ಸೋಮವಾರ, ಏಪ್ರಿಲ್ 28, 2025
HomeCinemaRashmika Mandanna Forbes : ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ :...

Rashmika Mandanna Forbes : ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ : ಅಭಿಮಾನಿಗಳ ಪ್ರೀತಿಗೆ ರಶ್ಮಿಕಾ ಧನ್ಯವಾದ

- Advertisement -

ಒಂದಾದ ಮೇಲೊಂದು ಸಿಹಿಸುದ್ದಿ ಕೊಡ್ತಿದ್ದಾರೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ. ಬಹುನೀರಿಕ್ಷಿತ ಸಿನಿಮಾ ಪುಷ್ಪದಲ್ಲಿ ರಶ್ಮಿಕಾ ಮಂದಣ್ಣ ಪಾತ್ರದ ಬಗ್ಗೆ, ರಶ್ಮಿಕಾ ಡಿಗ್ಲ್ಯಾಮರ್ ಲುಕ್ ಗೆ ಪ್ರಶಂಸೆ ವ್ಯಕ್ತವಾಗಿರುವ ಹೊತ್ತಿನಲ್ಲೇ ರಶ್ಮಿಕಾಗೆ ಬಹುದೊಡ್ಡ ಸಿಹಿಸುದ್ದಿಯೊಂದು ಸಿಕ್ಕಿದೆ. ರಶ್ಮಿಕಾ ಫೋರ್ಬ್ಸ್ ಪಟ್ಟಿಯಲ್ಲಿ (Rashmika Mandanna Forbes) ಮೊದಲ ಸ್ಥಾನಕ್ಕೆ ಏರಿದ್ದಾರೆ. ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ most influential south star ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಭಾರತದ ಹಲವು ಸೆಲೆಬ್ರೆಟಿಗಳ ಜೊತೆಗೆ ರಶ್ಮಿಕಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2021 ನೇ ಸಾಲಿನ ದಕ್ಷಿಣ ಭಾರತದ ಅತ್ಯಂತ ಪ್ರಭಾವ ಶಾಲಿ ಸೆಲೆಬ್ರೆಟಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ. ಜನರಿಂದ ತಮಗೆ ಸಿಗುತ್ತಿರುವ ಪ್ರೀತಿಯ ಬಗ್ಗೆ ರಶ್ಮಿಕಾ ಖುಷಿ ವ್ಯಕ್ತಪಡಿಸಿದ್ದು, ಜನರಿಂದ ಸಿಗುತ್ತಿರುವ ಪ್ರೀತಿ ನೋಡಿದರೆ ಖುಷಿಯಾಗುತ್ತಿದೆ. ಇದಕ್ಕಾಗಿಯೇ ನಾನು ದುಡಿಯುತ್ತಿರುವುದು. ಈ ಪ್ರೀತಿ ಅಪರಿಮಿತವಾದದ್ದು ಹೀಗಾಗಿ ವಿನಮ್ರವಾಗಿರಲು ಬಯಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಕಿರಿಕ್ ಪಾರ್ಟಿ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ‌ ಮಂದಣ್ಣ ಬಳಿಕ ಕನ್ನಡದ ಸ್ಟಾರ್ ಗಳಾದ ದರ್ಶನ್, ಪುನೀತ್ ರಾಜ್ ಕುಮಾರ್, ಧ್ರುವ್ ಸರ್ಜಾ ಜೊತೆಗೆ ನಟಿಸಿದ್ದರು. ಅಲ್ಲಿಂದಾಚೆಗೆ ತೆಲುಗು ಚಿತ್ರರಂಗಕ್ಕೆ ಹಾರಿದ ರಶ್ಮಿಕಾ ಪುಷ್ಪ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾದಲ್ಲೂ ಮೋಡಿ ಮಾಡಿದ ರಶ್ಮಿಕಾ ಸದ್ಯ ಬಾಲಿವುಡ್ ಸಿನಿಮಾದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.

ಬಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಮೊದಲ ಸಿನಿಮಾದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಅವಕಾಶ ದಕ್ಕಿದೆ. ಗುಡ್ ಬೈ ಹಾಗೂ ಮಿಶನ್ ಮಜ್ನು ಸಿನಿಮಾದಲ್ಲಿ ನಟಿಸಿರೋ ರಶ್ಮಿಕಾ ಒಂದಾದ ಮೇಲೊಂದು ಸಿನಿಮಾಗಳಲ್ಲೇ ಬ್ಯುಸಿಯಾಗ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗಿನ ಪುಷ್ಪ ಸಿನಿಮಾದ ಶ್ರೀವಲ್ಲಿ ಪಾತ್ರ ಸಖತ್ ಮೆಚ್ಚುಗೆಗೆ ಪಾತ್ರವಾಗಿದ್ದು ಡಿಗ್ಲ್ಯಾಮರ್ ಪಾತ್ರವಾಗಿದ್ದರೂ ಸಾಮಿ ಸಾಮಿ ಹಾಡಿನ ಮೂಲಕ ರಶ್ಮಿಕಾ ಸಖತ್ ಮೋಡಿ ಮಾಡಿದ್ದಾರೆ. ತೆಲುಗಿನ ಪುಷ್ಪ ಸಿನಿಮಾ ಎರಡು ಭಾಗದಲ್ಲಿ ರಿಲೀಸ್ ಅಗಲಿದ್ದು ಸಿಕ್ವೆನ್ಸ್ ಎರಡಲ್ಲೂ ರಶ್ಮಿಕಾ ನಟಿಸಲಿದ್ದಾರಂತೆ.

ಇದನ್ನೂ ಓದಿ : ಬಾಲಿವುಡ್ ನ ಚೊಚ್ಚಲ ಸಿನಿಮಾ ಬಗ್ಗೆ ಮನಬಿಚ್ಚಿದ ಕೊಡಗಿನ ಕುವರಿ: ಮಿಶನ್ ಮಜ್ನು ಬಗ್ಗೆ ರಶ್ಮಿಕಾ ಕಮೆಂಟ್

ಇದನ್ನೂ ಓದಿ : Rashmika Mandanna: ಅವರು ನನ್ನ ಲೈಫ್ ಕೋಚ್: ರಶ್ಮಿಕಾ ಹೀಗಂದಿದ್ದು ಯಾರಿಗೆ ಗೊತ್ತಾ?

( Rashmika Mandanna overwhelmed on being named ‘most influential south star’ by Forbes )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular