Uniform Civil Code Explainer: ಏಕರೂಪ ನಾಗರಿಕ ಸಂಹಿತೆ: ಏನು ಎತ್ತ? ವಿವಾದವೇಕೆ?

ಹಿಜಾಬ್ ವಿವಾದದ ವಿಚಾರಣೆ (Hijab Row In Karnataka High Court) ಸದ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಅತ್ತ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (UP CM Yogi Adityanath)ಮತ್ತು ಉತ್ತರಾಖಂಡ್ ಪುಷ್ಕರ್ ಸಿಂಗ್ ಧಾಮಿ (Uttarakhand CM Pushkar Singh Dhami ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಕುರಿತು ಧ್ವನಿ ಎತ್ತಿದ್ದಾರೆ. ಹಾಗಿದ್ದರೆ ಏಕರೂಪ ನಾಗರಿಕ ಸಂಹಿತೆ ಅಂದರೆ ಏನು? ಈ ವಾದದ ತಳಹದಿಯೇನು? ಈ ಕಾಯ್ದೆಯ ಅಗತ್ಯತೆ ಇದೆಯೇ? ಏಕರೂಪ ನಾಗರಿಕ ಸಂಹಿತೆಯನ್ನು (Uniform Civil Code Explainer) ಪಾಲಿಸದಿದ್ದರೆ ಏನಾದರೂ ಸಮಸ್ಯೆಯಿದೆಯೇ? ಈ ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯವಿದೆಯೇ ಎಂಬ ಕೆಲವು ಪ್ರಶ್ನೆಗಳಿಗೆ ಉತ್ತರ ಕಟ್ಟಿಕೊಡುವ ಪ್ರಯತ್ನವನ್ನು ನಿಮ್ಮ ನ್ಯೂಸ್‌ನೆಕ್ಸ್ಟ್‌ಲೈವ್ ಕನ್ನಡ ಮಾಡಿದೆ.

ಮದುವೆ, ವಿಚ್ಛೇದನ, ದತ್ತು ಮತ್ತು ಉತ್ತರಾಧಿಕಾರದಂತಹ ನಾಗರಿಕರ ವೈಯಕ್ತಿಕ ವಿಷಯಗಳ ಕುರಿತಾದ ನಾಗರಿಕರ ದೈನಂದಿನ ಜೀವನಕ್ಕೆ ಸಂಬಂಧಿಸಿದೆ ಏಕರೂಪ ವಸ್ತ್ರ ಸಂಹಿತೆ. ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರುಗಳು ಹಿಂದೂ ಕಾನೂನುಗಳ ವ್ಯಾಪ್ತಿಗೆ ಒಳಪಟ್ಟರೆ, ಮುಸಲ್ಮಾನರು ಮತ್ತು ಕ್ರೈಸ್ತರು ತಮ್ಮದೇ ಆದ ಕಾನೂನುಗಳನ್ನು ಹೊಂದಿದ್ದಾರೆ. ಸಂವಿಧಾನದ 44 ನೇ ವಿಧಿಯು ಭಾರತದ ಭೂಪ್ರದೇಶದಾದ್ಯಂತ UCC ಅನ್ನು ಕಡ್ಡಾಯಗೊಳಿಸುತ್ತದೆ. ಏಕರೂಪ ನಾಗರಿಕ ಸಂಹಿತೆ (UCC) ಭಾರತಕ್ಕೆ ಒಂದು ಕಾನೂನನ್ನು ರೂಪಿಸಲು ಕರೆ ನೀಡುತ್ತದೆ.  ಇದು ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮುಂತಾದ ವಿಷಯಗಳಲ್ಲಿ ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಅನ್ವಯಿಸುತ್ತದೆ.

