸೀಟ್ ಅಥವಾ ಕ್ಯಾರಿಯರ್ ಸುತ್ತಲೂ ಸೊಳ್ಳೆ ಪರದೆಯನ್ನು ಹಾಕಿ.
ಮೊದಲು ಸನ್‌ಸ್ಕ್ರೀನ್ ಅನ್ನು ಬಳಸಿ, ನಂತರ ಕೀಟ ನಿವಾರಕವನ್ನು ಬಳಸಿ.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಂತ ನೀರು ಕಾಣಿಸಿಕೊಂಡರೆ, ನೀರು ನಿಲ್ಲುವುದನ್ನು ತಡೆಗಟ್ಟಿ.
ಉದ್ದ ತೋಳಿನ ಶರ್ಟ್ ಮತ್ತು ಉದ್ದ ಪ್ಯಾಂಟ್ ಧರಿಸಿ.
ಮನೆಯ ಒಳಗೆ ಇರುವಾಗ ಹವಾನಿಯಂತ್ರಣವನ್ನು ಬಳಸಿ ಅಥವಾ ಕಿಟಕಿ ಮತ್ತು ಬಾಗಿಲು ಪರದೆಗಳನ್ನು ಬಳಸಿ.
ಲೈಂಗಿಕ ಪ್ರಸರಣವನ್ನು ತಪ್ಪಿಸಲು ಕಾಂಡೋಮ್ಗಳನ್ನು ಬಳಸಿ ಅಥವಾ ಲೈಂಗಿಕತೆಯಿಂದ ದೂರವಿರಿ.
ಗರ್ಭಿಣಿಯರು ಝೀಕಾ ವೈರಸ್‌ ಹರಡುವ ಪ್ರದೇಶಗಳಿಗೆ ಹೊಗುವುದನ್ನು ತಪ್ಪಿಸಿ. ಒಂದು ವೇಳೆ ಅಂತಹ ಪ್ರದೇಶಕ್ಕೆ ಹೋಗಬೇಕಾದ ಅನಿವಾರ್ಯತೆಯಿದ್ದಲ್ಲಿ ಸೊಳ್ಳೆ ಕಡಿತವನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಿ.

ಇದನ್ನೂ ಓದಿ : Zika Virus : ರಾಜ್ಯದಲ್ಲಿ ಮೊದಲ ಝೀಕಾ ವೈರಸ್‌ ಸೋಂಕು ದೃಢ

ಇದನ್ನೂ ಓದಿ : Education Department Important Order : 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ : ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ

ಝೀಕಾ ವೈರಸ್‌ ತಡೆಗಟ್ಟಲು ಲಸಿಕೆ:
ಝೀಕಾ ವೈರಸ್‌ ತಡೆಗಟ್ಟಲು ಯಾವುದೇ ಲಸಿಕೆಗಳು ಇನ್ನೂ ಲಭ್ಯವಾಗಿಲ್ಲ. ಝೀಕಾ ಲಸಿಕೆ ಪೂರ್ವಭಾವಿ ಅಧ್ಯಯನದಲ್ಲಿದೆ ಎಂದು ಕನೆಕ್ಟಿಕಟ್‌ ವಿಶ್ವವಿದ್ಯಾಲಯವು ಪ್ರಕಟಿಸಿದೆ.

(Zika virus) The entire country has already been affected by the Covid epidemic. Due to the changing weather in the state, cold and flu-like diseases are appearing among children and adults. Apart from this, Zika virus infection has been detected for the first time in the state. This virus that appears in children is very dangerous.

Comments are closed.