ಮಂಗಳವಾರ, ಏಪ್ರಿಲ್ 29, 2025
HomeCinemaನಟ ರಿಷಬ್ ಶೆಟ್ಟಿ ಮಗಳು ರಾದ್ಯಾ ಹುಟ್ಟುಹಬ್ಬದಲ್ಲಿ ದರ್ಶನ್ ಭಾಗಿ : ವೈರಲ್‌ ಆಯ್ತು ವಿಡಿಯೋ

ನಟ ರಿಷಬ್ ಶೆಟ್ಟಿ ಮಗಳು ರಾದ್ಯಾ ಹುಟ್ಟುಹಬ್ಬದಲ್ಲಿ ದರ್ಶನ್ ಭಾಗಿ : ವೈರಲ್‌ ಆಯ್ತು ವಿಡಿಯೋ

- Advertisement -

ನಟ, ನಿರ್ದೇಶಕ ರಿಷಬ್‌ ಶೆಟ್ಟಿ “ಕಾಂತಾರ” ಸಿನಿಮಾದಿಂದ ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಆಗಿದೆ. ಸದ್ಯ ನಟ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾದ ಎರಡನೇ ಭಾಗದ ಕಥೆ ಅಂದರೆ ಪ್ರೀಕ್ವೆಲ್ ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ. ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾದ ಸಕ್ಸಸ್‌ ಬಳಿಕ ಫ್ಯಾಮಿಲಿ ಜೊತೆ ವಿದೇಶಿ ಪ್ರಯಾಣದ ಬಳಿಕ ಸದ್ಯ ತಮ್ಮ ಮುದ್ದು ಮಗಳ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದು, ಮಗಳು ರಾದ್ಯಾಳ ಬರ್ತಡೆಗೆ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ (Rishabh Shetty – Darshan) ಭಾಗವಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಮೊನ್ನೆ ಅಷ್ಟೇ ನಟ ರಿಷಬ್‌ ಶೆಟ್ಟಿ ತಮ್ಮ ಮಗಳ ಕ್ಯೂಟ್‌ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ, ““ನಮ್ಮ ಪುಟ್ಟ ರಾಜಕುಮಾರಿ ಬೆಳೆಯುವುದನ್ನು ನೋಡುವುದು ನಮ್ಮ ಜೀವನದ ಅತ್ಯುತ್ತಮ ದೃಶ್ಯವಾಗಿದೆ! ಜನ್ಮದಿನದ ಶುಭಾಶಯಗಳು, ನಮ್ಮ ಹೆಣ್ಣು ಮಗು ರಾಧ್ಯಾ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾಧ್ಯಾಳ ಮೇಲೆ ಸದಾ ಇರಲಿ” ಬರೆದು ಹಂಚಿಕೊಂಡಿದ್ದಾರೆ. ಪುಟ್ಟ ರಾದ್ಯಾ ಕ್ರೀಮ್‌, ಬಿಳಿ ಹಾಗೂ ಕಪ್ಪು ಬಣ್ಣದ ಬಟ್ಟೆಯಲ್ಲಿ ರಾಜಕುಮಾರಿಯಂತೆ ಕಾಣಿಸುತ್ತಿದ್ದು, ತುಂಬಾ ಮುದ್ದಾಗಿ ನೀರಿನ ಟಬ್‌ನಲ್ಲಿ ಆಟವಾಡುತ್ತಿದ್ದಳು. ಅವಳೊಂದಿಗೆ ರಿಷಬ್‌ ಶೆಟ್ಟಿ ಮಗ ಕೂಡ ಬಿಳಿ ಬಣ್ಣದ ಉಡುಗೆಯಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾನೆ.

ರಾದ್ಯಾಳ ಹುಟ್ಟುಹಬ್ಬಕ್ಕೆ ನಟ ದರ್ಶನ್‌ ಕಪ್ಪು ಬಣ್ಣದ ಡ್ರೆಸ್ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ನಟ ದರ್ಶನ್ ರಿಷಬ್ ಶೆಟ್ಟಿ ದಂಪತಿ ಜೊತೆಯಲಿ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ರಿಷಬ್ ಶೆಟ್ಟಿ ಮಗನನ್ನು ಎತ್ತಿಕೊಂಡು ಮುದ್ದು ಮಾಡಿದ್ದಾರೆ. ರಾದ್ಯಾಳ ಕೆನ್ನೆ ಗಿಂಡಿ ಮುದ್ದು ಮಾಡುತ್ತಿರುವ ದರ್ಶನ್ ಅವರ ಈ ವಿಡಿಯೊಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗಿವೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ನೋಡಿದ ನಟ ದರ್ಶನ್‌ ಅಭಿಮಾನಿಗಳು ರಿಷಬ್ ಶೆಟ್ಟಿ ನಮ್ಮ ಡಿ ಬಾಸ್‌ಗೆ ಒಂದು ಸಿನಿಮಾ ನಿರ್ದೇಶನ ಮಾಡಿದ್ರೆ ಎಷ್ಟು ಚೆನ್ನಾಗಿರುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ : ನಟ ರಿಷಬ್‌ ಶೆಟ್ಟಿ ಮಗಳು ರಾದ್ಯಾಗೆ ಮೊದಲ ವರ್ಷದ ಹುಟ್ಟುಹಬ್ಬ ಸಂಭ್ರಮ

ಇದನ್ನೂ ಓದಿ : ಮಮ್ಮೀಸ್ ಡೇ ಔಟ್ : ಮೋಡಿ ಮಾಡಿದ ಮೇಘನಾ ರಾಜ್‌ ಸರ್ಜಾ ಹೊಸ ವಿಡಿಯೋ

ಇದನ್ನೂ ಓದಿ : ಜಿಮ್‌ನಿಂದ ಹೃದಯಾಘಾತವಾಯ್ತಾ? ಸುಶ್ಮಿತಾ ಸೇನ್ ಹೇಳಿದ್ದೇನು ಗೊತ್ತಾ ?

ರಿಷಬ್‌ ಶೆಟ್ಟಿ ಜೀವನದಲ್ಲಿ ಮಗಳು ರಾದ್ಯಾಳ ಆಗಮನವಾದ ಬಳಿಕ ಅದೃಷ್ಟ ಬದಲಾಗಿ ಹೋಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅಭಿಮಾನಿಗಳು ಕಾಂತಾರ 2 ಸಿನಿಮಾ ಬೇಗನೆ ಬರಲಿ ಎಂದು ಕಾತರತೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಕಾಂತಾರ ಎರಡನೇ ಭಾಗದ ಕಥೆ ಬರೆಯುವಲ್ಲಿ ನಿರತರಾಗಿರುವ ರಿಷಬ್ ಶೆಟ್ಟಿ ಇದಕ್ಕಾಗಿ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ಹೊರಬಂದಿದ್ದಾರೆ. ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.

Rishabh Shetty – Darshan : Actor Rishabh Shetty attended daughter Raadya’s birthday with Darshan : Video went viral

RELATED ARTICLES

Most Popular