ಕನ್ನಡದಿಂದಲೇ ಕೆರಿಯರ್ ಆರಂಭಿಸಿದ್ರೂ ಕನ್ನಡ ಸಿನಿಮಾ ರಂಗ ಹಾಗೂ ಕನ್ನಡಿಗರನ್ನು ತಮ್ಮ ಹೃದಯದಿಂದ ದೂರವೇ ಇಟ್ಟಿದ್ದಾರೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ (Rashmika Mandanna). ಅಪ್ಪಟ ಕೊಡಗಿನ ಯುವತಿಯಾಗಿರೋ ರಶ್ಮಿಕಾ ಮಂದಣ್ಣ ಈಗ ಮಾತ್ರ ಕರ್ನಾಟಕದ ಹಾದಿಯನ್ನೇ ಮರೆತು ಬಿಟ್ಟಿದ್ದಾರೆ ಅನ್ನೋ ಆರೋಪವಿದೆ.

ಈ ಮಧ್ಯೆ ಹಿಂದೊಮ್ಮೆ ಪ್ರವಾಹದ ಸಂದರ್ಭದಲ್ಲಿ ಹೈದ್ರಾಬಾದ್ ಜನರ ಕಷ್ಟವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ವಿವಾದಕ್ಕೆ ಸಿಲುಕಿದ್ದ ರಶ್ಮಿಕಾ,ಈಗ ಮತ್ತೊಮ್ಮೆ ಹೈದ್ರಾಬಾದ್ ಪೊಲೀಸರನ್ನು ಶ್ಲಾಘಿಸುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ,ಟೀಕೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ : ಮಾದಕತೆಯೇ ಮೈತುಂಬಿದ ಮಾಡೆಲ್: ಜೀನಲ್ ಜೋಶಿ ಪೋಟೋಸ್ ವೈರಲ್
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಹೈದ್ರಾಬಾದ್ ನಲ್ಲೇ ವಾಸ್ತವ್ಯ ಹೂಡಿದ್ದಾರೆ. ಸಾಲು ಸಾಲು ಸಿನಿಮಾ ಅವಕಾಶ ಬಳಿಕ ಸಖತ್ ಬ್ಯುಸಿಯಾಗಿರೋ ರಶ್ಮಿಕಾ, ಹೈದ್ರಾಬಾದ್ ನಲ್ಲಿ ಐಷಾರಾಮಿ ಫ್ಲ್ಯಾಟ್ ಖರೀದಿಸಿದ್ದಾರೆ. ಮಾತ್ರವಲ್ಲ ತಮ್ಮ ಮುದ್ದಿನ ನಾಯಿ ಹಾಗೂ ಸಹಾಯಕರ ಜೊತೆಗೆ ಅಲ್ಲಿಯೇ ವಾಸವಾಗಿದ್ದಾರೆ.

ಬಾಲಿವುಡ್ ನಲ್ಲಿ ಅವಕಾಶ ಪಡೆದ ಮೇಲೂ ರಶ್ಮಿಕಾ ಹೈದ್ರಾಬಾದ್ ನ ನಂಟು ಬಿಟ್ಟಿಲ್ಲ. ಕೇವಲ ವಾಸ್ತವ್ಯ ಮಾತ್ರವಲ್ಲ ಹೈದ್ರಾಬಾದ್ ಜೊತೆಗೆ ರಶ್ಮಿಕಾ ಅತ್ಯಂತ ಆಪ್ತ ನಂಟು ಕೂಡ ಹೊಂದಿದ್ದಾರೆ. ಈ ಹಿಂದೆ ಹೈದ್ರಾಬಾದ್ ನಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಾಗಲು ರಶ್ಮಿಕಾ ಅಲ್ಲಿನ ಜನರಿಗಾಗಿ ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಮಾತ್ರವಲ್ಲ ಅಲ್ಲಿನ ಜನರು ಪ್ರವಾಹದಿಂದ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಒಂದೇ ಒಂದು ಡೈಲಾಗ್ ಗೆ ಮನಸೋತ ಮೇಘನಾ: ತತ್ಸಮ ತದ್ಬವದ ಹಿಂದಿದ್ಯಾ ಚಿರು ಕಹಾನಿ

