ಮಹಾರಾಷ್ಟ್ರ : sushant rajput : ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಬಾಲಿವುಡ್ನಲ್ಲಿ ಭಾರೀ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು , ಈ ಪ್ರಕರಣಕ್ಕೆ ಇದೀಗ ಹೊಸದೊಂದು ಟ್ವಿಸ್ಟ್ ದೊರಕಿದೆ. ಮೃತ ಸುಶಾಂತ್ ಸಿಂಗ್ ರಜಪೂತ್ ಪ್ರಿಯತಮೆ ರಿಯಾ ಚಕ್ರವರ್ತಿ ಕೂಡ ಆರೋಪಿಗಳಿಂದ ಗಾಂಜಾವನ್ನು ಪಡೆದಿದ್ದಾರೆ. ರಿಯಾ ಹಾಗೂ ಈಕೆಯ ಸಹೋದರ ಶೋವಿಕ್ ಚಕ್ರವರ್ತಿ ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ನೀಡಿದ್ದರು ಎಂದು ಎನ್ಸಿಬಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದಕ್ಕೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಎನ್ಸಿಬಿ ಈ ಪ್ರಕರಣ ಸಂಬಂಧ 35 ಆರೋಪಿಗಳ ವಿರುದ್ಧ ಎನ್ಸಿಬಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ.
ಎನ್ಸಿಬಿ ನೀಡಿರುವ ಆರೋಪ ಪಟ್ಟಿಯಲ್ಲಿರುವ ವರದಿಯ ಪ್ರಕಾರ ಆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು 2020ರ ಮಾರ್ಚ್ ಹಾಗೂ ಡಿಸೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ಅಕ್ರಮ ಮಾದಕ ದ್ರವ್ಯ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಇವರೆಲ್ಲ ಗಾಂಜಾ, ಚರಸ್, ಕೊಕೇನ್ ಮತ್ತು ಇತರ ಸೈಕೋಟ್ರೋಪಿಕ್ ಪದಾರ್ಥಗಳನ್ನು ಸೇವನೆ ಮಾಡಿದ್ದಾರೆ ಹಾಗೂ ಬಾಲಿವುಡ್ ನಟರೂ ಸೇರಿದಂತೆ ಸೆಲೆಬ್ರಿಟಿಗಳಿಗೆ ಡ್ರಗ್ ವಿತರಿಸಲು ಸಹಾಯ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಪಟ್ಟಿಯಲ್ಲಿ 10ನೇ ಆರೋಪಿಯಾಗಿರುವ ರಿಯಾ ಚಕ್ರವರ್ತಿ ಆರೋಪಿಗಳಾದ ರಿಯಾ ಸಹೋದರ ಶೋವಿಕ್, ಸ್ಯಾಮ್ಯುಯೆಲ್ ಮಿರಾಂಡಾ, ದೀಪೇಶ್ ಸಾವಂತ್ ಸೇರಿದಂತೆ ಅನೇಕರಿಂದ ಡ್ರಗ್ಸ್ ಪಡೆದು ಮೃತ ಸುಶಾಂತ್ ಸಿಂಗ್ ರಜಪೂತ್ಗೆ ಹಸ್ತಾಂತರಿಸಿದ್ದರು. ಅಲ್ಲದೇ ಇದಕ್ಕೆ ಸಂಬಂಧಿಸಿದ ಹಣದ ವಹಿವಾಟಿನ ಸಾಕ್ಷ್ಯಗಳನ್ನೂ ಎನ್ಸಿಬಿ ಕಲೆ ಹಾಕಿದೆ. ರಿಯಾ ಸಹೋದರ ಶೋವಿಕ್ ಡ್ರಗ್ ಪೆಡ್ಲರ್ಗಳ ಜೊತೆ ನೇರ ಸಂಪರ್ಕ ಹೊಂದಿದ್ದ. ಇವರಿಂದ ಅನೇಕ ಬಾರಿ ಗಾಂಜಾವನ್ನು ಪಡೆದು ಸುಶಾಂತ್ಗೆ ನೀಡಲಾಗಿತ್ತು.
2020ರ ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮುಂಬೈನಲ್ಲಿರುವ ತಮ್ಮ ಬಾಂದ್ರಾ ನಿವಾಸದಲ್ಲಿ ನೇಣು ಬಿಗಿದುಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದು ಕೊಲೆಯೂ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ಇನ್ನೂ ನಿಖರವಾದ ಸ್ಪಷ್ಟನೆ ದೊರಕಿಲ್ಲ.
ಇದನ್ನು ಓದಿ : Unidentified body found ಒತ್ತಿನೆಣೆಯಲ್ಲಿ ಅಪರಿಚಿತ ಶವ ಪತ್ತೆ : ಆತಂಕದಲ್ಲಿ ಸ್ಥಳೀಯ ನಿವಾಸಿಗಳು
ಇದನ್ನೂ ಓದಿ : hill collapsed on a house : ಗೃಹಪ್ರವೇಶಕ್ಕೆ ಆರು ದಿನ ಬಾಕಿ ಇದ್ದಾಗಲೇ ಅವಘಡ : ಗುಡ್ಡ ಕುಸಿದು ಮನೆ ನೆಲಸಮ
rhea chakraborty bought drugs handed them to sushant rajput ncb charge