ಏಕರೂಪ ನಾಗರಿಕ ಸಂಹಿತೆಯ ಮೂಲವು ವಸಾಹತುಶಾಹಿ ಭಾರತದ್ದು. ಬ್ರಿಟಿಷ್ ಸರ್ಕಾರವು 1835 ರಲ್ಲಿಯೇ ಈಕುರಿತು ಬ್ರಿಟಿಷ್ ಸರ್ಕಾರಕ್ಕೆ ವರದಿಯೊಂದು ಸಲ್ಲಿಕೆಯಾಗಿತ್ತು. ಭಾರತದಲ್ಲಿನ ಕ್ರಿಮಿನಲ್ ಕಾನೂನುಗಳು ಏಕರೂಪವಾಗಿರುತ್ತವೆ ಮತ್ತು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ಆದರೆ ಸಿವಿಲ್ ಅಥವಾ ನಾಗರಿಕ ಪ್ರಕರಣಗಳ ವಿಚಾರಣೆ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ರಚನೆಗೊಂಡ ಕಾನೂನಿನ ಅಡಿ ವಿಚಾರಣೆಗೆ ಒಳಪಡುವ ಅವಕಾಶವಿದೆ. ಏನೇ ಇರಲಿ, ನಾಗರಿಕ ಕಾನೂನುಗಳು ನಂಬಿಕೆಯಿಂದ ಪ್ರಭಾವಿತವಾಗಿವೆ. ಧಾರ್ಮಿಕ ಗ್ರಂಥಗಳಿಂದ ಒಲವು ತೋರಿ, ಸಿವಿಲ್ ಪ್ರಕರಣಗಳಲ್ಲಿ ಜಾರಿಗೆ ಬರುವ ವೈಯಕ್ತಿಕ ಕಾನೂನುಗಳು ಯಾವಾಗಲೂ ಸಾಂವಿಧಾನಿಕ ಮಾನದಂಡಗಳ ಪ್ರಕಾರ ಜಾರಿಗೆ ಬಂದಿವೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಪುನರಾಯ್ಕೆಯಾದರೆ, ತಮ್ಮ ಸರ್ಕಾರವು ಏಕರೂಪ ನಾಗರಿಕ ಸಂಹಿತೆಯನ್ನು ತರಲಿದೆ ಎಂದು ಭರವಸೆ ನೀಡಿದ್ದಾರೆ. ಬಿಜೆಪಿ ನಾಯಕರು ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಒಂದಾನುವೇಳೆ ಈ ಕಾಯ್ದೆ ಉತ್ತರಾಖಂಡದಲ್ಲಿ ಜಾರಿಯಾದರೆ ‘ತಜ್ಞರು’ ಉತ್ತರಾಖಂಡವು ಗೋವಾದ ನಂತರ ಎರಡನೇ ರಾಜ್ಯವಾಗಲಿದೆ. ಸಂವಿಧಾನದ 44 ನೇ ವಿಧಿಯು ‘ಭಾರತದ ಭೂಪ್ರದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪಡೆಯಲು ರಾಜ್ಯವು ಪ್ರಯತ್ನಿಸುತ್ತದೆ’ ಎಂದು ಹೇಳುತ್ತದೆ.

ಏಕವಸ್ತ್ರ ನಾಗರಿಕ ಸಂಹಿತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಮಾತೊಂದನ್ನು ಈ ಕಾಯ್ದೆಯ ಪರ ಇರುವವರು ಉಲ್ಲೇಖಿಸುತ್ತಾರೆ. 2019 ರಲ್ಲಿ, ಸುಪ್ರೀಂ ಕೋರ್ಟ್ ಪೀಠವು ಏಕರೂಪ ನಾಗರಿಕ ಸಂಹಿತೆ ಜಾರಿಯಾಗದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸಿತ್ತು. ಸಂವಿಧಾನದ ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ 44 ನೇ ವಿಧಿಯಲ್ಲಿನ ಭಾಗ 4 ರಲ್ಲಿ ರಾಜ್ಯಗಳು ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಸೂಚಿಸಿದೆ. ಆದರೆ ಇದುವರೆಗೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ತ್ರಿವಳಿ ತಲಾಖ್ ವ್ಯವಸ್ಥೆಯನ್ನು ನಿಷೇಧಿಸುವ ಕಾನೂನನ್ನು ಈಗಾಗಲೇ ಜಾರಿಗೊಳಿಸಿರುವುದು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1

(Uniform Civil Code Explainer personal laws and criminal law Hindu and Muslim Community)

Comments are closed.