ರಶ್ಮಿಕಾ ಈ ವರ್ತನೆಗೆ ಕರ್ನಾಟಕದಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಟ್ವಿಟರ್, ಇನ್ ಸ್ಟಾಗ್ರಾಂನಲ್ಲಿ ರಶ್ಮಿಕಾ ವಿರುದ್ಧ ಮುಗಿಬಿದ್ದಿದ್ದ ನೆಟ್ಟಿಗರು ನಿಮ್ಮನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದು ಕರ್ನಾಟಕ,ಪ್ರೀತಿಯಿಂದ ಸ್ವೀಕರಿಸಿದ್ದು ಚಂದನವನ. ನೀವು ಹುಟ್ಟಿ ಬೆಳೆದಿದ್ದು ಎಲ್ಲ ಕರ್ನಾಟಕದಲ್ಲಿ ಹೀಗಿದ್ದು ಪ್ರವಾಹದಿಂದ ತತ್ತರಿಸಿದ ಕರ್ನಾಟಕಕ್ಕೆ ನಿಮ್ಮ ಮನಸ್ಸು ಮಿಡಿಯಲಿಲ್ಲ.
ಇದನ್ನೂ ಓದಿ : ವಯಸ್ಸಿನ ಜೊತೆ ಅಂದವೂ ಏರ್ತಿದೆ…! ಇದು ಮಲೈಕಾ ಅರೋರಾ ಎಂಬ ಮಾದಕ ಸುಂದರಿ ಕತೆ
Image credit ; Rashmika/ Instagramಆದರೆ ನಿಮಗೊಂದಿಷ್ಟು ಅವಕಾಶ ಸಿಗುತ್ತಿದ್ದಂತೆ ನಿಮ್ಮ ಮನಸ್ಸು ತಾಯ್ನೆಲವನ್ನು ಬಿಟ್ಟು ಹೈದ್ರಾಬಾದ್ ಜನರಿಗಾಗಿ ಮಿಡಿಯುತ್ತಿದೆ ಅಲ್ಲವೇ ? ನೀವೆಲ್ಲ ತಾಯ್ನೆಲದ ವಿರೋಧಿಗಳಾಗಿದ್ದೀರಿ ಎಂದು ಕಮೆಂಟ್ ಮಾಡಿದ್ದರು. ಆದರೆ ಈ ಕಮೆಂಟ್ ಹಾಗೂ ಘಟನೆಯಿಂದ ಪಾಠ ಕಲಿಯದ ರಶ್ಮಿಕಾ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಹೈದ್ರಾಬಾದ್ ಬಗ್ಗೆ ತಮ್ಮ ಪ್ರೀತಿ ಪ್ರದರ್ಶಿಸಿದ್ದಾರೆ.

ಮೊನ್ನೆ ಸುರಿದ ಭಾರಿ ಮಳೆಗೆ ಹೈದ್ರಾಬಾದ್ ನಗರದ ರಸ್ತೆಯೊಂದು ಕಟ್ಟಿಕೊಂಡಿತ್ತು.ಚರಂಡಿಗೆ ಕಸ ಕಟ್ಟಿಕೊಂಡಿದ್ದರಿಂದ ನೀರು ಸರಾಗವಾಗಿ ಹೋಗದೆ ರಸ್ತೆ ಮೇಲೆಯೇ ಹರಿದು ಅವ್ಯವಸ್ಥೆ ಸೃಷ್ಟಿಯಾಗಿತ್ತು. ಇದನ್ನು ಗಮನಿಸಿದ ಹೈದ್ರಾಬಾದ್ ನಗರ ಪೊಲೀಸರು ರಸ್ತೆಯಲ್ಲಿ ಕಟ್ಟಿಕೊಂಡ ಚರಂಡಿಯನ್ನು ಕ್ಲೀನ್ ಮಾಡಿದ್ದಾರೆ.ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗದಂತೆ ಕಟ್ಟಿಕೊಂಡ ಕಸವನ್ನು ತಮ್ಮ ಕೈಯಿಂದಲೇ ತೆಗೆದು ಸ್ವಚ್ಛಗೊಳಿಸಿದ್ದಾರೆ.
ಇದನ್ನೂ ಓದಿ : ಪ್ರೀತಿಯ ನಿಜವಾದ ಅರ್ಥ ತಿಳಿಯಿತು : ಸಾನ್ವಿ ಸುದೀಪ್ ಪೋಸ್ಟ್ ವೈರಲ್
ಹೈದ್ರಾಬಾದ್ ಕಮೀಷನರ್ ಡಿ.ಧನಲಕ್ಷ್ಮೀ ಕೂಡ ಸ್ಥಳದಲ್ಲಿದ್ದು ಪೊಲೀಸರ ಈ ಸಮಾಜಮುಖಿ ಕೆಲಸಕ್ಕೆ ತಮ್ಮ ಹುದ್ದೆಯ ಹಮ್ಮು ಬಿಮ್ಮು ಬಿಟ್ಟು ಕೈಜೋಡಿಸಿದ್ದಾರೆ. ಈ ವೈರಲ್ ವಿಡಿಯೋವನ್ನು ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿದ್ದು , ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಈ ಪೋಸ್ಟ್ ಗೆ ಇದೀಗ ಕನ್ನಡಿಗರು ಕಿಡಿಕಾರಿದ್ದಾರೆ.

ನೀವು ಮನೆಗೆ ಬಂದ್ರೆ ಸ್ವಾಗತಿಸಿ, ಭದ್ರತೆ ಕೊಡೋದು ಕರ್ನಾಟಕದ ಪೊಲೀಸರು. ಆದರೆ ನೀವೆಂದೂ ಕರ್ನಾಟಕದ ಜನರಿಗೆ ಸ್ಪಂದಿಸಲೇ ಇಲ್ಲ ಯಾಕೆ? ನೆರೆಮನೆಯೇ ಸುಂದರವಾಗಿ ಕಾಣಿಸೋದು ನಿಮಗೆ ಎಂದು ಖಾರವಾಗಿ ಕಮೆಂಟ್ ಮಾಡಿದ್ದಾರೆ. ಸದ್ಯ ರಶ್ಮಿಕಾ ಕರ್ನಾಟಕದಿಂದ ಮಾತ್ರವಲ್ಲ ಕನ್ನಡ ಸಿನಿಮಾ ದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಪೊಗರು ಸಿನಿಮಾದ ಬಳಿಕ ರಶ್ಮಿಕಾ ಕನ್ನಡದ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಜೊತೆಗೆ ಕರ್ನಾಟಕದ ಬಗ್ಗೆ ಎಂದೂ ಯಾವುದೇ ಸಂಗತಿಯನ್ನು ಉಲ್ಲೇಖಿಸಿಲ್ಲ.
rashmika mandanna New Contrversy for Instagram post