ಕೆಜಿಎಫ್ ಯಶಸ್ಸಿನ ಬಳಿಕ ಯಶ್ ಫ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಅಭಿಮಾನಿಗಳು ಹಾಗೂ ಇತರ ಸ್ಟಾರ್ ಗಳು ಯಶ್ ಮುಂದಿನ ಸಿನಿಮಾ ಯಾವುದು ( Yash newest film ) ಎಂಬ ಕುತೂಹಲ ಹೊಂದಿದ್ದರು. ಆದರೆ ಕೆಜಿಎಫ್-2 ಶೂಟಿಂಗ್ ಮುಕ್ತಾಯಗೊಂಡಿದ್ದರು ಯಶ್ ಮುಂದಿನ ಸಿನಿಮಾ ಅನೌನ್ಸ್ ಮಾಡದೇ ಸಸ್ಪೆನ್ಸ್ ಕಾಯ್ದುಕೊಂಡಿದ್ದರು. ಇದೀಗ ಯಶ್ ಹುಟ್ಟುಹಬ್ಬದ ಹೊತ್ತಿನಲ್ಲಿ ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಯಾವಾಗ ಎಂಬ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ನಿರ್ದೇಶಕ ನರ್ತನ್ ಜೊತೆ ಯಶ್ ಮತ್ತೊಮ್ಮೆ ಸಿನಿಮಾಗೆ ಸಜ್ಜಾಗಿದ್ದು ಆ ಮೂಲಕ ಯಶ್ 19 ನೇ ಸಿನಿಮಾ ಯಾರ ಜೊತೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಯಶ್ ಕಳೆದ ನಾಲ್ಕು ವರ್ಷಗಳಿಂದ ಕೆಜಿಎಫ್ 2 ದಲ್ಲಿ ತೊಡಗಿಸಿಕೊಂಡಿದ್ದ ಯಶ್ ಮುಂದಿನ ಸಿನಿಮಾ ಯಾವುದು ಎಂಬುದನ್ನು ಗುಟ್ಟಾಗಿ ಕಾಯ್ದುಕೊಂಡಿದ್ದರು. ಇತ್ತೀಚಿಗೆ ಕೇಳಿದ ಪ್ರಶ್ನೆಗೂ ಒಂದು ಸಿನಿಮಾ ಮುಗಿಸುವರೆಗೂ ಮುಂದಿನ ಸಿನಿಮಾದ ಬಗ್ಗೆ ನಾನು ಯೋಚ್ನೇ ಮಾಡೋದಿಲ್ಲ. ಮನೆಯಲ್ಲೂ ನನಗೆ ಒಟ್ಟೊಟ್ಟಿಗೆ ಕೆಲಸ ಮಾಡುವ ಅಥವಾ ದುಡಿಯುವ ಒತ್ತಡವಿಲ್ಲ ಎಂದಿದ್ದರು.
ಆದರೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶ್ ಮಾಡಿರೋ ನಿರ್ದೇಶಕ ನರ್ತನ್ ಹುಟ್ಟುಹಬ್ಬದ ಶುಭಾಶಯಗಳು ಯಶ್ ಸರ್.ನಿಮ್ಮನ್ನು ಸೆಟ್ ನಲ್ಲಿ ನೋಡಲು ಕಾತರನಾಗಿದ್ದೇನೆ . ಯಶ್ ನಟನೆಯ ೧೯ ನೇ ಸಿನಿಮಾದ ಯಶ್ 19 ಟೀಸರ್ ಮುಂದಿನ ವರ್ಷ ಯಶ್ ಬರ್ತಡೇಗೆ ರಿಲೀಸ್ ಆಗಲಿದೆ ಎಂದು ಟ್ವಿಟ್ ಮಾಡಿದ್ದಾರೆ. 2016 ರಲ್ಲಿ ರಿಲೀಸ್ ಆದ ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾದ ಬಳಿಕ ಯಶ್ ತಮ್ಮನ್ನು ತಾವು ಕೆಜಿಎಫ್ ನಲ್ಲಿ ತೊಡಗಿಸಿಕೊಂಡಿದ್ದರು. ಆರು ವರ್ಷಗಳಲ್ಲಿ ಯಶ್ ಯಾವ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ.
ಇನ್ನು ಯಶ್ ಬಹುನೀರಿಕ್ಷಿತ ಸಿನಿಮಾ ಕೆಜಿಎಫ್ 2 ಬಿಡುಗಡೆಗೆ ಸಿದ್ಧವಾಗಿದ್ದು, ಏಪ್ರಿಲ್ ೧೪ ರಂದು ರಿಲೀಸ್ ಆಗಲಿದೆ. ದೇಶದಾದ್ಯಂತ ರಿಲೀಸ್ ಆಗಲಿರೋ ಈ ಸಿನಿಮಾ ಗೆ ಯಶ್ ಅಭಿಮಾನಿಗಳು ಹಾಗೂ ಚಿತ್ರರಂಗವೇ ಕಾದಿದೆ. ಇನ್ನೇನು ಚಿತ್ರದ ಪ್ರಮೋಶನ್ ಕೂಡ ಆರಂಭವಾಗಲಿದ್ದು, ಚಿತ್ರ ಸಾಕಷ್ಟು ನೀರಿಕ್ಷೆ ಹುಟ್ಟಿಸಿದೆ. ಈ ಸಿನಿಮಾ ರಿಲೀಸ್ ಬಳಿಕ ಯಶ್ ನರ್ತನ್ ಜೊತೆ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರಂತೆ. ಇನ್ನು ಯಶ್ ನೆಕ್ಸ್ಟ್ ಬಾಲಿವುಡ್ ಗೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದ್ದು, ಸ್ಯಾಂಡಲ್ ವುಡ್ ನಲ್ಲೇ ಮುಂದಿನ ಸಿನಿಮಾಗೆ ಯಶ್ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ : ಬೀಚ್‌ನಲ್ಲಿ ಮೌನಿ ರಾಯ್ ಬಿಕನಿ ಅವತಾರಕ್ಕೆ ಫ್ಯಾನ್ಸ್ ಫಿದಾ
ಇದನ್ನೂ ಓದಿ : ಟಾಲಿವುಡ್ ನಟಿಯ ಸತ್ಯ ದರ್ಶನ : ನನಗೂ ಮಾನಸಿಕ ಸಮಸ್ಯೆ ಇತ್ತು ಎಂದ ಸಮಂತಾ
( Rocking star Yash newest film, Narthan direction after KGF )