Rashmika Mandanna Ranbir Kapoor : ಬಿಗ್ ಬಿ ಅಮಿತಾಭ್ ಬಚ್ಛನ್ ನಟನೆಯ ಗುಡ್ ಬೈ ಸಿನಿಮಾದ ಮೂಲಕ ಕೊನೆಗೂ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಇದೀಗ ರಣಬೀರ್ ಕಪೂರ್ ಜೊತೆಗಿನ ತಮ್ಮ ಮುಂದಿನ ಸಿನಿಮಾವನ್ನು ಬೆಳ್ಳಿ ತೆರೆಯ ಮೇಲೆ ತರುವ ಸಿದ್ಧತೆಯಲ್ಲಿ ನಟಿ ರಶ್ಮಿಕಾ ಇದ್ದಾರೆ. ಈ ಜೋಡಿ ಕೂಡ ಇದೇ ಮೊದಲ ಬಾರಿಗೆ ಬಿಗ್ ಸ್ಕ್ರೀನ್ನಲ್ಲಿ ಒಂದಾಗಿ ನಟಿಸುತ್ತಿದೆ. ಹೀಗಾಗಿ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ತೆರೆಯ ಮೇಲೆ ಯಾವ ರೀತಿಯಲ್ಲಿ ಕಮಾಲ್ ಮಾಡುತ್ತೆ ಅನ್ನೋದನ್ನ ನೋಡೋಕೆ ಸಿನಿ ರಸಿಕರು ಕಾತುರದಿಂದ ಕಾಯ್ತಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ರಣಬೀರ್ ಕಪೂರ್ ನಟನೆಯ ಆನಿಮಲ್ ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತಾ ಸಿನಿ ರಸಿಕರು ಕಾಯುತ್ತಾ ಇದ್ದರೆ ಇತ್ತ ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ರಣಬೀರ್ ಕಪೂರ್ ಹೇಗೆ ತಮ್ಮನ್ನು ಒಮ್ಮೆ ಅಳಿಸಿದ್ದರು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ .
ರಣಬೀರ್ ಕಪೂರ್ ಅದ್ಯಾವ ರೀತಿಯಲ್ಲಿ ರಶ್ಮಿಕಾರನ್ನು ಅಳಿಸಿದ್ದರಬಹುದು ಎಂದು ನೀವು ಯೋಚಿಸುತ್ತಿರಬಹುದು. ಅಂದಹಾಗೆ ರಣಬೀರ್ ರಶ್ಮಿಕಾರ ಮೇಲೆ ಯಾವುದೇ ತಮಾಷೆ ಮಾಡಿ ಅವರು ಅಳುವಂತೆ ಮಾಡಿಲ್ಲ. ಬದಲಾಗಿ ರಶ್ಮಿಕಾರ ಇಷ್ಟದ ಆಹಾರವನ್ನು ಶೂಟಿಂಗ್ ಸೆಟ್ಗೆ ತರುವ ಮೂಲಕ ನನ್ನನ್ನು ಅಳುವಂತೆ ಮಾಡಿದ್ದರು ಎಂದು ರಶ್ಮಿಕಾ ಹೇಳಿದ್ದಾರೆ.
ನಾನು ಆನಿಮಲ್ ಚಿತ್ರೀಕರಣದಲ್ಲಿದ್ದ ಸಂದರ್ಭದಲ್ಲಿ ಬೆಳಗ್ಗಿನ ಉಪಹಾರ ತುಂಬಾ ಬೋರಿಂಗ್ ಆಗಿ ಇರುತ್ತೆ ಅಂತಾ ಪದೇ ಪದೇ ದೂರುತ್ತಿದ್ದೆ. ಮಾರನೇ ದಿನ ರಣಬೀರ್ ನನಗಾಗಿ ನನ್ನಿಷ್ಟದ ಉಪಹಾರವನ್ನು ತಂದಿದ್ದರು. ತಮ್ಮ ಬಾಣಸಿಗರಿಂದ ಅಡುಗೆ ಮಾಡಿಸಿ ನನಗಾಗಿ ರುಚಿಕರವಾದ ಆಹಾರವನ್ನು ತರಿಸಿದ್ದರು. ಆ ಆಹಾರ ಎಷ್ಟು ಚೆನ್ನಾಗಿತ್ತು ಅಂದರೆ ನಾನು ಖುಷಿಯಿಂದ ಅಳಲು ಆರಂಭಿಸಿದೆ ಎಂದು ಹೇಳಿದ್ದಾರೆ.
ಇನ್ನು ಸಿನಿಮಾದ ಬಗ್ಗೆ ಮಾತನಾಡೋದಾದ್ರೆ ಆನಿಮಲ್ ಚಿತ್ರವನ್ನು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಈ ಸಿನಿಮಾವನ್ನು ಭೂಷಣ್ ಕುಮಾರ್ ಹಾಗೂ ಕ್ರಿಶನ್ ಕುಮಾರ್ರ ಟೀ ಸಿರೀಸ್, ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಹಾಗೂ ಪ್ರಣಯ್ ರೆಡ್ಡಿ ವಂಗಾರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಹಿಂದೆ ಈ ಸಿನಿಮಾಗೆ ಪರಿಣಿತಿ ಚೋಪ್ರಾರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಇದೀಗ ಈ ಸಿನಿಮಾದಲ್ಲಿ ರಶ್ಮಿಕಾ ಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್ ಹಾಗೂ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಆಗಸ್ಟ್ 11ರಲ್ಲಿ ರಿಲೀಸ್ ಆಗಲಿದೆ.
ಇದನ್ನು ಓದಿ : Anna Rajan : ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್ನಲ್ಲಿ ಕೂಡಿ ಹಾಕಿದ ಸಿಬ್ಬಂದಿ
ಇದನ್ನೂ ಓದಿ : High Court Recruitment 2022 : ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನ
Rashmika Mandanna cried because of Ranbir Kapoor for THIS reason | Find out