ತೆಲುಗಿನ ಬಹುನೀರಿಕ್ಷಿತ ಸಿನಿಮಾ ಪುಷ್ಪ (Pushpa) ಯಶಸ್ಸು ನ್ಯಾಶನಲ್ ಕ್ರಶ್, ಕನ್ನಡದ ಕುವರಿ ರಶ್ಮಿಕಾ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆಯಂತೆ. ಪುಷ್ಪದಲ್ಲಿ ಡಿ ಗ್ಲ್ಯಾಮರ್ ರೋಲ್ ನಲ್ಲಿ ಮಿಂಚಿರೋ ರಶ್ಮಿಕಾ, ನಟನೆ, ಡ್ಯಾನ್ಸ್ ಸೇರಿದಂತೆ ಹಲವು ವಿಚಾರಕ್ಕೆ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿ ದ್ದಾರೆ. ಪ್ರಾದೇಶಿಕ ಶೈಲಿಯ ತೆಲುಗಿನಲ್ಲೂ ಮಾತನಾಡಿ ಸೈ ಎನ್ನಿಸಿಕೊಂಡ ರಶ್ಮಿಕಾ ತಮಗೆ ಸಿಕ್ಕಿರೋ ಮೆಚ್ಚುಗೆಯನ್ನೇ ದಾಳವಾಗಿಸಿಕೊಂಡು ಪುಷ್ಪ ದಿ ರೂಲ್ ಸೆಕೆಂಡ್ ಸಿಕ್ವೆನ್ಸ್ ಗೆ ತಮ್ಮ ಸಂಭಾವನೆಯನ್ನು (Rashmika Mandanna HIKES Remuneration) ಅರ್ಧದಷ್ಟು ಹೆಚ್ಚಿಸಿಕೊಂಡಿದ್ದಾರಂತೆ.
ಪುಷ್ಪ ಸಿನಿಮಾ ರಶ್ಮಿಕಾ ಕೆರಿಯರ್ ನಲ್ಲಿ ಬಹುನೀರಿಕ್ಷಿತ ಸಿನಿಮಾ. ಸಖತ್ ಹೈಪ್ ಪಡೆದ ನಟಿ ರಶ್ಮಿಕಾ ಪುಷ್ಪದಲ್ಲಿ ಡೈಲಾಗ್ಸ್, ರೋಲ್‌ಹಾಗೂ ಡ್ಯಾನ್ಸ್ ಮೂಲಕ ಟಾಲಿವುಡ್ ಮಂದಿಯ ಮನ ಗೆದ್ದಿದ್ದಾರೆ. ಪುಷ್ಪ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗಿದ್ದು ರಶ್ಮಿಕಾ ಮೈಬಳುಕಿಸಿದ ಸಾಮೇ ಸಾಮೇ ಹಾಡು ಯುವಜನತೆಯ ಬಾಯಲ್ಲಿ ನಲಿದಾಡುತ್ತಿದೆ. ಈ ಮಧ್ಯೆ ಇನ್ನೇನು ಪುಷ್ಪ ಸಿನಿಮಾದ ಎರಡನೇ ಭಾಗದ ಶೂಟಿಂಗ್ ಆರಂಭವಾಗಲಿದ್ದು ಇದೇ ಹೊತ್ತಿನಲ್ಲಿ ರಶ್ಮಿಕಾ ನಿರ್ಮಾಪಕರಿಗೆ ಶಾಕ್ ನೀಡಿದ್ದಾರೆ.
ಪುಷ್ಪ ಮೊದಲನೇ ಭಾಗಕ್ಕೇ ಅತಿ ಹೆಚ್ಚು ಅಂದ್ರೇ 2 ಕೋಟಿ ಸಂಭಾವನೆ ಪಡೆದಿದ್ದ ರಶ್ಮಿಕಾ ಎರಡನೇ ಭಾಗಕ್ಕಾಗಿ ಮೂರು ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಒಂದೊಮ್ಮೆ ರಶ್ಮಿಕಾ ಪುಷ್ಪ ಸಿನಿಮಾಗಾಗಿ ಮೂರು ಕೋಟಿ ಸಂಭಾವನೆ ಪಡೆದಲ್ಲಿ ಇದು, ರಶ್ಮಿಕಾ ಇದುವರೆಗೂ ತಮ್ಮ ಕೆರಿಯರ್ ನಲ್ಲಿ ಪಡೆದ ಅತಿಹೆಚ್ಚಿನ ಸಂಭಾವನೆಯಾಗಲಿದೆ ಎಂಬ ಮಾತು ಸಿನಿವಲಯದಲ್ಲಿ ಕೇಳಿಬಂದಿದೆ. ಪುಷ್ಪ ಸಿನಿಮಾ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಲಿದ್ದು, 2022 ರ ಅಂತ್ಯದ ವೇಳೆಗೆ ತೆರೆಗೆ ಬರಲಿದೆ ಎಂದು ನಿರ್ದೇಶಕ ಸುಕುಮಾರ್ ಹೇಳಿದ್ದರು.
ಕೊರೋನಾ ಹಾಗೂ ಓಮೈಕ್ರಾನ್ ಭೀತಿಯಿಂದ ಶೂಟಿಂಗ್ ಆರಂಭ ಕೊಂಚ ವಿಳಂಬವಾಹಬಹುದಾದರೂ ಸಿನಿಮಾ ರಿಲೀಸ್ ನಿಗದಿತ ಸಮಯಕ್ಕೆ ಆಗಲಿದೆ ಎನ್ನಲಾಗುತ್ತಿದೆ. ಇನ್ನು ಪುಷ್ಪ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಗೆ ಮತ್ತೊಬ್ಬ ಕನ್ನಡದ ನಟಿ ಕೃತಿ ಶೆಟ್ಟಿ ಕೂಡ ಸಾಥ್ ನೀಡಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವೃತ್ತಿ ಬದುಕಿನ ಉತ್ತುಂಗದಲ್ಲಿರೋ ನಟಿ ರಶ್ಮಿಕಾ, ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಹಾಗೂ ವಿಕಾಸ್ ಬಹ್ಲ ನಿರ್ದೇಶನದಲ್ಲಿ ಬಿಗ್ ಬೀ ಅಮಿತಾಬ್ ಬಚ್ಚನ್ ಜೊತೆ ಗುಡ್ ಬೈ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ : ಬೀಚ್‌ನಲ್ಲಿ ಮೌನಿ ರಾಯ್ ಬಿಕನಿ ಅವತಾರಕ್ಕೆ ಫ್ಯಾನ್ಸ್ ಫಿದಾ
ಇದನ್ನೂ ಓದಿ : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ ಇತ್ತು ಎಂದ ಸಮಂತಾ
( Rashmika Mandanna HIKES Remuneration post the success of Pushpa : Demands THIS amount for Pushpa)