Avalakki Bath Recipe : ಚಿತ್ರಾನ್ನ ತಿನ್ನುವ ಬದಲು ಅವಲಕ್ಕಿ ಬಾತ್‌ (ಪೋಹಾ) ತಿನ್ನಿರಿ

 ಚಿತ್ರಾನ್ನವನ್ನು ಹೆಚ್ಚಿನ ಮನೆಯಲ್ಲಿ ಮಾಡುವ ಒಂದು ತಿಂಡಿಯಾಗಿದೆ. ಹಿಂದಿನ ದಿನದ ಅನ್ನ ಉಳಿದಿದ್ದೆ ಎಂದರೆ ಸಾಕು ಮರುದಿನ ತಿಂಡಿಗೆ ಚಿತ್ರಾನ್ನ ಮಾಡುತ್ತಾರೆ. ಹಾಗಾಗಿ ಚಿತ್ರಾನ್ನವೆಂದರೆ ಸಾಕು ಮನೆಯಲ್ಲಿ ಮುಖ ಸಿಂಡರಿಸಿಕೊಳ್ಳುತ್ತಾರೆ. ಚಿತ್ರಾನ್ನವನ್ನು ತಿನ್ನಲು ಬೇಸರ ಪಡುವ ಜನರು ಅವಲಕ್ಕಿ ಬಾತ್‌(Avalakki Bath Recipe) ಅಥವಾ ಅವಲಕ್ಕಿ ಪೋಹಾವನ್ನು ಮಾಡಿ ತಿನ್ನಬಹುದಾಗಿದೆ. ಇದನ್ನು ಬಹಳ ಸುಲಭವಾಗಿ ಹಾಗೂ ಬಹಳ ಬೇಗನೆ ತಯಾರಿಸಬಹುದಾಗಿದೆ. ಇದನ್ನು ತಯಾರಿಸುವುದನ್ನು ಹೇಗೆ ಎನ್ನುವುದನ್ನು ತಿಳಿಯೋಣ.

(Avalakki Bath Recipe)ಬೇಕಾಗುವ ಸಾಮಾಗ್ರಿ :

  • ಗಟ್ಟಿ ಅವಲಕ್ಕಿ
  • ಟೊಮೊಟೊ
  • ಈರುಳ್ಳಿ
  • ಹಸಿಮೆಣಸು
  • ಕೊತ್ತಂಬರಿ ಸೊಪ್ಪು
  • ಪುದಿನ ಸೊಪ್ಪು
  • ಹಸಿ ನೆಲಗಡಲೆ ಬೀಜ
  • ಕಡಲೆಬೇಳೆ
  • ಅರಶಿನ ಪುಡಿ
  • ಎಣ್ಣೆ

ತಯಾರಿಸುವ ವಿಧಾನ :

