Mekedatu Padayatra : ಡಿಕೆಶಿಗೆ ನಿಯಮ ಉಲ್ಲಂಘನೆ ನೊಟೀಸ್ : ಬಿಜೆಪಿ ನೊಟೀಸ್ ಗೆ ಹೆದರಲ್ಲ ಅಂದ್ರು ಕನಕಪುರ ಬಂಡೆ

ಬೆಂಗಳೂರು : ರಾಜ್ಯದಲ್ಲಿ ಪಾದಯಾತ್ರೆ ಪಾಲಿಟಿಕ್ಸ್ ಕಾವೇರಿದ್ದು ಕರ್ಪ್ಯೂ ನಿಯಮ ಉಲ್ಲಂಘಿಸಿ ಅಪಾರ ಪ್ರಮಾಣದ ಜನರೊಂದಿಗೆ ಪಾದಯಾತ್ರೆ ( Mekedatu Padayatra) ನಡೆಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ರಾಮನಗರ ಜಿಲ್ಲಾಡಳಿತ ನೊಟೀಸ್ ಜಾರಿ ಮಾಡಿದೆ. ಮಾತ್ರವಲ್ಲ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಆದರೆ ಜಿಲ್ಲಾಧಿಕಾರಿ ನೀಡಿರುವ ನೊಟೀಸ್ ಗೆ ಬಿಜೆಪಿ ನೊಟೀಸ್ ಎಂದು ಲೇವಡಿ ಮಾಡಿರುವ ಡಿಕೆಶಿ ಡೋಂಟ್ ಕೇರ್ ಎನ್ನುತ್ತ ಪಾದಯಾತ್ರೆಗೆ ಹೆಜ್ಜೆಹಾಕಿದ್ದಾರೆ.

ರಾಜ್ಯದಲ್ಲಿ ಜಾರಿಯಲ್ಲಿರುವ ವೀಕೆಂಡ್ ಕರ್ಪ್ಯೂ ಹಾಗೂ ಕೊರೋನಾ ನಿಯಮಗಳನ್ನು ಉಲ್ಲಂಘಿಸಿ ಪಾದಯಾತ್ರೆ ಮಾಡುತ್ತಿರುವ ಡಿಕೆಶಿ ಶಿವಕುಮಾರ್ ಹಾಗೂ ತಂಡಕ್ಕೆ ರಾಮನಗರ ಜಿಲ್ಲಾಢಳಿತ ಮೂರನೇ ನೊಟೀಸ್ ಜಾರಿ ಮಾಡಿದೆ. ತಿಳುವಳಿಕೆ‌ ಪತ್ರ ಎಂಬ ತಲೆಬರಹದಡಿ ನೊಟೀಸ್ ಜಾರಿ ಮಾಡಿರುವ ಜಿಲ್ಲಾಢಳಿತ ಪಾದಯಾತ್ರೆ ಹೆಸರಿನಲ್ಲಿ ನಿಯಮ ಹಾಗೂ ಕಾನೂನು ಉಲ್ಲಂಘನೆಯಾಗುತ್ತಿದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿರುವ ಈ ಹೊತ್ತಿನಲ್ಲಿ ಪಾದಯಾತ್ರೆ ಸರಿಯಲ್ಲ. ಅಪಾರ ಪ್ರಮಾಣದ ಜನರಿರೋದರಿಂದ ಅವರ ಆರೋಗ್ಯ ಕ್ಕೂ ಧಕ್ಕೆಯಾಗಲಿದೆ ಎಂದು ವಿವರಿಸಿದೆ. ಅಲ್ಲದೇ ಈ ಪಾದಯಾತ್ರೆ ಗೆ ಜಿಲ್ಲಾಢಳಿತ ಅನುಮತಿ ನೀಡುವುದಿಲ್ಲ ಎಂದಿದೆ.

ಆದರೆ ಈ ನೊಟೀಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಇದು ಜಿಲ್ಲಾಢಳಿತದ ನೊಟೀಸ್ ಅಲ್ಲ. ಬಿಜೆಪಿ ನೊಟೀಸ್ ಎಂದು ಲೇವಡಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೋನಾ ಇಲ್ಲ. ಸುಮ್ನೇ ಏರ್ಪೋರ್ಟ್ ನಲ್ಲಿ ಬರುವವರನ್ನು ಚೆಕ್ ಮಾಡಿ ಕರೋನಾ ಬಂದಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ಮೇಲಿನ ಕೋಪಕ್ಕೆ ಬಿಜೆಪಿ ಕರ್ಪ್ಯೂ ಜಾರಿ ಮಾಡಿದೆ. ಇದನ್ನು ತೆಗೆದುಹಾಕಿ ಬಡವರಿಗೆ ಅನುಕೂಲ‌ಮಾಡಿ ಕೊಡಬೇಕು ಎಂದು ಸರ್ಕಾರಕ್ಕೆ‌ಸಲಹೆ‌ ನೀಡಿದ್ದಾರೆ.

ಇನ್ನು ಕನಕಪುರ ಪೊಲೀಸ್ ಠಾಣೆ ಯಲ್ಲಿ ಡಿಕೆಶಿ, ಸಿದ್ಧರಾಮಯ್ಯ ಸೇರಿದಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರಮುಖ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೂ ಎರಡನೇ‌ ದಿನದ ಪಾದಯಾತ್ರೆ ಎಂದಿನಂತೆ‌ ಮುಂದುವರೆದಿದೆ. ಈ ಮಧ್ಯೆ ಪಾದಯಾತ್ರೆ ಹೆಸರಿನಲ್ಲಿ ಕೊರೋನಾ ರೂಲ್ಸ್ ಬ್ರೇಕ್ ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ದ ಖಂಡಿತಾ ಕಾನೂನು ಪ್ರಕಾರ ಕೈಗೊಳ್ಳುತ್ತೇವೆ ಎಂದು ಸಿಎಂ ಬೆಂಗಳೂರಿನಲ್ಲಿ ಹೇಳಿದ್ದಾರೆ. ಈ ಮಧ್ಯೆ ಡಿಕೆಶಿ ಪಾದಯಾತ್ರೆಯಲ್ಲಿ ಡಿಕೆಶಿ ಏಕಾಂಗಿಯಂತಾಗಿದ್ದು ಆರಂಭದಲ್ಲಿ ಜೋಡಿಸಿದ್ದ ಸಿದ್ಧರಾಮಯ್ಯನವರು‌ಜ್ವರದ ಕಾರಣಕ್ಕೆ ನಗರಕ್ಕೆ ವಾಪಸ್ಸಾಗಿದ್ದು ಸದ್ಯ ಪ್ರಿಯಾಂಕ್ ಖರ್ಗೆ, ಅಂಜನೇಯಲು, ಡಿಕೆ.ಸುರೇಶ್ ಡಿಕೆಶಿಗೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯದಲ್ಲಿ ಕೊರೋನಾ ಸೋಂಕಿನ ನಾಗಾಲೋಟ: ಒಟ್ಟು 12 ಸಾವಿರ ಪ್ರಕರಣ ದಾಖಲು

ಇದನ್ನೂ ಓದಿ : ರಾಜ್ಯದಲ್ಲಿ ಏರುತ್ತಲೇ ಇದೆ‌ ಕೊರೋನಾ : ಚಿಕಿತ್ಸೆಗೆ ಸಜ್ಜಾದ ಖಾಸಗಿ ಆಸ್ಪತ್ರೆಗಳು

( Congress Mekedatu Padayatra, Action as per law for COVID rules violation‌ DK Shiva Kumar says BJP is not afraid of notices)

Comments are closed.