ಭಾನುವಾರ, ಜೂನ್ 15, 2025
HomeCinema1,2,3,4,5 ರಲ್ಲಿ ನಿಮಗ್ಯಾವ ಪೋಟೋ ಇಷ್ಟ ? ಅಭಿಮಾನಿಗಳಿಗೆ ರಶ್ಮಿಕಾ ಪ್ರಶ್ನೆ

1,2,3,4,5 ರಲ್ಲಿ ನಿಮಗ್ಯಾವ ಪೋಟೋ ಇಷ್ಟ ? ಅಭಿಮಾನಿಗಳಿಗೆ ರಶ್ಮಿಕಾ ಪ್ರಶ್ನೆ

- Advertisement -

ಸದ್ಯ ವೃತ್ತಿ ಬದುಕಿನ ಉತ್ತುಂಗದಲ್ಲಿರೋ ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲೂ ಪಬ್ಲಿಸಿಟಿಯ ಶಿಖರವೇರಿದ್ದಾರೆ. ಒಂದಾದ ಮೇಲೊಂದರಂತೆ ಪೋಟೋಶೂಟ್ ನಲ್ಲಿ ಮಿಂಚ್ತಿರೋ ರಶ್ಮಿಕಾ (Rashmika Mandanna Photoshoot) ಸದ್ಯ ಫಿಲ್ಮ್ ಫೇರ್ ಪತ್ರಿಕೆಗಾಗಿ ನಡೆಸಿದ ಪೋಟೋಶೂಟ್ ಪೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಪೋಟೋಸ್ ಲೈಕ್ಸ್ ಕಮೆಂಟ್ ಜೊತೆ ಸಖತ್ ವೈರಲ್ ಆಗ್ತಿದೆ.

Rashmika Mandanna Photoshoot in white Dress
ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್ ನಿಂದ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಸದ್ಯ ತೆಲುಗು,‌ತಮಿಳಿನ ಬಳಿಕ ಬಾಲಿವುಡ್ ನಲ್ಲೂ ಬ್ಯುಸಿಯಾಗಿದ್ದಾರೆ. ಕನ್ನಡದ ಪೊಗರು ಸಿನಿಮಾದ ಬಳಿಕ ತೆಲುಗು, ತಮಿಳಿನತ್ತಲೇ ಮುಖಮಾಡಿದ್ದ ರಶ್ಮಿಕಾ ಈಗ ಎರಡೆರಡು ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಮಾತ್ರವಲ್ಲ ಮೂರನೇ ಸಿನಿಮಾಕ್ಕೂ ಸಹಿ ಹಾಕಿದ್ದಾರೆ.

ಇದೆಲ್ಲದರ ಮಧ್ಯೆ ತೆಲುಗಿನ ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಡಿ ಗ್ಲ್ಯಾಮರ್ ಲುಕ್ ಸಖತ್ ಫೇಮಸ್ ಆಗಿದ್ದು ಮಾತ್ರವಲ್ಲ ಡ್ಯಾನ್ಸ್ ಮೂಲಕವೂ ರಶ್ಮಿಕಾ ಮತ್ತಷ್ಟು ಅಭಿಮಾನಿಗಳನ್ನು ಹೆಚ್ಚಿಸಿಕೊಂಡರು.‌ ಇದೆಲ್ಲದರ ಮಧ್ಯೆ ಒಂದಾದ‌ ಮೇಲೂಂದರಂತೆ ಹಾಟ್ ಹಾಟ್ ಪೋಟೋಶೂಟ್ ಗಳಲ್ಲಿ ರಶ್ಮಿಕಾ ಮಂದಣ್ಣ ಮಿಂಚುತ್ತಿದ್ದಾರೆ.

Rashmika Mandanna Photoshoot in white Dress

ಫಿಲ್ಮ್ ಫೇರ್ ಕವರಪೇಜ್ ಗಾಗಿ ರಶ್ಮಿಕಾ ವೈಟ್ ಮತ್ತು ವೈಟ್ ವಿಂಡೋ ಡಿಸೈನ್ ಡ್ರೆಸ್ ಹಾಗೂ ಆರೇಂಜ್ ಫುಲ್ ಡೀಪ್ ಔಟ್ ಫಿಟ್ ನಲ್ಲಿ ಸಖತ್ ಹಾಟ್ ಹಾಟ್ ಪೋಸ್ ನಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದರು. ಈ ಪೈಕಿ ಆರೇಂಜ್ ಔಟ್ ಫಿಟ್ ಪೋಟೋ ಫಿಲ್ಮ್ ಫೇರ್ ಕವರಪೇಜ್ ನಲ್ಲಿ ಪ್ರಕಟಗೊಂಡಿದೆ. ಈ ಪೋಟೋಶೂಟ್ ನ ಉಳಿದ ಹಾಟ್ ಹಾಟ್ ಪೋಟೋಗಳನ್ನು ರಶ್ಮಿಕಾ ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Rashmika Mandanna Photoshoot in white Dress
ನಟಿ ರಶ್ಮಿಕಾ ಮಂದಣ್ಣ

ಅಲ್ಲದೇ ಐದು ಪೋಟೋಗಳನ್ನು ಶೇರ್ ಮಾಡಿಕೊಂಡಿರೋ ರಶ್ಮಿಕಾ, Which One of these do you like most? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಡಿಪರೆಂಟ್ ಔಟ್ ಫಿಟ್ ನಲ್ಲಿ ಮಿಂಚಿರೋ ರಶ್ಮಿಕಾಗೆ ಸೆಲೆಬ್ರೆಟಿಗಳು ಕೂಡ ಮೆಚ್ಚುಗೆವ್ಯಕ್ತಪಡಿಸಿದ್ದಾರೆ.

ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ಬಾಲಿವುಡ್ ನ ನಿರ್ದೇಶಕ ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲೂ ಟ್ರೆಂಡಿ ಡ್ರೆಸ್ ನಲ್ಲಿ ಮಿಂಚಿದ್ದರು. ಇದಾದ ಬಳಿಕ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಮತ್ತು ಹಾಟ್ ಪೋಟೋದ‌ ಮೂಲಕ ಪಡ್ಡೆ ಹೈಕಳ ಮನಗೆಲ್ಲುತ್ತಿದ್ದಾರೆ.

ಇದನ್ನೂ ಓದಿ : Demi Rose : ಇನ್ ಸ್ಟಾಗ್ರಾಂನಲ್ಲಿ ಡೆಮಿ ರೋಸ್‌ ಗೆ 19 Millions ಫಾಲೋವರ್ಸ್ : ‘ಹೃದಯ ಸುಂದರಿ’ಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : ಅನೌನ್ಸ್ ಆಗುತ್ತಾ ಯಶ್ ಬಾಲಿವುಡ್ ಸಿನಿಮಾ : ಹೊಂಬಾಳೆ ಫಿಲ್ಸ್ಮ್ ಕೊಡ್ತಿದೆ ಹಿಂಟ್

Rashmika Mandanna Photoshoot in white Dress

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular