ವಿಜಯ್‌ ಹಜಾರೆ ಟ್ರೋಫಿ : ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕಕ್ಕೆ ಸೆಮಿಫೈನಲ್’ನಲ್ಲಿ ಸೋಲು

ಅಹ್ಮದಾಬಾದ್: (Vijay Hazare Trophy Semifinal) ನಾಯಕ ಮಯಾಂಕ್ ಅಗರ್ವಾಲ್, ಮಾಜಿ ನಾಯಕ ಮನೀಶ್ ಪಾಂಡೆ ಸಹಿತ ಪ್ರಮುಖ ದಾಂಡಿಗರ ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಸೆಮಿಫೈನಲ್’ನಲ್ಲಿ ಮುಗ್ಗರಿಸಿದೆ. ಅಹ್ಮದಾಬಾದ್’ನ ಮೊಟೇರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 5 ವಿಕೆಟ್’ಗಳ ಸೋಲು ಕಂಡಿತು.

ಸೆಮಿಫೈನಲ್ ಸಮರದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ, ಎದುರಾಳಿ ಸೌರಾಷ್ಟ್ರ ತಂಡದ ನಾಯಕ ಜೈದೇವ್ ಉನಾದ್ಕಟ್ ದಾಳಿಗೆ ತತ್ತರಿಸಿ 49.1 ಓವರ್’ಗಳಲ್ಲಿ ಕೇವಲ 171 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ಉಪನಾಯಕ ಆರ್. ಸಮರ್ಥ್ ಒಬ್ಬರೇ 88 ರನ್ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಉಳಿದಂತೆ ನಾಯಕ ಮಯಾಂಕ್ ಅಗರ್ವಾಲ್ (1), ಬಿ.ಆರ್ ಶರತ್ (3), ನಿಕಿನ್ ಜೋಸ್ (12), ಮನೀಶ್ ಪಾಂಡೆ (0), ಶ್ರೇಯಸ್ ಗೋಪಾಲ್ (9), ಕೆ.ಗೌತಮ್ (0) ಸೆಮಿಫೈನಲ್’ನಲ್ಲಿ ಕರ್ನಾಟಕಕ್ಕೆ ಕೈ ಕೊಟ್ಟರು. ಸೌರಾಷ್ಟ್ರ ಪರ ಅಮೋಘ ದಾಳಿ ಸಂಘಟಿಸಿದ ನಾಯಕ ಜೈದೇವ್ ಉನಾದ್ಕಟ್ 10 ಓವರ್’ಗಳಲ್ಲಿ ಕೇವಲ 26 ರನ್ ನೀಡಿ 4 ವಿಕೆಟ್ ಉರುಳಿಸಿದರು.

ಬಳಿಕ 172 ರನ್’ಗಳ ಸುಲಭ ಗುರಿ ಬೆನ್ನಟ್ಟಿದ ಸೌರಾಷ್ಟ್ರ ಖಾತೆ ತೆರೆಯುಲ ಮುನ್ನವೇ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಆದರೆ ಮಧ್ಯ ಕ್ರಮಾಂಕದ ಆಟಗಾರರ ಜವಾಬ್ದಾರಿಯುತ ಆಟದ ನೆರವಿನಿಂದ 36.2 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿ ಫೈನಲ್’ಗೆ ಎಂಟ್ರಿ ಕೊಟ್ಟಿತು. ಮತ್ತೊಂದು ಸೆಮಿಫೈನಲ್’ನಲ್ಲಿ ಅಸ್ಸಾಂ ತಂಡವನ್ನು 12 ರನ್’ಗಳಿಂದ ರೋಚಕವಾಗಿ ಮಣಿಸಿದ ಮಹಾರಾಷ್ಟ್ರ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಶುಕ್ರವಾರ ನಡೆಯಲಿದೆ.

ಇದನ್ನೂ ಓದಿ : Vijay Hazare Trophy Karnataka : ಪಂಜಾಬ್ ವಿರುದ್ಧ ಸೇಡು ತೀರಿಸಿಕೊಂಡು ಸೆಮಿಫೈನಲ್’ಗೆ ಲಗ್ಗೆ ಇಟ್ಟ ಕರ್ನಾಟಕ

ಇದನ್ನೂ ಓದಿ : Ruturaj Gaikwad: ಒಂದೇ ಓವರ್‌ನಲ್ಲಿ 7 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಬರೆದ ರುತುರಾಜ್ ಗಾಯಕ್ವಾಡ್

More English News Click Here

Vijay Hazare Trophy Semifinal Karnataka lost in the semi-final batting failure

Comments are closed.