ಬೆಂಗಳೂರು: Rishab Shetty Photoshoot: ಕಾಂತಾರ ಸಿನಿಮಾ ತೆರೆ ಕಂಡ ಮೇಲೆ ರಿಷಬ್ ಶೆಟ್ಟಿ ಲಕ್ ಚೇಂಜ್ ಆಗಿದೆ. ನಿರೀಕ್ಷೆಗೂ ಮೀರಿ ಈ ಸಿನಿಮಾ ಕರ್ನಾಟಕದಲ್ಲಿ 150 ಕೋಟಿ ಸೇರಿದಂತೆ ವಿಶ್ವಾದ್ಯಂತ 400 ಕೋಟಿ ಬಾಚಿದೆ. ಅದಾದ ಬಳಿಕ ಒಂದರ ಹಿಂದೆ ಒಂದರಂತೆ ಅದೃಷ್ಟಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ದೇಶ-ವಿದೇಶಗಳಲ್ಲಿ ರಿಷಬ್ ಶೆಟ್ಟಿ ಅವರ ಬೇಡಿಕೆ, ಮನ್ನಣೆ ಹೆಚ್ಚಿದೆ. ಸಾಲು ಸಾಲು ಸುದ್ದಿ ವಾಹಿನಿಗಳು, ಮನೋರಂಜನಾ ವಾಹಿನಿಗಳು ಸಂದರ್ಶನಕ್ಕಾಗಿ ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಈ ನಡುವೆ ಮ್ಯಾಗಜಿನ್ ಕವರ್ ಪೇಜ್ ಕೇಂದ್ರ ಬಿಂದು ಕೂಡಾ ರಿಷಬ್ ಶೆಟ್ಟಿ ಅವರಾಗಿದ್ದಾರೆ.
ಈ ಹಿಂದೆ ಕಾಂತಾರ ಸಿನಿಮಾ ರಿಲೀಸ್ ಆದ ಮೇಲೆ ಅಂತಾರಾಷ್ಟ್ರೀಯ ಫ್ರಂಟ್ ಲೈನ್ ಮ್ಯಾಗಜಿನ್ ನಲ್ಲಿ ಕಾಂತಾರ ಫೋಟೋವನ್ನು ಕವರ್ ಪೇಜ್ ನಲ್ಲಿ ಬಳಸಲಾಗಿತ್ತು. ಈ ಬೆನ್ನಲ್ಲೇ ಪ್ರಸಿದ್ಧ ಹ್ಯಾಷ್ ಟ್ಯಾಗ್ ಮ್ಯಾಗಜಿನ್ ತನ್ನ ಕವರ್ ಪೇಜ್ ಗಾಗಿ ನಟನ ಸ್ಟೈಲಿಶ್ ಫೋಟೋ ಶೂಟ್ ಮಾಡಿದೆ. ಈ ವಿಡಿಯೋವನ್ನು ಅವರ ಪತ್ನಿ ಪ್ರಗತಿ ಶೆಟ್ಟಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
https://www.instagram.com/reel/ClgU6uGjOCi/?igshid=YmRhOGE0MWQ=ಕಾಂತಾರ ಎಷ್ಟರಮಟ್ಟಿಗೆ ಸಕ್ಸಸ್ ಕಂಡಿದೆ ಎಂದರೆ ಬರೋಬ್ಬರಿ 32 ವರ್ಷಗಳ ಬಳಿಕ ಫ್ರಂಟ್ ಲೈನ್ ಮ್ಯಾಗಜಿನ್ ಮುಖಪುಟದಲ್ಲಿ ಕನ್ನಡ ಚಿತ್ರವೊಂದರ ಫೋಟೋ ಬಳಸಲಾಗಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೋಗಳು ಫ್ರಂಟ್ ಲೈನ್ ಮ್ಯಾಗಜಿನ್ ಮುಖಪುಟದಲ್ಲಿ ಬಂದಿರಲಿಲ್ಲ. ಆದರೆ ಕನ್ನಡದ ಕಾಂತಾರ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇದೀಗ ಹ್ಯಾಷ್ ಟ್ಯಾಗ್ ಮ್ಯಾಗಜಿನ್ ಕವರ್ ಪೇಜ್ ನಲ್ಲಿ ಶೆಟ್ರು ಮಿಂಚಲಿದ್ದಾರೆ. ಇದಕ್ಕಾಗಿ ಫೋಟೋ ಶೂಟ್ ಮಾಡಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿದೆ. ಫೋಟೋಶೂಟ್ ನ ಬಿಟಿಎಸ್ ವಿಡಿಯೋಗೆ ಮೆಚ್ಚುಗೆಗಳು ಹರಿದುಬರುತ್ತಿವೆ.
ಕಾಂತಾರ ಸಕ್ಸಸ್ ಬೆನ್ನಲ್ಲೇ ಹಲವು ವಿವಾದಗಳು ಕೇಳಿಬಂದಿದ್ದವು. ಅಜನೀಶ್ ಲೋಕನಾಥ್ ಅವರ ವರಾಹ ರೂಪಂ ಹಾಡಿನ ವಿರುದ್ಧ ಕೇರಳದ ತೈಕುಡಂ ಬ್ರಿಡ್ಜ್ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೇ ದಲಿತರಿಗೆ ಈ ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎನ್ನುವ ಆರೋಪಗಳೂ ಕೇಳಿಬಂದಿದ್ದವು. ಈ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಕಾಂತಾರ ಸಿನಿಲೋಕದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದೆ.
Rishab Shetty Photoshoot: Rishab Shetty on ‘Hash Tag’ Magazine Cover page This is how he shined in the photoshoot..