CM Basavaraj Bommai : ಉಡುಪಿಯಲ್ಲಿ ಸಿಎಂ ನೆರೆಹಾನಿ ಸಭೆ : ಸಂತ್ರಸ್ತರಿಗೆ ತಕ್ಷಣ ಪರಿಹಾರ, ನೆರೆ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚನೆ

ಉಡುಪಿ : CM Basavaraj Bommai : ರಾಜ್ಯದಲ್ಲಿ ನೆರೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಇಂದು ಉಡುಪಿ ಜಿಲ್ಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಧಿಕಾರಿಗಳ ಜೊತೆಯಲ್ಲಿ ನೆರೆ ಹಾನಿ ಸಭೆ ನಡೆಸಿದರು. ಮಣಿಪಾಲದ ರಜತಾದ್ರಿ ಕಟ್ಟಡದಲ್ಲಿ ನಡೆ ಸಭೆಯಲ್ಲಿ ಕಂದಾಯ ಸಚಿವ ಆರ್​.ಅಶೋಕ್​, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಉಸ್ತುವಾರಿ ಸಚಿವ ಎಸ್​. ಅಂಗಾರ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು.


ಸಭೆಯಲ್ಲಿ ನೆರೆ ನಿರ್ವಹಣೆ ಕುರಿತಂತೆ ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ವಿವಿಧ ಸೂಚನೆಯನ್ನು ನೀಡಿದ್ದಾರೆ. ವಿಪತ್ತು ನಿರ್ವಹಣಾ ಖಾತೆಯಲ್ಲಿರುವ ಹಣವನ್ನು ಜಿಲ್ಲಾಧಿಕಾ ರಿಗಳು ನೆರೆ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಿ. ಜಿಲ್ಲಾಡಳಿತದ ಖಾತೆಯಲ್ಲಿರುವ ಹಣದಿಂದ ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ಒದಗಿಸಿ. ಅಗತ್ಯ ಆಹಾರ ವಸ್ತುಗಳನ್ನು ನೆರೆಪೀಡಿತ ಮನೆಗಳಿಗೆ ತಲುಪಿಸುವಂತಾಗಬೇಕು. ಒಂದು ವೇಳೆ ನೆರೆ ಸಂತ್ರಸ್ತರು ತಮ್ಮ ಸಂಬಂಧಿಗಳೋ ಅಥವಾ ಗೆಳೆಯರ ಮನೆಯಲ್ಲೋ ಉಳಿದುಕೊಂಡಿದ್ದರೆ ಆ ಮನೆಗೆ ರೇಷನ್​ ತಲುಪಿಸುವ ಕಾರ್ಯವನ್ನು ಮಾಡಿ. ಸೇತುವೆ ಹಾಗೂ ರಸ್ತೆಗಳ ದುರಸ್ಥಿ ಕಾರ್ಯ ತಕ್ಷಣವೇ ಆಗಬೇಕು. ಮಳೆ ನಿಲ್ಲುತ್ತಿದ್ದಂತೆಯೇ ರಸ್ತೆಗಳ ಡಾಂಬರೀಕರಣ ಹಾಗೂ ಕಾಂಕ್ರೀಟಿಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಮೂರೂ ಜಿಲ್ಲೆಗಳ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.


ಸಭೆ ಮುಗಿಯುತ್ತಿದ್ದಂತೆಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೈಸೂರು, ಕೊಡಗು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಇಂದು ಮೂರು ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಜುಲೈನಲ್ಲಿಯೇ ಈ ಬಾರಿ ಮಳೆ ಹೆಚ್ಚಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣಗೊಂಡಿದೆ. ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆ ಸುರಿದಿದೆ. ಈಗಾಗಲೇ 32 ಮಂದಿ ಸಾವನ್ನಪ್ಪಿದ್ದಾರೆ. ಎನ್​ಡಿಆರ್​ಎಫ್​ ಹಾಗೂ ಎಸ್​ಡಿಆರ್​ಎಫ್​ ತಂಡ 300ಕ್ಕೂ ಅಧಿಕ ಜನರನ್ನು ರಕ್ಷಣೆ ಮಾಡಿದೆ ಎಂದು ಹೇಳಿದರು.


