ಮಂಗಳವಾರ, ಏಪ್ರಿಲ್ 29, 2025
HomeCinemaShiva Rajkumar: ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ: ಎಂಇಎಸ್ ಗೆ ನಟ ಶಿವಣ್ಣ ತಿರುಗೇಟು

Shiva Rajkumar: ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ: ಎಂಇಎಸ್ ಗೆ ನಟ ಶಿವಣ್ಣ ತಿರುಗೇಟು

- Advertisement -

ಕನ್ನಡದ ಮೇಲೆ ಎಂಇಎಸ್ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ರಾಜ್ಯದ ಕನ್ನಡಿಗರು ಸಿಡಿದೆದ್ದಿದ್ದಾರೆ. ಕರವೇ ವಾಟಾಳ ನಾಗರಾಜ್ ಸೇರಿದಂತೆ ಎಲ್ಲ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಹೋರಾಟಕ್ಕೆ ಮುಂದಾಗಿದೆ. ಅಲ್ಲದೇ ನಾಳೆ ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಎಂಇಎಸ್ ನಿಷೇಧಕ್ಕೆ ಮನವಿ ಮಾಡಲಿದ್ದಾರೆ. ಈ ಮಧ್ಯೆ ಕನ್ನಡದ ಪರ ಸ್ಯಾಂಡಲ್ ವುಡ್ ನಾಯಕರು ಬೆಂಬಲ‌ನೀಡಿದ್ದು, ಹ್ಯಾಟ್ರಿಕ್ ಹೀರೋ ಶಿವಣ್ಣ ( Shiva Rajkumar )ಕನ್ನಡಕ್ಕಾಗಿ ಪ್ರಾಣ ಕೊಡಲು ಸಿದ್ಧ ( life for Kannada ) ಎಂದಿದ್ದಾರೆ.

ಬಡವ್ ರ್ಯಾಸ್ಕಲ್ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವಣ್ಣ ನಾವೆಲ್ಲರೂ ಭಾರತೀಯರು. ಎಲ್ಲ ಭಾಷೆಗೂ ಗೌರವ ಕೊಡಬೇಕು. ಧ್ಬಜಕ್ಕೆ ಗೌರವ ಕೊಡಬೇಕು. ನಾನು ಚೈನೈನಲ್ಲಿ ಹುಟ್ಟಿ ಬೆಳೆದಿದ್ದು, ಓದಿದ್ದು ಬರೆದಿದ್ದು ತಮಿಳಿನಲ್ಲಿ. ಆದರೂ ನಾನು ಕನ್ನಡವನ್ನು ಪ್ರೀತಿಸುತ್ತೇನೆ. ನಾವು ಎಲ್ಲಿರ್ತಿವೋ ಅಲ್ಲಿ ಭಾಷೆ ಕಲಿಯಬೇಕು. ನಾನು ಬೇರೆ ಭಾಷೆ ಸಿನಿಮಾ ನೋಡ್ತಿವಿ,ಗೌರವಿಸ್ತಿವಿ. ನಾನು ಅಖಂಡ್ ಸಿನಿಮಾ ಫರ್ಸ್ಟ್ ಡೇ ಫರ್ಸ್ಟ್ ಶೋ ನೋಡಿದೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ ಎಂದಿದ್ದಾರೆ.

ಮಾತ್ರವಲ್ಲ ಎಂಇಎಸ್ ವಿರುದ್ಧ ಸ್ಯಾಂಡಲ್ ವುಡ್ ಹೋರಾಟ ಮಾಡಬೇಕು. ಅದಕ್ಕೆ ಶಿವಣ್ಣ ನಾಯಕತ್ವ ವಹಿಸಬೇಕು ಅಗ್ರಹ ಎಲ್ಲೆಡೆಯಿಂದ ವ್ಯಕ್ತ ವಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಿವಣ್ಣ, ಎಂಇಎಸ್ ವಿರುದ್ಧ ಗುಡುಗಿದ್ದಾರೆ. ಲೀಡರ್ಶಿಪ್ ಬೇಡ. ನಾವೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ನಮ್ ಭಾಷೆಗಾಗಿ ನಾವು ಪ್ರಾಣ ಕೊಡೋಕು ಸಿದ್ಧ. 59 ವರ್ಷ ಆಯ್ತು. ಭಾಷೆಗಾಗಿ ಪ್ರಾಣ ಹೋಗೋದಾದರೇ ಹೋಗಲಿ.

ಒಂದು ಧ್ವಜವನ್ನು ಸುಡೋದು ಸರಿನಾ? ಧ್ವಜ ಎಂದರೇ ಅದು ತಾಯಿ ಇದ್ದಂತೆ. ತಾಯಿನಾ ಸುಡ್ತೀವಾ? ಸರ್ಕಾರ ಈ ಸಂದರ್ಭದಲ್ಲಿ ಸ್ಟ್ರಾಂಗ್ ಆಗಿರಬೇಕು ಮತ್ತು ಎಂಇಎಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಶಿವಣ್ಣ ಒತ್ತಾಯಿಸಿದ್ದಾರೆ. ಇದಕ್ಕೂ ಮೊದಲು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಲೂಸ್ ಮಾದಾ,ರಂಗಾಯಣ ರಘು, ಹಂಸಲೇಖಾ, ವಶಿಷ್ಠಸಿಂಹ, ದುನಿಯಾ ವಿಜಯ್ ಸೇರಿದಂತೆ ಹಲವರು ಶಿವಣ್ಣ ಹೋರಾಟದ ನೇತೃತ್ವ ವಹಿಸಬೇಕು ಸ್ಯಾಂಡಲ್ ವುಡ್ ಹೋರಾಟದ ಕಣಕ್ಕೆ ಇಳಿಯಬೇಕು ಎಂದು ಮನವಿ ಮಾಡಿದ್ದರು. ಒಟ್ಟಿನಲ್ಲಿ ಎಂಇಎಸ್ ಕಿರಿಕ್ ಗೆ ಸ್ಯಾಂಡಲ್ ವುಡ್ ನಟ-ನಟಿಯರ ಆಕ್ರೋಶ ವ್ಯಕ್ತಪಡಿಸಿದ್ದು ಟ್ವೀಟ್, ಸೋಷಿಯಲ್ ಮೀಡಿಯಾ ಪೋಸ್ಟ್ ಗಳ ಮೂಲಕ ಖಂಡಿಸಿದ್ದಾರೆ.

ಇದನ್ನೂ ಓದಿ : ಸಿನಿಮಾ ರಂಗ ಬಿಡ್ತಾರಂತೆ ರಶ್ಮಿಕಾ : ನಿರ್ಧಾರಕ್ಕೆ ಕಾರಣವೇನು ಗೊತ್ತಾ?!

ಇದನ್ನೂ ಓದಿ : Puneeth metro : ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರು : ಅಭಿಮಾನಿಗಳಿಂದ ಒತ್ತಾಯ

Ready to give life for Kannada: Shiva Rajkumar Reaction About MES

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular