rashmika mandanna goodbye film industry : ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಭಾರತೀಯ ಚಿತ್ರರಂಗದ ಓಡುವ ಕುದುರೆ ಎಂದು ಹೇಳಿದರೆ ತಪ್ಪಾಗಲಾರದು. ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೇ ರಶ್ಮಿಕಾ ಬಾಲಿವುಡ್ನಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಲು ಎದುರು ನೋಡುತ್ತಿದ್ದಾರೆ. ಈಗಾಗಲೇ ಹಿಂದಿ ಸಿನಿಮಾಗಳಲ್ಲಿ ಶೂಟಿಂಗ್ ಕಾರ್ಯವನ್ನು ಮುಗಿಸಿರುವ ರಶ್ಮಿಕಾ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಬಾಲಿವುಡ್ನಲ್ಲಿಯೂ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಗೀತ ಗೋವಿಂದಂ ಖ್ಯಾತಿಯ ನಟಿ ರಶ್ಮಿಕಾ ಒಂದಿಲ್ಲೊಂದು ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ.
ರಶ್ಮಿಕಾ ಮಂದಣ್ಣ ಸದ್ಯ ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವ ವೇಗವನ್ನು ನೋಡಿದರೆ ಇನ್ನೊಂದು 10 ವರ್ಷ ರಶ್ಮಿಕಾಗೆ ಸಿನಿಮಾ ಲೋಕದಲ್ಲಿ ಯಾವುದೇ ಅಡಚಣೆ ಇಲ್ಲ ಎಂದು ಹೇಳಬಹುದು. ಆದರೆ ರಶ್ಮಿಕಾ ಮಂದಣ್ಣರ ಭವಿಷ್ಯ ಮಾತ್ರ ಬೇರೆಯದ್ದನ್ನೇ ಹೇಳುತ್ತಿದೆ. ಆಂಧ್ರ ಪ್ರದೇಶದ ಖ್ಯಾತ ಜ್ಯೋತಿಷಿಯೊಬ್ಬರು ರಶ್ಮಿಕಾ ಮಂದಣ್ಣ ತಮ್ಮ 32ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹೌದು..! ಆಂಧ್ರ ಪ್ರದೇಶದ ಜ್ಯೋತಿಷಿಯೊಬ್ಬರು ನುಡಿದಿರುವ ಭವಿಷ್ಯದ ಪ್ರಕಾರ ರಶ್ಮಿಕಾ ತಮ್ಮ 32ನೇ ವಯಸ್ಸಿನಲ್ಲಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ನೀಡಲಿದ್ದಾರಂತೆ. ಸಿನಿಮಾ ರಂಗದಿಂದ ಬ್ರೇಕ್ ಪಡೆದು ನಟಿ ರಶ್ಮಿಕಾ ಮಂದಣ್ಣ ರಾಜಕೀಯ ಲೋಕಕ್ಕೆ ಸೇರಲಿದ್ದಾರೆಂದು ಜ್ಯೋತಿಷ್ಯ ನುಡಿದಿದ್ದಾರೆ. ಅಂದಹಾಗೆ ಈ ಜ್ಯೋತಿಷಿಯು ಈ ಹಿಂದೆ ನಟಿ ಸಮಂತಾ ಹಾಗೂ ನಾಗಚೈತನ್ಯ ತಮ್ಮ ದಾಂಪತ್ಯ ಜೀವನವನ್ನು ಮುರಿದುಕೊಂಡು ವಿಚ್ಛೇದನ ಪಡೆಯುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಆ ಮಾತು ನಿಜ ಕೂಡ ಆಗಿದೆ. ಹೀಗಾಗಿ ರಶ್ಮಿಕಾ ಮಂದಣ್ಣ ವಿಚಾರದಲ್ಲಿ ಇವರು ನುಡಿದಿರುವ ಈ ಭವಿಷ್ಯ ಕೂಡ ನಿಜವಾಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಿರಿಕ್ ಪಾರ್ಟಿ ಎಂಬ ಕನ್ನಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ರಶ್ಮಿಕಾ ಮಂದಣ್ಣ ಬಳಿಕ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದ್ದಾರೆ. ಇವರು ನಟಿಸಿರುವ ಬಹುತೇಕ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಇತ್ತೀಚಿಗೆ ತೆರೆ ಕಂಡ ಪುಷ್ಪಾ ಸಿನಿಮಾ ಕೂಡ ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. ಕನ್ನಡ ಚಿತ್ರರಂಗದಲ್ಲಿ ಕೊನೆಯ ಬಾರಿಗೆ ರಶ್ಮಿಕಾ ಧ್ರುವ ಸರ್ಜಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ : Ramayana quiz : ರಾಮಾಯಣ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಗಮನಾರ್ಹ ಟಾಪರ್ಗಳಾಗಿ ಹೊರ ಹೊಮ್ಮಿದ ಮುಸ್ಲಿಂ ವಿದ್ಯಾರ್ಥಿಗಳು
rashmika mandanna will enter to politics after goodbye to film industry