H3N2 guideline: H3N2 ಮಾಹಾಮಾರಿ ಆತಂಕ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೆಂಗಳೂರು: (H3N2 guideline) ಚೀನಾದಲ್ಲಿ ಹುಟ್ಟಿ ಇದೀ ಭೂಮಿಯನ್ನೇ ಆವರಿಸಿ ದೇಶ ದೇಶಗಳನ್ನೇ ಸ್ಮಶಾನವಾಗಿಸಿದ್ದ ಕೊರೊನಾ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಈ ಮಹಾಮಾರಿ ಕಾರಣದಿಂದ ಕಳೆದ ಎರಡು ಮೂರು ವರ್ಷಗಳಿಂದ ಜನರು ಜೀವಭಯದಲ್ಲೇ ಬದುಕು ಸಾಗಿಸುತ್ತಿದ್ದರು. ಇನ್ನೇನು ಕೊರೊನಾ ಮಾಯವಾಯ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಮತ್ತೊಂದು ಕೊರೊನಾ ರೂಪಾಂತರಿ ಜನರ ನೆಮ್ಮದಿಯನ್ನ ಹಾಳು ಮಾಡಲು ಸಜ್ಜಾಗಿದೆ.

ಕೊರೊನಾ ಹಾವಳ ಮುಗಿತು ಅಂದುಕೊಂಡಾಗೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ರೂಪಾಂತರ ತಾಳಿ ಜನರ ನಿದ್ದೆ ಗೆಡಿಸುತ್ತಿದೆ. ಆದರೆ ಇದೀಗ ಕೊರೊನಾ ಲಕ್ಷಣಗಳನ್ನೇ ಹೊಂದಿರುವ H3N2 ಮಾಹಾಮಾರಿ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲೂ ಇದರ ಕಂಟಕ ಎದುರಾಗಿದೆ. ಈಗಾಗಲೇ ರಾಜ್ಯದಲ್ಲಿ H3N2 ಮಾಹಾಮಾರಿ ವೈರಸ್‌ ನ ಇಪ್ಪತ್ಕಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ತುರ್ತು ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ(H3N2 guideline) ಗಳನ್ನು ಕೈಗೊಂಡಿದೆ.

H3N2 ತಡೆಗೆ ಈ ಸಲಹೆಗಳನ್ನು ಪಾಲಿಸಿ;
*. ಆಗಾಗ ಸೋಪಿನಿಂದ ಕೈಗಳನ್ನು ತೊಳೆಯುತ್ತಿರಿ.
*. ಕೆಮ್ಮುವಾಗ, ಸೀನುವಾಗ ಮುಖವನ್ನು ಮುಚ್ಚಿಕೊಳ್ಳಿ.
*. ರೋಗ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರಿಂದ ಸಲಹೆಗಳನ್ನು ಪಡೆದುಕೊಳ್ಳಿ.
*. ಬಿಸಿಲಿನಲ್ಲಿ ಛತ್ರಿಗಳನ್ನು ಬಳಸಿ ಓಡಾಎಇ.
*. ಆಂಟಿಬಯೋಟಿಕ್ಸ್‌ ಗಳನ್ನು ತೆಗೆದುಕೊಳ್ಳಬೇಡಿ.

ಮಾರ್ಗಸೂಚಿ(H3N2 guideline)ಯಲ್ಲೇನಿದೆ?
*. ILI/SARI ಪ್ರಕರಣಗಳ ಮೇಲೆ ಸೂಕ್ತ ನಿಗಾ ವಹಿಸಬೇಕು.
*. IDSP-IHIP ಪೋರ್ಟಲ್‌ ನಲ್ಲಿ ಕೇಸ್‌ ಮಾದರಿ ಸಂಗ್ರಹಣೆ.
*. ಅಗತ್ಯವಿರುವ ಪ್ರಮಾಣದಲ್ಲಿ ಔಷಧಿ ಸಂಗ್ರಹಿಸಿಡಲು ಸೂಚನೆ
*. ILI/SARI ಚಿಕಿತ್ಸೆ ವೇಳೆ ಮಾಸ್ಕ್‌, ಪಿಪಿಇ ಕಿಟ್‌ ಧರಿಸಬೇಕು
*. ಐಸಿಯು ವಾರ್ಡ್‌ ನ ವೈದ್ಯಕೀಯ ಸಿಬ್ಬಂದಿಗಳಿಗೆ ಫ್ಲೂ ಲಸಿಕೆ ಕಡ್ಡಾಯ
*. ಹೆಲ್ತ್‌ ಕೇರ್‌ ಫೆಸಿಲಿಟಿ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ
*. ಮೃತಪಟ್ಟವರ ಸ್ವಾಬ್‌ ವರದಿ VRDL ಪರೀಕ್ಷೆ ಮಾಡಬೇಕು
*. ಪ್ರತಿಜೀವಕಗಳ ಅನಗತ್ಯ ಬಳಕೆ ತಪ್ಪಿಸಬೇಕು
*. ಜನಜಾಗೃತಿ ವಿಷಯವನ್ನು ಆಸ್ಪತ್ರೆ ಆವರಣದಲ್ಲಿ ಲಗತ್ತಿಸಬೇಕು.

ಇದನ್ನೂ ಓದಿ : Masks mandatory for health workers : ರಾಜ್ಯದಲ್ಲಿ H3N2 ವೈರಸ್ ಆತಂಕ ಹಿನ್ನಲೆ: ಆರೋಗ್ಯ ಸಿಬ್ಬಂದಿಗಳಿಗೆ ಇಂದಿನಿಂದಲೇ ಮಾಸ್ಕ್ ಕಡ್ಡಾಯ

ಇನ್ನೂ ಹದಿನೈದು ವರ್ಷದೊಳಗಿನ ಮಕ್ಕಳಿಗೆ ವೈರಸ್‌ ಬೇಗ ಹರಡುತ್ತದೆ. ಇದರಿಂದ ಯಾವುದೇ ಪ್ರಾಣಾಪಾಯವಿಲ್ಲ.

ಇದನ್ನೂ ಓದಿ : H3N2 inFluenza A virus: H3N2 ಕೊರೊನಾಕ್ಕಿಂತಲೂ ಅಪಾಯಕಾರಿಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ?

ಇದನ್ನೂ ಓದಿ : Guidelines for H3N2 infection: H3N2 ಸೋಂಕಿನ ಬಗ್ಗೆ ಆತಂಕ ಬೇಡ: ಆರೋಗ್ಯ ಸಚಿವ ಸುಧಾಕರ್‌

H3N2 guideline: H3N2 pandemic concern: Guidelines published by Department of Health

Comments are closed.