Rashmika Mandanna Looks : ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ವೃತ್ತಿ ಜೀವನದಲ್ಲಿ ಬಹು ಬೇಡಿಕೆಯ ನಟಿ ಎಂದು ಕರೆಸಿಕೊಳ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ರಶ್ಮಿಕಾ ಇದೀಗ ಬಾಲಿವುಡ್ನಲ್ಲಿಯೂ ಅತ್ಯಂತ ಬೇಡಿಕೆಯ ನಟಿ ಎನಿಸಿದ್ದಾರೆ. ನ್ಯಾಷನಲ್ ಕ್ರಶ್ ಎಂದೇ ಅಭಿಮಾನಿ ಗಳಿಂದ ಹೆಸರು ಪಡೆದಿರುವ ಗೀತ ಗೋವಿಂದಂ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಕಾರ್ಯಕ್ರಮವೊಂದರಲ್ಲಿ ಕೆಂಪು ಬಣ್ಣದ ಉಡುಪಿನಲ್ಲಿ ಕ್ಯಾಮರಾ ಕಣ್ಣಿಗೆ ಪೋಸ್ ನೀಡುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.
ಬಾಲಿವುಡ್ನ ಜನಪ್ರಿಯ ಪಾಪರಾಜಿ ವೈರಲ್ ಭಯಾನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ರಶ್ಮಿಕಾ ಕೆಂಪು ಬಣ್ಣದ ಹೊಳೆಯುವ ಅತ್ಯಾಕರ್ಷಕ ಉಡುಪಿನಲ್ಲಿ ಕಾಣಿಸಿ ಕೊಂಡಿದ್ದಾರೆ. ಆಳವಾದ ವಿ ಆಕಾರದ ಕಂಠ ರೇಖೆ, ತೊಡೆಗಳು ಕಾಣುವಂತಿರುವ ಈ ಡ್ರೆಸ್ ರಶ್ಮಿಕಾಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.
ಈ ಆಕರ್ಷಕ ಉಡುಪಿಗೆ ರಶ್ಮಿಕಾ ಅತ್ಯಂತ ಸಿಂಪಲ್ ಹೂಪ್ ಕಿವಿಯೋಲೆಗಳನ್ನು ಧರಿಸಿದ್ದರು. ಮೇಕಪ್ ಕೂಡ ಅತ್ಯಂತ ಸುಂದರವಾಗಿ ಮಾಡಿಕೊಂಡಿದ್ದರು. ಜೊತೆಗೆ ಹೀಲ್ಸ್ ಚಪ್ಪಲಿಯನ್ನು ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಶ್ಮಿಕಾ ಪಾಪರಾಜಿಗಳಿಗೆ ಪೋಸ್ ನೀಡುವುದನ್ನು ಕಾಣಬಹುದಾಗಿದೆ. ಕೊನೆಯಲ್ಲಿ ಕೊರಿಯನ್ ಹಾರ್ಟ್ ಪೋಸ್ ನೀಡುವ ಮೂಲಕ ರಶ್ಮಿಕಾ ಪಾಪರಾಜಿಗಳಿಗೆ ನಗೆ ಬೀರಿದ್ದಾರೆ .
ಅಂದಹಾಗೆ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಬಾಲಿವುಡ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮಿಷನ್ ಮಂಜು ಸಿನಿಮಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಅಮಿತಾಬ್ ಬಚ್ಛನ್ ಜೊತೆಯಲ್ಲಿ ಗುಡ್ಬೈ ಸಿನಿಮಾ ಹಾಗೂ ರಣಬೀರ್ ಕಪೂರ್ ಜೊತೆಯಲ್ಲಿ ಆನಿಮಲ್ ಸಿನಿಮಾಗೆ ರಶ್ಮಿಕಾ ಬಣ್ಣ ಹಚ್ಚಿದ್ದಾರೆ.ಈವರೆಗೆ ರಶ್ಮಿಕಾ ಮಂದಣ್ಣ ನಟನೆಯ ಯಾವುದೇ ಬಾಲಿವುಡ್ ಸಿನಿಮಾ ರಿಲೀಸ್ ಆಗಿಲ್ಲ.
ಇದನ್ನು ಓದಿ : Robin Uthappa blessed with a baby girl : ರಾಬಿನ್ ಉತ್ತಪ್ಪಗೆ ಹೆಣ್ಣು ಮಗು, 2ನೇ ಮಗುವಿಗೆ ತಂದೆಯಾದ ಕೊಡಗಿನ ವೀರ
ಇದನ್ನೂ ಓದಿ : sacrifice in-devi temple : ಗಂಡು ಮಗು ಜನಿಸಿದ ಖುಷಿಗೆ ದೇವಿಗೆ ಮನುಷ್ಯನ ಬಲಿ ನೀಡಿದ ತಂದೆ
Rashmika Mandanna Looks Stunning in a Red Hot Thigh-High Length Dress