Ravichandran son Manoranjan wedding : ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಮಂಗಳ ವಾದ್ಯ ಸದ್ದು ಮಾಡಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಮೊದಲ ಮಗ ಮನೋರಂಜನ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮಂಗಳ ವಾದ್ಯಗಳ ಸದ್ದಿನ ಜೊತೆಗೆ ಮನೋರಂಜನ್ ತಮ್ಮ ಸಂಬಂಧಿ ಸಂಗೀತಾ ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟಲ್ಸ್‌ನಲ್ಲಿ ಆತ್ಮೀಯರು,ಸಂಬಂಧಿಗಳು ಹಾಗೂ ಸ್ಯಾಂಡಲ್ ವುಡ್ ಗಣ್ಯರ ಸಮ್ಮುಖದಲ್ಲಿ ವಿವಾಹ ಮಹೋತ್ಸವ ನೆರವೇರಿದ್ದು, ನಂದಿ ಹಿಲ್ಸ್ ಬಳಿ ಇರೋ ಖಾಸಗಿ ಹೊಟೇಲ್ ನಲ್ಲಿ ಅದ್ದೂರಿ ಆರತಕ್ಷತೆ ನಡೆಯಲಿದೆ.
ಇಂದು ನಡೆದ ವಿವಾಹ ಮಹೋತ್ಸವಕ್ಕೆ ಡಾ.ಶಿವರಾಜ್ ಕುಮಾರ್ ದಂಪತಿ, ಖಷ್ಬೂ,ಹಂಸಲೇಖ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದು, ನವಜೋಡಿಗೆ ಶುಭಹಾರೈಸಿದ್ದಾರೆ. ಮದುವೆಗೂ ಮುನ್ನ ನಡೆದ ಅರಿಸಿನ,ಮೆಹೆಂದಿ ಕಾರ್ಯಕ್ರಮದಲ್ಲಿ ಮನೋರಂಜನ್ ಹಾಗೂ ಸಹೋದರರು ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದರು. ಇತ್ತೀಚಿಗಷ್ಟೇ ನಟ ರವಿಚಂದ್ರನ್ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿ ಮಗನ ವಿವಾಹಕ್ಕೆ ಆಹ್ವಾನ ನೀಡಿದ್ದರು.
ಮನೋರಂಜನ್ ಕೈ ಹಿಡಿಯುತ್ತಿರುವ ಸಂಗೀತಾ ವೃತ್ತಿಯಲ್ಲಿ ವೈದ್ಯರಾಗಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ವಿಲ್ಸನ್ ಗಾರ್ಡನ್ ನಿವಾಸಿಯಾಗಿರುವ ಸಂಗೀತಾ ಮನೋರಂಜನ್ ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದರು ಎನ್ನಲಾಗಿದೆ. ಇದೇ ವೇಳೆ ಮನೆಯಲ್ಲಿ ಮನೋರಂಜನ್ ಗೆ ಹುಡುಗಿ ಹುಡುಕುತ್ತಿರುವ ವೇಳೆ ಸಂಗೀತಾ ಪ್ರಪೋಶಲ್ ಬಂದಿದ್ದು, ಎರಡು ಕುಟುಂಬದ ಹಿರಿಯರು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು.
ಹೀಗಾಗಿ 34 ವರ್ಷದ ಮನೋರಂಜನ್ ಸಂಗೀತಾ ಕೈ ಹಿಡಿದಿದ್ದಾರೆ. ರವಿಚಂದ್ರನ್ ತಮ್ಮದೇ ಕಲ್ಪನೆಯಲ್ಲಿ ಪುತ್ರನ ವಿವಾಹಕ್ಕೆ ವಿಭಿನ್ನ ಇನ್ವಿಟೇಶನ್ ಕಾರ್ಡ್ ಮಾಡಿಸಿ ಗಮನ ಸೆಳೆದಿದ್ದರು. ಈ ಇನ್ವಿಟೇಶನ್ ಕಾರ್ಡ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. 2017 ರಲ್ಲಿ ಸಾಹೇಬ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮನೋರಂಜನ್ ಬೃಹಸ್ಪತಿ, ಮುಗಿಲ್ ಪೇಟೆ, ಪ್ರಾರಂಭ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ರವಿಚಂದ್ರನ್ ಅದ್ದೂರಿ ಮದುವೆಯಿಂದಲೇ ಗಮನ ಸೆಳೆದಿದ್ದು ಕಳೆದ ಎರಡು ವರ್ಷದ ಹಿಂದೆ ರವಿಚಂದ್ರನ್ ವಿಭಿನ್ನ ಸೆಟ್, ಸುಂದರ ಬ್ಯಾಕ್ ಗ್ರೌಂಡ್ ನಲ್ಲಿ ಸೆಟ್ ಹಾಕಿಸಿ ಮಗಳ ಮದುವೆ ಮಾಡಿ ಗಮನ ಸೆಳೆದಿದ್ದರು.
ಇದನ್ನೂ ಓದಿ : Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಸೋನಂ ಕಪೂರ್
ಇದನ್ನೂ ಓದಿ : Meghana Raj Sarja good news : ಕ್ಯಾಲಿಫೋರ್ನಿಯಾದಲ್ಲಿ ಮೇಘನಾ ರಾಜ್ ಸರ್ಜಾ : ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಕುಟ್ಟಿಮಾ
kannada actor crazy star Ravichandran son Manoranjan wedding vibes