Anganwadi workers : ಅಂಗನವಾಡಿ ಕಾರ್ಯಕರ್ತೆಯರಿಗೆ ಇಲ್ಲಿದೆ ಗುಡ್​ ನ್ಯೂಸ್​​ : ಶೀಘ್ರದಲ್ಲೇ ಸಿಗಲಿದೆ ಶಿಕ್ಷಕಿ ಸ್ಥಾನ

ಬೆಂಗಳೂರು : Anganwadi workers : ಅಂಗನವಾಡಿ ಕಾರ್ಯಕರ್ತೆಯರಿಗೆ ಶೀಘ್ರದಲ್ಲಿಯೇ ಖುಷಿಯ ಸುದ್ದಿಯೊಂದು ಕಾದಿದೆ. ಕಾರ್ಯಕರ್ತೆಯರಂತೆ ಸೇವೆ ಸಲ್ಲಿಸುತ್ತಿರುವ ಇವರಿಗೆ ಶಿಕ್ಷಕಿಯರ ಸ್ಥಾನಮಾನ ನೀಡಿ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಶಿಫಾರಸು ಮಾಡಿದೆ ಎನ್ನಲಾಗಿದೆ. ಹೀಗಾಗಿ ಶೀಘ್ರದಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಶಿಕ್ಷಕಿಯರಾಗಿ ಬಡ್ತಿ ಪಡೆಯುವ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ಪಡೆಯಲಿದ್ದಾರೆ.

ಅಂಗನವಾಡಿಗಳಲ್ಲಿ ಕಾರ್ಯನಿರ್ವಹಿಸುವ ಇವರಿಗೆ ಆರು ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳುವ ಹಾಗೂ ಆಯಾ ಗ್ರಾಮದ ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರಗಳನ್ನು ಒದಗಿಸುವ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಗಳನ್ನು ಗ್ರಾಮಕ್ಕೆ ತಲುಪಿಸುವ ಕಾರ್ಯಕರ್ತೆಯರಂತೆ ನೋಡಲಾಗುತ್ತಿತ್ತು. ಆದರೆ ರಾಷ್ಟ್ರೀಯ ಶಿಕ್ಷಣ ನೀತಿಯು ಒಂದು ಹಾಗೂ ಎರಡನೇ ತರಗತಿಯನ್ನೂ ಅಂಗನವಾಡಿಗೆ ಸೇರಿಸಿ ಇವಕ್ಕೆ ಶಾಲೆಯ ಸ್ವರೂಪವನ್ನು ನೀಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕಿಯರ ಸ್ಥಾನ ಮಾನ ನೀಡಿ ಎಂದು ಹೇಳಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸಿನ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಇನ್ಮುಂದೆ ಗೌರವ ಧನದ ಬದಲಾಗಿ ವೇತನ ಸಿಗಲಿದೆ. ಅಲ್ಲದೇ ಹೆಚ್ಚಿನ ಸೇವಾ ಭದ್ರತೆ ಕೂಡ ಇವರದ್ದಾಗಲಿದೆ. ಉತ್ತರಾಖಂಡ ರಾಜ್ಯದಲ್ಲಿ ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕಿಯರ ಸ್ಥಾನಮಾನ ನೀಡಲಾಗಿದೆ. ಇನ್ನು ಶೀಘ್ರದಲ್ಲಿಯೇ ರಾಜ್ಯದಲ್ಲಿಯೂ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಕಿಯರಾಗಿ ಬಡ್ತಿ ಪಡೆಯಲಿದ್ದಾರೆ.

ಇದನ್ನು ಓದಿ : sacrifice in-devi temple : ಗಂಡು ಮಗು ಜನಿಸಿದ ಖುಷಿಗೆ ದೇವಿಗೆ ಮನುಷ್ಯನ ಬಲಿ ನೀಡಿದ ತಂದೆ

ಇದನ್ನೂ ಓದಿ : BCCI Ignored Sanju Samson : ನತದೃಷ್ಟ ಸಂಜು ಸ್ಯಾಮ್ಸನ್ ! ಮುಂಬೈಕರ್ ಭವಿಷ್ಯಕ್ಕಾಗಿ ಕೇರಳ ಆಟಗಾರನಿಗೆ ಇದೆಂಥಾ ಅನ್ಯಾಯ ?

Anganwadi workers will soon get the post of teacher

Comments are closed.