ಕರಾವಳಿ ಭಾಗದಲ್ಲಿ ಸುಮಾರು 8 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 355 ಹೆಕ್ಟೇರ್ ತೋಟ, ಬೆಳೆ ನಾಶವಾಗಿದೆ, ಮೂರು ಜಿಲ್ಲೆಯಲ್ಲಿ 1062 ಮನೆಗಳಿಗೆ ಹಾನಿಯಾಗಿದೆ .ಕರಾವಳಿಯಲ್ಲಿ 2187 ರಸ್ತೆ ಹಾನಿಯಾಗಿದೆ .5000 ಕ್ಕೂ ಹೆಚ್ಚು ವಿದ್ಯುತ್ ಕಂಬ ಬಿದ್ದಿದೆ . ಬೆಳೆ ನಾಶಕ್ಕೆ ಶೀಘ್ರದಲ್ಲಿಯೇ ಸೂಕ್ತ ಪರಿಹಾರ ನೀಡುತ್ತೇವೆ, ಕಾಳಜಿ ಕೇಂದ್ರಗಳಲ್ಲಿ ಆಹಾರದ ಜೊತೆಯಲ್ಲಿ ಮೊಟ್ಟೆ ನೀಡುತ್ತೇವೆ. ಸಂತ್ರಸ್ತರು ಎಲ್ಲೇ ಉಳಿದಿದ್ದರೂ ಅಲ್ಲಿಗೆ ರೇಷನ್​ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.

ಕಡಲ್ಕೊರೆತಕ್ಕೆ ಕೇರಳ ಮಾದರಿಯಲ್ಲಿ ಒಂದು ಕಿ.ಮೀ ದೂರ ಕಡಲಿಗೆ ತಡೆಗೋಡೆ ನಿರ್ಮಿಸುತ್ತೇವೆ. ಕಡಲ್ಕೊರೆತಕ್ಕೆ 300 ಕೋಟಿ ಖರ್ಚಾಗಿದೆ. ಈ ಸಂಬಂಧ ಉನ್ನತ ಮಟ್ಟದ ಸಭೆ ಕರೆದು ಸೂಕ್ತ ಅಧ್ಯಯನ ನಡೆಸಿ ಶಾಶ್ವತ ಪರಿಹಾರ ನೀಡುವ ಎಲ್ಲಾ ಕೆಲಸಗಳನ್ನೂ ಮಾಡಲಾಗುತ್ತದೆ ಎಂದು ಹೇಳಿದರು. ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಭಾಗಗಳಿಗೆ ಮುಂದಿನ ವಾರ ಪ್ರವಾಸ ಕೈಗೊಳ್ಳುತ್ತೇನೆ. ಮೊದಲ ಹಂತದಲ್ಲಿ 500 ಕೋಟಿ ರೂಪಾಯಿ ನೆರೆ ಹಾನಿ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಇದನ್ನು ಓದಿ : hill collapsed on a house : ಗೃಹಪ್ರವೇಶಕ್ಕೆ ಆರು ದಿನ ಬಾಕಿ ಇದ್ದಾಗಲೇ ಅವಘಡ : ಗುಡ್ಡ ಕುಸಿದು ಮನೆ ನೆಲಸಮ

ಇದನ್ನೂ ಓದಿ : Unidentified body found ಒತ್ತಿನೆಣೆಯಲ್ಲಿ ಅಪರಿಚಿತ ಶವ ಪತ್ತೆ : ಆತಂಕದಲ್ಲಿ ಸ್ಥಳೀಯ ನಿವಾಸಿಗಳು

CM Basavaraj Bommai meeting in Udupi

Comments are closed.