ಸದ್ಯ ಬಾಲಿವುಡ್, ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಎನ್ನಿಸಿರೋದು ನ್ಯಾಶನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ (Rashmika Mandanna). ವೃತ್ತಿ ಬದುಕಿನ ಉತ್ತುಂಗದಲ್ಲಿರೋ ರಶ್ಮಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಇದರ ಜೊತೆಗೆ ಜಾಹೀರಾತಿನಲ್ಲೂ ರಶ್ಮಿಕಾ ಬ್ಯುಸಿಯಾಗಿದ್ದಾರೆ. ಇದೆಲ್ಲದರ ಜೊತೆಗೆ ಅಲ್ಲಲ್ಲಿ ಗಾಸಿಪ್ ಗೂ ಅಹಾರ ವಾಗುತ್ತಿರುವ ರಶ್ಮಿಕಾ ಮದುವೆಯಾಗೋಕೆ ಮಾತ್ರ ಸಿದ್ಧವಿಲ್ಲ. ಅಷ್ಟಕ್ಕೂ ರಶ್ಮಿಕಾ ಮದುವೆ ಬಗ್ಗೆ ಏನು ಹೇಳಿದ್ರು ಇಲ್ಲಿದೆ ಡಿಟೇಲ್ಸ್.
ರಶ್ಮಿಕಾ ಮಂದಣ್ಣ ಚಿಗರೆ ಕಂಗಳ ಹುಡುಗಿ.ಕನ್ನಡದ ಕಿರಿಕ್ ಪಾರ್ಟಿ ಮೂಲಕ ಬೆಳಕಿಗೆ ಬಂದ ಪ್ರತಿಭೆ ಈಗ ಟಾಲಿವುಡ್, ಕಾಲಿವುಡ್, ಬಾಲಿವುಡ್ ನ ಬಹುಬೇಡಿಕೆಯ ನಟಿ. ಸದ್ಯ ಪುಷ್ಪ ಸಿನಿಮಾದ ಅದ್ಭುತ ಯಶಸ್ಸಿನ ಅಲೆಯಲ್ಲಿರೋ ರಶ್ಮಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅಷ್ಟೇ ಚಿಕನ್ ನಿಂದ ಆರಂಭಿಸಿ ನೊರೆಂಟು ಜಾಹೀರಾತಿನ ತನಕವೂ ರಶ್ಮಿಕಾ ತಮ್ಮ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದಾರೆ. ಇಂತಿಪ್ಪ ರಶ್ಮಿಕಾ ವೈಯಕ್ತಿಕ ಬದುಕಿನಲ್ಲೂ ಸದಾ ಗಾಸಿಪ್ ಜೊತೆಗೆ ಹೆಜ್ಜೆ ಹಾಕುತ್ತಾರೆ.
ಸದ್ಯ ನಟ ವಿಜಯ್ ದೇವರುಕೊಂಡ ಜೊತೆ ರಶ್ಮಿಕಾ ಹೆಸರು ಕೇಳಿಬಂದಿದೆ. ಇದಕ್ಕೆ ಪೂರಕ ಎಂಬಂತೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಒಂದಾಗಿ ಗೋವಾದಲ್ಲಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. .ಹೀಗಾಗಿ ಸದ್ಯವೇ ರಶ್ಮಿಕಾ ಹಾಗೂ ವಿಜಯ್ ನಿಜಬದುಕಿನಲ್ಲೂ ಜೋಡಿಯಾದರೂ ಅಚ್ಚರಿಯೇನಿಲ್ಲ. ಹೀಗೆ ವಿಜಯ್ ಜೊತೆ ತಡರಾತ್ರಿ ಪಾರ್ಟಿ, ರೆಸಾರ್ಟ್ ಗಳಲ್ಲಿ ಕಾಣಿಸಿಕೊಳ್ತಿರೋ ರಶ್ಮಿಕಾ ಮದುವೆಯ ವಿಚಾರಕ್ಕೆ ಮಾತ್ರ ನಾನಿನ್ನು ಸಣ್ಣವಳು.ನಂಗೇನು ಗೊತ್ತಿಲ್ಲ ಎಂದಿದ್ದಾರೆ.
ಹೌದು ಇತ್ತೀಚಿಗೆ ಇಂಗ್ಲೀಷ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ರಶ್ಮಿಕಾ ಈ ವೇಳೆ ಪ್ರೀತಿ ಪ್ರೇಮ ಮದುವೆ ಬಗ್ಗೆ ಮನಸ್ಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನನ್ನ ಪ್ರಕಾರ ಲವ್ ಎಂದರೇ, ಪರಸ್ಪರ ಸಮಯ,ಗೌರವ ನೀಡುವುದು. ಒಬ್ಬರ ಜೊತೆಗಿದ್ದಾಗ ಮತ್ತೊಬ್ಬರು ಸುರಕ್ಷಿತ ಭಾವ ಅನುಭವಿಸುವುದೇ ಪ್ರೀತಿ . ಪ್ರೀತಿ ತುಂಬ ಭಾವನಾತ್ಮಕವಾದ ವಿಚಾರ. ಅದನ್ನು ವಿವರಿಸುವುದು ಕಷ್ಟ ಎಂದಿದ್ದಾರೆ.
ಅಲ್ಲದೆ ರಶ್ಮಿಕಾ ಮಂದಣ್ಣ ಮದುವೆಯಾಗೋದು ಯಾವಾಗ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನಿನ್ನು ಯೋಚಿಸಿಲ್ಲ. ನನ್ನ ಪ್ರಕಾರ ಈಗಲೇ ಮದುವೆ ಬಗ್ಗೆ ಯೋಚಿಸಲು ನಾನಿನ್ನು ಚಿಕ್ಕವಳು. ಆದರೆ ಇಷ್ಟು ಮಾತ್ರ ಹೇಳುತ್ತೇನೆ, ನಿಮಗೆ ಕಂಪರ್ಟೆಬಲ್ ಅನ್ನಿಸುವವರ ಜೊತೆಗೆ ನೀವು ಇರೋದೇ ಮದುವೆ. ಆದರೆ ಇಲ್ಲಿ ಪ್ರೀತಿ,ಗೌರವಗಳು ಎರಡು ಕಡೆಯಲ್ಲೂ ಸಮಾನವಾಗಿರಬೇಕು ಎಂದಿದ್ದಾರೆ.ಕನ್ನಡದ ಮೊದಲ ಚಿತ್ರದ ಬಳಿಕ ನಟಿ ರಶ್ಮಿಕಾ ಮಂದಣ್ಣ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಬಳಿಕ ವೈಯುಕ್ತಿಕ ಕಾರಣಕ್ಕೆ ಈ ಮದುವೆ ಮುರಿದು ಬಿದ್ದಿತ್ತು.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆ ಇಟ್ಟ ಪುಪ್ಫಾ ಶ್ರೀವಲ್ಲಿ ಸೀರೆ ; ಉತ್ತರ ಭಾರತದಲ್ಲೂ ಅಲ್ಲೂ ಅರ್ಜುನ್ ಹವಾ
ಇದನ್ನೂ ಓದಿ : ಪುನೀತ್ ರಾಜ್‍ಕುಮಾರ್ ಬಯೋಗ್ರಫಿ; ಆರ್ಡರ್ ಮಾಡುವುದು ಹೇಗೆ?
( Rashmika Mandanna says I am too young to get married)