ಸೋಮವಾರ, ಏಪ್ರಿಲ್ 28, 2025
HomeCinemaAsha Bhat Photoshoot Viral : ರಾಣಿಯಾದ್ರು ರಾಬರ್ಟ್ ಸುಂದರಿ : ಆಶಾ ಭಟ್...

Asha Bhat Photoshoot Viral : ರಾಣಿಯಾದ್ರು ರಾಬರ್ಟ್ ಸುಂದರಿ : ಆಶಾ ಭಟ್ ಪೋಟೋಶೂಟ್ ವೈರಲ್

- Advertisement -

ಟಾಲಿವುಡ್, ಹಾಲಿವುಡ್, ಬಾಲಿವುಡ್ ಸೇರಿದಂತೆ ಎಲ್ಲ ನಟಿಯರೂ ಹಾಟ್ ಹಾಟ್ ಪೋಟೋಶೂಟ್ ಮೂಲಕ ಸುದ್ದಿಯಾಗೋ ಹೊತ್ತಿನಲ್ಲಿ ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ಬೆಡಗಿ ಆಶಾ ಭಟ್ ರಾಯಲ್ ಲುಕ್ ನಲ್ಲಿ ಪೋಟೋಶೂಟ್ ನಲ್ಲಿ ಮಿಂಚೋ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಇತ್ತೀಚಿಗಷ್ಟೇ ನಟಿ ರೂಪಾ ಭಟ್ ತಮ್ಮ ಜೀವನದ ಮಾದರಿ ಮಹಿಳೆ ಸುಧಾಮೂರ್ತಿಯವರನ್ನು ಭೇಟಿ ಮಾಡಿದ ಖುಷಿಯನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಈಗ ರಾಯಲ್ ಲುಕ್ ನಲ್ಲಿ ಮಹಾರಾಣಿಯಂತೆ ಪೋಸ್ ನೀಡಿ ಗಮನ ಸೆಳೆದಿದ್ದಾರೆ. ಆಶಾ ಭಟ್ ಈ ಪೋಟೋಸ್ ಸೋಷಿಯಲ್ (Asha Bhat Photoshoot Viral) ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ರಾಜಮನೆತನದ ಕುವರಿಯಂತೆ ಆಶಾ ಭಟ್ ಕಡುಗೆಂಪಿನ ಸಲ್ವಾರ್ ಹಾಗೂ ಆಭರಣದಲ್ಲಿ ಮಿಂಚಿದ್ದಾರೆ. ತಲೆಬೊಟ್ಟು,ಡಿಸೈನರ್ ಉಡುಪಿನಲ್ಲಿ ರಾಜಮಹಲ್ ನಂತಹ ಸ್ಥಳದಲ್ಲಿ ಪೋಟೋಗೆ ಪೋಸ್ ನೀಡಿ ಗಮನ ಸೆಳೆದಿದ್ದಾರೆ. ಜಂಗ್ಲಿ ಸಿನಿಮಾದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಟ್ಟ ಆಶಾ ಭಟ್, ಕನ್ನಡದ ರಾಬರ್ಟ್ ಸಿನಿಮಾದಲ್ಲಿ ಸಖತ್ ಮಿಂಚಿದರು.

ಕನ್ನಡದ ಮೊದಲ ಸಿನಿಮಾ ದಲ್ಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೊತೆಯಾದ ಆಶಾ ಭಟ್, ತಮ್ಮ ನೀಳಕಾಯದ ಸೌಂದರ್ಯ ಹಾಗೂ ಮನಮುಟ್ಟುವ ನಟನೆಯಿಂದಲೇ ಕನ್ನಡಿಗರ ಮನಗೆದ್ದರು. ಸದ್ಯ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಗುಟ್ಟು ಬಿಟ್ಟುಕೊಡದಿರೋ ಆಶಾ ಭಟ್ ಪ್ರಿನ್ಸೆಸ್ ಲುಕ್ ನಲ್ಲಿ ಪೋಟೋ ತೆಗೆಸಿಕೊಳ್ಳುವ ಮೂಲಕ ಹೊಸ ಅವಕಾಶಕ್ಕಾಗಿ ಸಿದ್ಧತೆ ನಡೆಸಿದ್ದಾರೆ ಎನ್ನಲಾಗ್ತಿದೆ.

ಕೇವಲ ನಟನೆ ಮಾತ್ರವಲ್ಲ ಹಾಡು,ಡ್ಯಾನ್ಸ್ ಹಾಗೂ ಪೋಟೋ ಶೂಟ್ ಗಳ ಮೂಲಕವೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿರೋ ಆಶಾ ಭಟ್ ಇತ್ತೀಚಿಗೆ ದೇವರ ನಾಮ ಹಾಡೋ ಮೂಲಕ ಗಮನ ಸೆಳೆದಿದ್ದರು. ಮಿಸ್ ಸುಪ್ರಾ ಇಂಟರ್ನ್ಯಾಷನಲ್ ಗೌರವ ಗೆದ್ದ ಆಶಾ ಭಟ್ ಅಪ್ಪಟ ಮಲೆನಾಡಿನ ಭದ್ರಾವತಿಯ ಹುಡುಗಿ. ಹೊರಜಗತ್ತಿನ ಜೊತೆ ನಂಟು ಹೊಂದಿದ್ದರೂ ಆಶಾ ಭಟ್ ತಾಯ್ನೆಲದ ಸಾಂಸ್ಕೃತಿಕ ಸೊಗಡಿನ ಜೊತೆ ತಮ್ಮ ನಂಟು ಕಡಿದುಕೊಂಡಿಲ್ಲ.

ರಾಬರ್ಟ್ ಸುಂದರಿಯಾಗಿ ದರ್ಶನ್ ಜೊತೆ ಹಾಡಿ ಕುಣಿದ ಆಶಾ ಭಟ್ ಈಗ ಸುಂದರವಾದ ಪೋಟೋಗಳಲ್ಲಿ ಪಡ್ಡೆಗಳ ಮನಸೊರೆಗೊಂಡಿದ್ದಾರೆ.

ಇದನ್ನೂ ಓದಿ : Leena Manimekalai : ಸಿಗರೇಟ್​ ಸೇದುತ್ತಿರುವ ಶಿವ, ಪಾರ್ವತಿ : ಮತ್ತೊಂದು ವಿವಾದ ಸೃಷ್ಟಿಸಿದ ಲೀನಾ ಮಣಿಮೇಕಲೈ

ಇದನ್ನೂ ಓದಿ : Hope Kannada movie Released : ‘ಹೋಪ್’ ಜುಲೈ 8ಕ್ಕೆ ತೆರೆಗೆ, ಸ್ನೂಕರ್ ಪಟು ವರ್ಷ ಚೊಚ್ಚಲ ಸಿನಿಮಾ

Robert Actress Asha Bhat Photoshoot Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular