100 Cantonment Zone: 15 ದಿನ 100 ಕಂಟೋನ್ಮೆಂಟ್ ಝೋನ್ : ಸದ್ದಿಲ್ಲದೇ ಹೆಚ್ಚುತ್ತಿದೆ ಕೊರೋನಾ

ಬೆಂಗಳೂರು : ಓಮಿಕ್ರಾನ್ ರೂಪಾಂತರಿಯಿಂದ ಕೊರೋನಾ ಮೂರನೇ ಅಲೆ ಭೀತಿ ಹೆಚ್ಚುತ್ತಿರುವ ಬೆನ್ನಲ್ಲೇ ನಗರದಲ್ಲಿ ದಿನ ದಿನವೂ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪ್ರತಿನಿತ್ಯ ಬಿಬಿಎಂಪಿ ನಗರದ ಕಂಟೋನ್ಮೆಂಟ್ ಝೋನ್ ಗಳ ಸಂಖ್ಯೆ ಹೆಚ್ಚಿಸುವ ಸ್ಥಿತಿ ನಿರ್ಮಾಣವಾಗಿದೆ. ಓಮಿಕ್ರಾನ್ ಹೈರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿ ಬಿಡುತ್ತಿದ್ದರೂ ನಗರದಲ್ಲಿ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ನಿಧಾನಕ್ಕೆ ಏರುಗತಿ ಪಡೆದುಕೊಂಡಿದೆ. ಹೀಗಾಗಿ ಸೋಂಕು ( corona virus hike ) ಸಾರ್ವಜನಿಕ ವಾಗಿ ಹಬ್ಬುವುದನ್ನು ತಡೆಯಲು ಬಿಬಿಎಂಪಿ ಕಂಟೋನ್ಮೆಂಟ್ ಝೋನ್ ಗಳನ್ನು(100 Cantonment Zone) ನಿರ್ಮಾಣ ಮಾಡುತ್ತಿದೆ. ಹೀಗಾಗಿ ಈಗ ದಿನದಿಂದ ದಿನಕ್ಕೆ ನಗರದಲ್ಲಿನ ಕಂಟೋನ್ಮೆಟ್ ಝೋನ್ ಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಕಂಟೋನ್ಮೆಂಟ್ ಝೋನ್ ಗಳ ಸಂಖ್ಯೆಯನ್ನು ಗಮನಿಸೋದಾದರೇ, ಕಳೆದ 15 ದಿನಗಳಲ್ಲಿ ಶೇಕಡ 90ರಷ್ಟು ಪ್ರಮಾಣದಲ್ಲಿ ಕಂಟೋನ್ಮೆಟ್ ಝೋನ್ ಗಳ ಹೆಚ್ಚಳವಾಗಿದೆ. ಎರಡೇ ವಾರದಲ್ಲಿ ಕಂಟೋನ್ಮೆಂಟ್ ಝೋನ್ ಸಂಖ್ಯೆ 50 ರಿಂದ 100ಕ್ಕೆ ಏರಿದೆ‌. ಡಿಸೆಂಬರ್ 2ರಂದು ಓಮೈಕ್ರಾನ್ ಕೇಸ್ ಪತ್ತೆಯಾದ ಬೆನ್ನಲ್ಲೇ ದಿನದಿಂದ ದಿನಕ್ಕೆ ಸಂಖ್ಯೆ ಏರಿಕೆಯಾಗುತ್ತಿದ್ದು ದಿನವಾರು ಏರಿಕೆಯಾಗಿರುವ ಕಂಟೋನ್ಮೆಟ್ ಝೋನ್ಗಳ ವಿವರ ಇಲ್ಲಿದೆ.

ನಗರದ ಕಂಟೋನ್ಮೆಂಟ್ ಝೋನ್ ಗಳ ವಿವರ.

ಡಿಸೆಂಬರ್ 02 : 56
ಡಿಸೆಂಬರ್ 03 : 57
ಡಿಸೆಂಬರ್ 04 : 66
ಡಿಸೆಂಬರ್ 05 : 75
ಡಿಸೆಂಬರ್ 06 : 76
ಡಿಸೆಂಬರ್ 07 : 80
ಡಿಸೆಂಬರ್ 08 : 82
ಡಿಸೆಂಬರ್ 09 : 85
ಡಿಸೆಂಬರ್ 10 : 86
ಡಿಸೆಂಬರ್ 11 : 85
ಡಿಸೆಂಬರ್ 12 : 93
ಡಿಸೆಂಬರ್ 13 : 101
ಡಿಸೆಂಬರ್ 14 : 100
ಡಿಸೆಂಬರ್ 15 : 10

100 Cantonment Zone in 15 Days: corona virus hike in bangalore

ಇನ್ನು ಬಿಬಿಎಂಪಿ ವಲಯವಾರು ಕಂಟೋನ್ಮೆಟ್ ಝೋನ್ ಗಳ ವಿವರವನ್ನು ಗಮನಿಸೋದಾದ್ರೇ,

ಬೊಮ್ಮನಹಳ್ಳಿ : 31
ದಕ್ಷಿಣ ವಲಯ : 18
ಮಹಾದೇವಪುರ : 16
ಪೂರ್ವ ವಲಯ : 13
ಯಲಹಂಕ ವಲಯ : 08
ಪಶ್ಚಿಮ ವಲಯ : 07
ಆರ್ ಆರ್ ನಗರ : 06
ದಾಸರಹಳ್ಳಿ : 03
ಒಟ್ಟು : 102 ಕಂಟೋನ್ಮೆಂಟ್ ಝೋನ್ ಗಳನ್ನು ನಿರ್ಮಿಸಲಾಗಿದೆ.

ಇದಲ್ಲದೇ ಸದ್ಯ ಬೆಂಗಳೂರು ಏರ್ಪೋರ್ಟ್ ಗೆ ಬರುವ ಹೈರಿಸ್ಕ್ ದೇಶಗಳ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಅವರನ್ನು ನಗರಕ್ಕೆ ಪ್ರವೇಶಿಸದಂತೆ ತಡೆಯಲು ನಗರದ ಹೊರವಲಯದಲ್ಲೇ ಕ್ವಾಂರಟೈನ್‌ಮಾಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಒಟ್ಟಿನಲ್ಲಿ ಮೂರನೇ ಅಲೆ ಬರೋದಿಲ್ಲ ಎಂಬ ನೆಮ್ಮದಿಯಲ್ಲಿದ್ದ ಸಾರ್ವಜನಿಕರಿಗೆ ಕೊರೋನಾ ಪ್ರಮಾಣ ಏರಿಕೆ ಶಾಕ್ ತಂದಿದೆ.

ಇದನ್ನೂ ಓದಿ : Omicron patient discharge : ಕೊರೋನಾಂತಕದ ನಡುವೆ ಸಮಾಧಾನದ ಸುದ್ದಿ: ಓಮೈಕ್ರಾನ್ ಸೋಂಕಿತ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್

ಇದನ್ನೂ ಓದಿ : Omicron 5 Case Karnataka : ರಾಜ್ಯದಲ್ಲಿ ಓಮಿಕ್ರಾನ್ ಸ್ಪೋಟ : ಮತ್ತೆ ಐವರಿಗೆ ಮಾರಣಾಂತಿಕ ಸೋಂಕು

(100 Cantonment Zone in 15 Days: corona virus hike in Bangalore)

Comments are closed.