ಮೊದಲಿಗೆ ಗ್ಯಾಸ್‌ನ್ನು ಆನ್‌ ಮಾಡಿ ಅದರ ಮೇಲೆ ಬಾಣಲೆಯನ್ನು ಇಡಬೇಕು. ಬಾಣಲೆ ಬಿಸಿ ಆದ ಮೇಲೆ ಅದಕ್ಕೆ ಐದು ಟೇಬಲ್‌ ಸ್ಪೂನ್‌ ಎಣ್ಣೆಯನ್ನು ಹಾಕಬೇಕು. ನಂತರ ಅದಕ್ಕೆ ಎರಡು ಸ್ಪೂನ್‌ ಹಸಿ ನೆಲಗಡಲೆ ಬೀಜ, ಎರಡು ಸ್ಪೂನ್‌ ಕಡಲೆಬೇಳೆಯನ್ನು ಹಾಕಿ ಒಂದು ನಿಮಿಷ ಎಣ್ಣೆಯಲ್ಲಿ ಪ್ರೈ ಮಾಡಿಕೊಳ್ಳಬೇಕು. ಆಮೇಲೆ ಸಣ್ಣಗೆ ಹಚ್ಚಿ ಇಟ್ಟುಕೊಂಡ ಹಸಿಮೆಣಸುನ್ನು ಹಾಕಿ ಸ್ವಲ್ಪ ಪ್ರೈ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಹಚ್ಚಿ ಇಟ್ಟುಕೊಂಡ ಈರುಳ್ಳಿಯನ್ನು ಬೆರೆಸಿ ಅರಶಿನ ಪುಡಿಯನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು. ಆಮೇಲೆ ಹಚ್ಚಿ ಇಟ್ಟುಕೊಂಡ ಟೊಮೊಟೊವನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪುನ್ನು ಬೆರೆಸಿ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದು ಗೊಜ್ಜು ರೆಡಿ ಆದಮೇಲೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ ಕೊತ್ತಂಬರಿ ಹಾಗೂ ಪುದಿನ ಸೊಪ್ಪನ್ನು ಹಾಕಬೇಕು. ಮೊದಲೇ ತೊಳೆದು ಇಟ್ಟುಕೊಂಡ(ಅವಲಕ್ಕಿಯನ್ನು ನೆನೆಸಿ ಇಟ್ಟುಕೊಳ್ಳುವುದು ಬೇಡ) ಗಟ್ಟಿ ಅವಲಕ್ಕಿಯನ್ನು ಗೊಜ್ಜಿಗೆ ಹಾಕಿ ಸಣ್ಣ ಉರಿಯಲ್ಲಿ ಮೂರರಿಂದ ಐದು ನಿಮಿಷಗಳವರೆಗೆ ಸೌಟನ್ನು ತಿರುಗುಸುತ್ತಾ ಇರಬೇಕು. ಈಗ ಬಿಸಿ ಬಸಿ ಅವಲಕ್ಕಿ ಬಾತ್‌ ಸವಿಯಲು ಸಿದ್ದವಾಗಿರುತ್ತದೆ.

ಇದನ್ನೂ ಓದಿ : Sweet recipes:ಸಿಹಿ ಪ್ರಿಯರಿಗೆ ಇಷ್ಟವಾಗುತ್ತೆ “ಸವೆನ್‌ ಕಪ್‌‌ ” ಸ್ವೀಟ್

ಇದನ್ನೂ ಓದಿ : Avarekalu Palav Recipe : ಸುಲಭವಾಗಿ ಮಾಡಿ ಅವರೆಕಾಳು ಪಲಾವ್‌

ಇದನ್ನೂ ಓದಿ : Mushroom Biryani Recipe : ನೀವು ಸಸ್ಯಹಾರಿಗಳೇ ? ಬಿರಿಯಾನಿ ತಿನ್ನಲು ಆಸೆಯೇ ? ಮನೆಯಲ್ಲೇ ಮಾಡಿ ಮಶ್ರೂಮ್‌ ಬಿರಿಯಾನಿ

ಅವಲಕ್ಕಿ ಉಪಯೋಗ :

ಅವಲಕ್ಕಿಯಲ್ಲಿ ಹೆಚ್ಚಿನ ಫೈಬರ್‌ ಮತ್ತು ಕಾರ್ಬೋಹೈಡ್ರೇಟ್‌ ಇರುವುದರಿಂದ ನಮ್ಮ ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ. ಅವಲಕ್ಕಿಯಲ್ಲಿ ಹೆಚ್ಚಿನ ಪೈಬರ್‌ ಇರುವುದರಿಂದ ರಕ್ತದಲ್ಲಿನ ಶುಗರ್‌ ಮಟ್ಟವು ಹಿಡಿತದಲ್ಲಿಡುತ್ತದೆ. ಇದನ್ನು ತಿನ್ನುವುದರಿಂದ ಹೊಟ್ಟೆ ಹಸಿವಿನಿಂದ ದೂರವಿರಿಸುತ್ತದೆ. ಹಾಗೆ ಇದರಲ್ಲಿ ಕಬ್ಬಿಣಾಂಶ ಇರುವುದರಿಂದ ದೇಹದಲ್ಲಿನ ಐರನ್‌ ಕೊರತೆಯನ್ನು ಹೊಗಲಾಡಿಸುತ್ತದೆ. ಇದು ಉತ್ತಮ ಜೀರ್ಣಕ್ರಿಯೆಗೆ ಕೂಡ ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕ್ಯಾಲೊರಿ ಇರುವುದರಿಂದ ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಒಟ್ಟಾರೆ ಇದು ಒಂದು ಆರೋಗ್ಯಕರ ತಿಂಡಿಯಾಗಿದೆ.

Instead of eating Chitran, eat Avalakki Bath (Poha).

Comments are closed.